ಶಿಗ್ಗಾವ್

ಡೈಮಂಡ ಜೆಸಿಐ ಸಪ್ತಾಹ 2024 ರ ಉದ್ಘಾಟನಾ ಸಮಾರಂಭ

ಡೈಮಂಡ ಜೆಸಿಐ ಸಪ್ತಾಹ 2024 ರ ಉದ್ಘಾಟನಾ ಸಮಾರಂಭ

ಶಿಗ್ಗಾವಿ 11 : ಡೈಮಂಡ ಜೆಸಿಐ ಸಪ್ತಾಹ 2024 ರ ಉದ್ಘಾಟನಾ ಸಮಾರಂಭ ಹಾಗೂ ಸಪ್ತಾಹದ ಮೊದಲನೇಯ ದಿನದ ಕಾರ್ಯಕ್ರಮ ಅನುಭವಗಳ ಮೆಲುಕು  ಹಾಕುವಿಕೆ ಹಾಗೂ ಧನ್ಯವಾದ ಪತ್ರಗಳನ್ನು ನೀಡುವ ಕಾರ್ಯಕ್ರಮ ಮತ್ತು ಸರ್ಕಾರಿ ಸೇವೆಯಲ್ಲಿ ಅತೀ ಹೆಚ್ಚು ಕಾರ್ಯನಿರ್ವಹಿಸಿದ ಹಿರಿಯರಿಗೆ ಸನ್ಮಾನ, ರಾಜ್ಯ ಪ್ರಶಸ್ತಿ ಪಡೆದವರಿಗೆ ಸನ್ಮಾನ ಕಾರ್ಯಕ್ರಮಗಳು ನಗರದ ವಿಠ್ಠಲ ಹರಿಮಂದಿರದ ಸಭಾಂಗಣದಲ್ಲಿ ಜರುಗಿತು.  

ಪ್ರಾಸ್ತಾವಿಕವಾಗಿ ಮಾತನಾಡಿದ ಜೆಸಿ ಡಿ. ಆರ್‌. ತೋಟಿಗೇರ ಜೆಸಿಐ ಸಪ್ತಾಹದ ಏಳು ದಿನಗಳ ಕಾರ್ಯಕ್ರಮಗಳನ್ನು ವಿವರಿಸಿ ಅದರೊಂದಿಗೆ ಜೆಸಿಐನ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ನಾನಿಂದು ಒಳ್ಳೆಯ ತರಬೇತುದಾರ, ಮಾತುಗಾರ ಆಗಿದ್ದೇನೆ ಎಂದರೆ ಅದಕ್ಕೆ ಜೆಸಿಐ ಸಂಸ್ಥೆ ಕಾರಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ಜೆಸಿ ಚಂದ್ರಿಕಾ ಪಾಟೀಲ ವಹಿಸಿದ್ದರು. 

ಹಿರಿಯರಾದ ಜೆಸಿಐ ಸೆನೆಟರ್ ಜಿ ಎನ್ ಯಲಿಗಾರ ಜೆಸಿಐನಲ್ಲಿ ತಮ್ಮ ಅನುಭವ ಹಂಚಿಕೊಂಡ ಶಿಗ್ಗಾಂವ ಘಟಕ ಹುಟ್ಟಿದ್ದು ಹಾಗೂ ನಡೆದು ಬಂದ ದಾರಿ ಅದರ ಬಗ್ಗೆ ತಿಳಿಸಿದರು. ಹಾಗೂ ಸಂಘಟನೆಗೆ ಕಾರಣರಾದ ದಿ. ಡಾ. ಎಚ್‌. ಜಿ. ಪಾಟೀಲರನ್ನು ಈ ಸಮಯದಲ್ಲಿ ನೆನಪಿಸಿಕೊಂಡರು. 

ಈ ಸಂದರ್ಭದಲ್ಲಿ ಜೆಸಿ ಕೆ ಬಿ ಚನ್ನಪ್ಪ, ಜೆಸಿ ಡಾ. ಡಿ. ಎ. ಗೊಬ್ಬರಗುಂಪಿ, ಜೆಸಿ ರಾಘವೇಂದ್ರ ದೇಶಪಾಂಡೆ, ಜೆಸಿ ಬಸವರಾಜ ಬಸರೀಕಟ್ಟಿ, ಜೆಸಿ ಅನಿತಾ ಗೊಬ್ಬರಗುಂಪಿ ತಮ್ಮ ಅನುಭವಗಳನ್ನು ಹಂಚಿಕೊಂಡರು.  

ಅಧ್ಯಕ್ಷೀಯ ಭಾಷಣ ಮಾಡಿದ ಘಟಕಾಧ್ಯಕ್ಷೆ ಜೆಸಿ ರಂಜನಾ ಚಿಕ್ಕೋರ್ಡೆ ಮಾತನಾಡಿ ಈ ಕಾರ್ಯಕ್ರಮ ಅಪರೂಪದ ಕಾರ್ಯಕ್ರಮ ಇದರಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು. ಜೆಜೆಸಿ ಪ್ರಕೃತಿ ಎಲ್ಲ ಹಿರಿಯ ಜೆಸಿಗಳಿಗೆ ಕೃತಜ್ಞತಾ ಪತ್ರ ನೀಡಿದಳು. ಜೆಸಿ ರಂಜನಾ ಸ್ವಾಗತಿಸಿದರು. ಜೆಸಿ ಸಂತೋಷ ವಂದಿಸಿದರು. 


ಸುದ್ದಿ ಓದಿ