ಹೊಸಪೇಟೆ

ಅಂಜುಮನ್ ಧಾರ್ಮಿಕ ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮ

ಅಂಜುಮನ್ ಧಾರ್ಮಿಕ ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮ

ಹೊಸಪೇಟೆ 20:  ಶನಿವಾರದಂದು ವಿಜಯನಗರ ಜಿಲ್ಲೆ, ಹೊಸಪೇಟೆಯ ಅಂಜುಮನ್ ಶಾದಿಮಹಲ್ ನಲ್ಲಿ ಅಂಜುಮನ್ ಕಿದ್ಮತೆ ಈ ಇಸ್ಲಾಂ ಹೊಸಪೇಟೆ ಇವರ ನೇತೃತ್ವದಲ್ಲಿ  ಅಂಜುಮನ್ ಮದುವೆ ಮೈತ್ರಿ ಕೇಂದ್ರ, ಅಂಜುಮನ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ತರಬೇತಿ ಕೇಂದ್ರ, ಅಂಜುಮನ್ ಧಾರ್ಮಿಕ ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.     

ಅಂಜುಮನ್ ಕಿದ್ಮತೆ ಇಸ್ಲಾಂ ಹೊಸಪೇಟೆ ಸಮಿತಿಯ ಅಧ್ಯಕ್ಷರಾದ ಹೆಚ್ ಎನ್ ಮೊಹಮ್ಮದ್ ಇಮಾಮ್ ನಿಯಾಜಿ ರವರು ಮಾತನಾಡಿ ಅಂಜುಮನ್  ಸಂಸ್ಥೆಯ ಸ್ಥಾಪನೆಯ ಉದ್ದೇಶವನ್ನು ಕುರಿತು ಮಾತನಾಡಿ ಸಮಾಜದಲ್ಲಿ ಒಳ್ಳೆಯ ಶಿಕ್ಷಣ ಹಾಗು ಒಳ್ಳೆಯ ಆರೋಗ್ಯ ಹಾಗೂ ಒಳ್ಳೆಯ ಸಂಸ್ಕೃತಿಯನ್ನು  ಕಲಿಸುವುದರ ಜೊತೆ ಜೊತೆಗೆ ಸಮಾಜದ ಒಳಿತನ್ನು ಬಯಸುವ ಇನ್ನು ಇತರೆ ಹಲವಾರು ಅಭಿವೃದ್ಧಿ  ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರನ್ನು ಜಾಗೃತಗೊಳಿಸುವುದಾಗಿರುತ್ತದೆ, 

ಈ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ಕೇವಲ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳಿಂದ ಸಾಧ್ಯವಿಲ್ಲ ಸಮಾಜದ ಮುಖಂಡರೊಂದಿಗೆ ಇನ್ನು ಇತರೆ ಹಲವಾರು ಸಮಾಜದ ಮುಖಂಡರುಗಳು ಸಹ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಹಕರಿಸಿರುತ್ತಾರೆ, ಈ ನಿಟ್ಟಿನಲ್ಲಿ ಇನ್ನು ಮುಂದುವರೆದು ಜನರಿಗೆ ಅನುಕೂಲ ವಾಗಲೆಂದು ಅಂಜುಮನ್ ಮದುವೆ ಮೈತ್ರಿ ಕೇಂದ್ರ, ಅಂಜುಮನ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ತರಬೇತಿ ಕೇಂದ್ರ, ಅಂಜುಮನ್ ಧಾರ್ಮಿಕ ಗ್ರಂಥಾಲಯದ ಉದ್ಘಾಟನೆಯನ್ನು ಮಾಡಿದ್ದು ಸಮಾಜದ ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.  

ಅಂಜುಮನ್ ಕಮಿಟಿ  ಉಪಾಧ್ಯಕ್ಷರಾದ ಎಮ್‌.ಎಮ್‌. ಫೈರೋಜ್ ಖಾನ್, ಕಾರ್ಯದರ್ಶಿಯಾದ ಅಬೂಬಕ್ಕರ್ ಅಶ್ರಫಿ, ಖಜಾಂಚಿಯಾದ ಅನ್ಸರ್ ಭಾಷ, ಜಂಟಿ ಕಾರ್ಯದರ್ಶಿಯಾದ ಡಾಽಽ ದುರ್ವೆಶ್ ಮೈನುದ್ದೀನ್, ಸದ್ಯಸರಾದ ಸದ್ದಮ್ ಹುಸೇನ್, ಮೊಹಮ್ಮದ್ ಮೋಸಿನ್, ಗುಲಾಮ್ ರಸೂಲ್, ಹಾಗೂ ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ