ಬಳ್ಳಾರಿ

ಜಿಲ್ಲಾ ಕ್ಷತ್ರಿಯ ಮರಾಠ ಸಂಘದ ಉದ್ಘಾಟನೆ ಸಮಾರಂಭ

ಜಿಲ್ಲಾ ಕ್ಷತ್ರಿಯ ಮರಾಠ ಸಂಘದ ಉದ್ಘಾಟನೆ ಸಮಾರಂಭ

ಬಳ್ಳಾರಿ ಜಿಲ್ಲಾ ಕ್ಷತ್ರಿಯ ಮರಾಠ ಸಂಘದ ಉದ್ಘಾಟನೆ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬಳ್ಳಾರಿ ನಗರದ ಹೊಯ್ಸಳ ಹೋಟೆಲ್ ಸಭಾಂಗಣದಲ್ಲಿ ಫೆ. 16ರಂದು ಸಂಜೆ 6.30ಕ್ಕೆ ನೆರವೇರಿತು.  

ಸಂದೀಪ್ ಸೂರ್ಯವಂಶಿ - ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬಳ್ಳಾರಿ ಪ್ರಾದೇಶಿಕ ವಿಭಾಗ ಇವರು ಉದ್ಘಾಟಿಸಿ ಮಾತನಾಡುತ್ತ ಮರಾಠ ಸಮುದಾಯದ ಪರಂಪರೆ, ರಾಷ್ಟಭಕ್ತಿ, ದೇಶಸೇವೆ ಅಗಣ್ಯ ಎಂದು ಸ್ಮರಿಸುತ್ತಾ ಅವರ ಬಾಲ್ಯದ ದಿನಗಳಲ್ಲಿ ಅವರಿಗಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಹಿರಿಯ ಋಖ ಅಧಿಕಾರಿ ಅತಿಥಿಯಾಗಿ ಭಾಗವಹಿಸಿದ್ದರಿಂದ ಆ ಪ್ರೇರಣೆಯೊಂದಿಗೆ ಇಂದು ನಾನು ಸತತ ಪ್ರಯತ್ನದೊಂದಿಗೆ  38 ಜೊತೆಗೆ ತೇರ್ಗಡೆ ಹೊಂದಿ ಋಖ ಸೇವೆಗೆ ಅಣಿಯಾಗಿದ್ದೇನೆ ಎಂದು ಅವರ ಮಾತುಗಳನ್ನು ಹಂಚಿಕೊಳ್ಳುತ್ತಾ, ವಿನೋದ್ ಎಂ ಚವ್ಹಾಣ್ ಇವರ ಅಧ್ಯಕ್ಷತೆ ಯಲ್ಲಿ ಬಳ್ಳಾರಿ ಜಿಲ್ಲಾ ಕ್ಷತ್ರಿಯ ಮರಾಠ ಸಂಘ ಮತ್ತಷ್ಟು ಸೇವೆಗೈಯ್ಯಲಿ ಎಂದು ಆಶಿಸಿದರು. ಹಾಗೆಯೇ ಪ್ರತಿಭಾ ಪುರಸ್ಕಾರ ಸ್ವೀಕರಿಸುವ ಸಮಾಜದ ಮಕ್ಕಳಿಗೆ ಶುಭ ಹಾರೈಸಿದರು.  

ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಎಂ ಶಿವಾಜಿರಾವ್ - ಸರ್ಕಾರಿ ನೌಕರರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರು, ಆರ್‌.ಎಲ್‌. ಜಾಧವ್ - ಪ್ರಾಂಶುಪಾಲರು ಭವಾನಿ ಲಲಿತ ಕಲಾ ಮಂದಿರ, ಮುರಾರಿ ರಾವ್ ಜಾಧವ್, ಶಂಕರರಾವ್ ಗಾಯಕ್ವಾಡ್, ಎಂ.ಬಾಬುರಾವ್ ಶಿಂಧೆ ಮತ್ತು ಅಧ್ಯಕ್ಷತೆಯನ್ನು ವಿನೋದ್‌.ಎಂ.ಚವ್ಹಾಣ್ ಅವರು ವಹಿಸಿದ್ದರು. 

2021-22ನೇ ಶೈಕ್ಷಣಿಕ ಸಾಲಿನ ಎಸ್‌.ಎಸ್‌.ಎಲ್‌.ಸಿ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ಶೇ.85ಕ್ಕೂ ಹೆಚ್ಚು ಅಂಕಗಳಿಸಿದ 25  ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.  

ಪ್ರಾಸ್ತಾವಿಕವಾಗಿ ಮಾತನಾಡಿದ ವಿನೋದ್ ಎಂ ಚವ್ಹಾಣ್ ಇವರು ಜಿಲ್ಲೆಯ ಮರಾಠ ಜನಾಂಗದ ಹಾಗೂ ಸಮುದಾಯದ ಅಭ್ಯುದಯಕ್ಕಾಗಿ ಈ ಸಂಸ್ಥೆ ಕಾರ್ಯ ನಿರ್ವಹಿಸಲಾಗುತ್ತದೆ ಮತ್ತು ಇದೇ ​‍್ರ​‍್ರಥಮ ಬಾರಿಗೆ ಮರಾಠ ಸಮುದಾಯದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.  

ವೇದಿಕೆ ಕಾರ್ಯಕ್ರಮದ ಮುಂಚೆ ಇಂದ್ರಾಣಿ ನಾಟ್ಯ ಕಲಾ ಟ್ರಸ್ಟ್ವಯಿಂದ ಸಮೂಹ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. 

ಜೊತೆಗೆ ಸಂಘದ ನೂತನ ಪದಾಧಿಕಾರಿಗಳಿಗೆ ಅಭಿನಂದಿಸಲಾಯಿತು. ಸಂಘದ ಉಪಾಧ್ಯಕ್ಷರಾಗಿ ರಮೇಶ್ ಕೋರೆ, ರಾಮ್ ಜಾಧವ್, ಅಂಬೋಜಿರಾವ್‌. ಪ್ರಧಾನ ಕಾರ್ಯದರ್ಶಿಗಳಾಗಿ ಅಂಬರೇಶ್ ಘೋರೆ​‍್ಡ, ಶರದ್ ಶಿಂಧೆ, ಕಾರ್ಯದರ್ಶಿಗಳಾಗಿ ಆನಂದ್ ರಾವ್, ಸುನಿಲ್ ನಲವಡೆ, ಅಮರ್ ಬಾಬರ್, ಅಶೋಕ್ ಚವ್ಹಾಣ್ ಮತ್ತು ಯುವ ಪದಾಧಿಕಾರಿಗಳಾಗಿ ಶಂಕರ್, ಅಭಿಷೇಕ್ ಜಾಧವ್, ಭೀಮೇಶ್ ನಲವಡೆ,  ನವೀನ್, ರಾಘವೇಂದ್ರ, ಉಮೇಶ್, ವೆಂಕಟೇಶ್ ಇನ್ನಿತರರು ತಮ್ಮ ಜವಾಬ್ದಾರಿಯನ್ನು ಸ್ವೀಕರಿಸಿಕೊಂಡರು. ಕಾರ್ಯಕ್ರಮವನ್ನು ವಸುಧಾ ಅವರು ನಿರೂಪಿಸಿದರು. 


ಸುದ್ದಿ ಓದಿ