ಹೊಸಪೇಟೆ

ಸ್ನೇಹ ಪೆಟ್ರೋಲ್ ಬಂಕ್ ಉದ್ಘಾಟನೆ

ಸ್ನೇಹ ಪೆಟ್ರೋಲ್ ಬಂಕ್ ಉದ್ಘಾಟನೆ

ಹೊಸಪೇಟೆ 22: ನಗರದ ಟಿ.ಬಿ.ಡ್ಯಾಮ್ ರಸ್ತೆಯ ಎ.ಪಿ.ಎಂ.ಸಿ. ಮಾರುಕಟ್ಟೆ ಪಕ್ಕದಲ್ಲಿರುವ "ಸ್ನೇಹ  ಪೆಟ್ರೋಲ್ ಬಂಕ್‍ನ್ನು ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಹೆಚ್.ಎನ್.ಮಹಮ್ಮದ್ ಇಮಾಮ್ ನಿಯಾಜಿರವರು ಸೋಮುವಾರ ದ್ವಿಚಕ್ರ ಹಾಗೂ ಕಾರ್‍ಗೆ  ಪೆಟ್ರೋಲ್ ಹಾಕುವ ಮೂಲಕ  ಉದ್ಘಾಟಿಸಿ ಶುಭ ಹಾರೈಸಿದರು.ಬೈಕ್‍ಗೆ ಪೆಟ್ರೋಲ್ ಹಾಕುವ ಮೂಲಕ  ಪೆಟ್ರೋಲ್ ಬಂಕ್‍ಗೆ  ಚಾಲನೆ ನೀಡಿ  ಮಾತನಾಡಿದ ಎನ್. ರಿಯಾಜ್ ಅಹಮ್ಮದ್ ಮಾಲೀಕತ್ವದಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಇಂಧನವನ್ಮು ಪೂರೈಸುವ ನಿಟ್ಟಿನಲ್ಲಿ ಪೆಟ್ರೋಲ್ ಬಂಕ್ ಪ್ರಾರಂಭಗೊಂಡಿದೆ, ಹೊಸಪ ತಂತ್ರಜ್ಞಾನದೊಂದಿಗೆ ಇಂಧನ ತುಂಬಿಸುವ ವ್ಯವಸ್ಥೆಯೊಂದಿಗೆ ಬಂಕ್ ಗೆ ಬರುವ ಗ್ರಾಹಕರಿಗೆ ಕುಡಿಯವ ಶುದ್ಧ ನೀರು, ಶೌಚಾಲಯ, ಸಿ.ಸಿ.ಕ್ಯಾಮರ್ ವಾಹನಗಳಿಗೆ ಗಾಳಿ ಎಲ್ಲಾ ತರಹದ ಕ್ರೆಡಿಟ್ ಡೆಬಿಟ್ ಸೌಲಭ್ಯಗಳ ವ್ಯವಸ್ಥೆಯೊಂದಿಗೆ ಬಂಕ್ ಚಾಲನೆಗೊಂಡಿದ್ದು ಗ್ರಾಹಕರು ಇದರ ಸೇವೆಯನ್ನು ಪಡೆಯಬೇಕು ಎಂದು ಹೇಳಿದರು.ಆಕಿಬ್, ಅಂಬಣ್ಣ, ತಾರಳ್ಳಿ ಹನುಮಂತಪ್ಪ, ರಾಮು ಹಾಗೂ ಬಂಕ್‍ನ ಸಿಬ್ಬಂದಿ ಉಪಸ್ಥಿತರಿದ್ದರು.


ಸುದ್ದಿ ಓದಿ