ಚಿಕ್ಕೋಡಿ

ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟನೆ

ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟನೆ
ಚಿಕ್ಕೋಡಿ: ಇಲ್ಲಿನ ಕೇಶವ ಕಲಾ ಭವನದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಸಚಿವ ಕೆ.ಎಸ್‌.ಈಶ್ವರ​‍್ಪ ಉದ

ಚಿಕ್ಕೋಡಿ 12: ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಬಿಜೆಪಿ ಪದಾಧಿಕಾರಿಗಳು, ಕಾರ್ಯರ್ಕರು ತಮ್ಮ ಜೀವವನ್ನು ಪಣಕ್ಕಿಟ್ಟು ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರಿಂದಲೇ ಬಿಜೆಪಿ ಮೇಲೆ ಜನತೆಯ ವಿಶ್ವಾಸ ಬಲಗೊಳ್ಳಲು ಕಾರಣವಾಗಿದೆ  ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರ​‍್ಪ ಹೇಳಿದರು.  

ಇಲ್ಲಿನ ಕೇಶವ ಕಲಾ ಭವನದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೊರೊನಾ  ಮೊದಲ ಹಾಗೂ ಎರಡನೇಯ ಅಲೆಯಲ್ಲಿ ಯಾರೂ ಮನೆಯಿಂದ ಹೊರಗೆ ಬರಲಾರದಂತಹ ಸಮಯದಲ್ಲಿ ಬಿಜೆಪಿಯ ಸಾವಿರಾರು ಕಾರ್ಯಕರ್ತರು, ಪದಾಧಿಕಾರಿಗಳು ತನು, ಮನ, ಧನದ ಮೂಲಕ ಕರೋನಾ ರೋಗಕ್ಕೆ ತುತ್ತಾದ ರೋಗಿಗಳಿಗೆ ಹಾಗೂ ರೋಗಿಗಳ ಕುಟುಂಬದ ಸದಸ್ಯರಲ್ಲಿ ನೈತಿಕ ಧೈರ್ಯ ತುಂಬುವ ಕೆಲಸ ಮಾಡಿದ್ದಲ್ಲದೆ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಸೇರಿದಂತೆ ಅನೇಕ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದ ಅವರು ಈ ಎಲ್ಲ ಕಾರ್ಯಕರ್ತರು, ಪದಾಧಿಕಾರಿಗಳು ಅಭಿನಂದನಾರ್ಹರು ಎಂದು ಹೇಳಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಜರಾಯಿ ಹಾಗೂ ವಕ್ಫ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಕೊವೀಡ್ ಸಾಂಕ್ರಾಮಿಕ ರೋಗದ ಮೊದಲ ಹಾಗೂ ಎರಡನೇ ಅಲೆಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜನರಿಗೆ ಉತ್ತಮ ಆರೋಗ್ಯ ಹಾಗೂ ಇನ್ನಿತರ ಅವಶ್ಯಕ ಸೇವೆಗಳನ್ನು ಒದಗಿಸಿವೆ ಎಂದ ಅವರು ಮೂರನೇ ಅಲೆಯ ಮುನ್ಸೂಚನೆ ಕೂಡ ಕಂಡು ಬರುತ್ತಿದ್ದು, ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದರು.  

ವಿಧಾನ ಪರಿಷತ್  ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ,  ಪ್ರಧಾನಿ ಮೋದಿ ಸರಕಾರ ಇಡೀ ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಮೊದಲ ಹಾಗೂ ಎರಡನೇ ಅಲೆಯನ್ನು ಎದುರಿಸಿದೆ ಅಲ್ಲದೆ ರೋಗವನ್ನು ನಿರ್ಮೂಲನೆ ಮಾಡುವ ದೃಷ್ಟಿಯಿಂದ ಲಸಿಕೆಗಳನ್ನು ಗ್ರಾಮ ಮಟ್ಟದಲ್ಲೂ ತಲುಪಿಸುವ ಮೂಲಕ 50 ಕೋಟಿಗೂ ಅಧಿಕ  ಭಾರತೀಯರಿಗೆ ವ್ಯಾಕ್ಸಿನ್ ಉಚಿತವಾಗಿ ಒದಗಿಸಿರುವುದು ದೊಡ್ಡ ಸಾಧನೆ ಎಂದರು.  

ಅಧ್ಯಕ್ಷತೆಯನ್ನು ಚಿಕ್ಮೋಡಿ ಜಿಲ್ಲಾ ಅಧ್ಯಕ್ಷ ಡಾ.ರಾಜೇಶ್ ನೇರ್ಲಿ ವಹಿಸಿದ್ದರು. ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಖೇತಗೌಡರ ಸಂಘಟನಾತ್ಮಕ ಜಿಲ್ಲಾ ಸಮಿತಿಯಿಂದ ಸಚಿವ ಈಶ್ವರ​‍್ಪನವರನ್ನು ಸತ್ಕರಿಸಿದರು. ಜಿಲ್ಲಾ ಸಹ ಪ್ರಭಾರಿ ಹಾಗೂ ರಾಜ್ಯ ಕಾರ್ಯದರ್ಶಿ ಉಜ್ವಲಾ  ಬಡವಣಾಚೆ, ನಿಪ್ಪಾಣಿ ನಗರ ಸಭಾ ಅಧ್ಯಕ್ಷ ಜಯವಂತ ಭಾತಲೆ, ಚಿಕ್ಕೋಡಿ ಪುರಸಭಾಧ್ಯಕ್ಷ ಪ್ರವೀಣ ಕಾಂಬಳೆ, ಮಾಜಿ ಸಂಸದ ಅಮರಸಿಂಹ ಪಾಟೀಲ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪಾ ಬೆಂಡವಾಡೆ, ಆರೋಗ್ಯ ಅಭಿಯಾನ ಜಿಲ್ಲಾ ಸಂಯೋಜಕ ಪ್ರಸಾದ ಪಚಂಡಿ, ದೀಪಕ ಪಾಟೀಲ ಹಾಗೂ ಚಿಕ್ಕೋಡಿ ಜಿಲ್ಲಾ ಮಟ್ಟದ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಆರೋಗ್ಯ ಅಭಿಯಾನ ಸ್ವಯಂ ಸೇವಕರು ಉಪಸ್ಥಿತರಿದ್ದರು. ಇದೇ ವೇಳೆ ಡಾ.ರವಿ ಸಂಕ ಆರೋಗ್ಯ ಅಭಿಯಾನ ಕುರಿತು ಮಾತನಾಡಿದರು. ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಶಾಂಭವಿ ಅಶ್ವಥಪುರ ವಂದೇ ಮಾತರಂ ಗೀತೆ ಹಾಡಿದರು. ಆರ್‌.ಎಸ್‌.ಎಸ್ ನ ನರಸಿಂಹ ಕುಲಕರ್ಣಿ ಮೂರನೇ ಅಲೆ ಮುಂಜಾಗೃತೆಯ ಕುರಿತಾಗಿ ಹಾಗೂ ಡಾ.ರಾಜೇಶ್ ನೇರ್ಲಿ ಸಂಘಟನಾತ್ಮಕ ಗೋಷ್ಟಿಯಲ್ಲಿ ಮಾತನಾಡಿದರು. ಮಾಧ್ಯಮ ವಿಭಾಗದ ರಮೇಶ ಕುಮಾರ ಘಂಟಿ ನಿರೂಪಿಸಿ ದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ ಸ್ವಾಗತಿಸಿದರು, ನಿಂಗಪ್ಪಾ ಖೋಕಲೆ ವಂದಿಸಿದರು. 


ಸುದ್ದಿ ಓದಿ