ಶಿಗ್ಗಾವ್

ಎಸ್‌ಎಸ್‌ಎಸ್ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಎಸ್‌ಎಸ್‌ಎಸ್ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಶಿಗ್ಗಾವಿ 31: ನಮ್ಮ ಭಾರತವು ಭಾವಾನಾತ್ಮಕ ದೇಶವಾಗಿದ್ದು, ಬದುಕಿನ ಮೌಲ್ಯಗಳನ್ನು ತಾರ್ಕಿಕವಾಗಿ ವಿವೇಚಿಸಿ, ಯುವಕರು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಜೊತೆಗೆ ಬದುಕನ್ನು ರೂಪಿಸುವ ಶಿಕ್ಷಣ ಪಡೆದು, ಅಸಹಾಯಕರಿಗೆ ಆಸರೆಯಾಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಾ.ಎ ಎಚ್‌. ಶಿವಯೋಗಿಸ್ವಾಮಿ ಹೇಳಿದರು. 

ಪಟ್ಟಣದ ಶ್ರೀ ರಂಭಾಪುರಿ ಪದವಿ ಕಾಲೇಜಿನಲ್ಲಿ ವಿವಿಧ  ಸಂಘಗಳ ಒಕ್ಕೂಟ ಹಾಗೂ ಎಸ್‌ಎಸ್‌ಎಸ್ ಕಾರ್ಯ ಚಟುವಟಿಕೆಗಳ ಉಧ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದ ಅವರು, ಬದುಕಿನ ಕಠೋರ ಪಾಠಗಳನ್ನು ಸಮಾಜ ಕಲಿಸುತ್ತದೆ, ಜನಪರವಾದ ಚಿಂತನೆಗಳಿಂದ, ಸಮಾಜ ಮುಖಿ ಅಭ್ಯಾಸದಿಂದ ಮಾತ್ರ ವಿದ್ಯಾರ್ಥಿಗಳು ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು. 

ನೂತನ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎಸ್ ಟಿ ಬಾಗಲಕೋಟಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ವೃತ್ತಿ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕು. ಶಿಕ್ಷಣ ಬರಿ ಕಾಗದದ ದಾಖಲೆಯಾಗದೆ, ಬದುಕನ್ನು ರೂಪಿಸುವ ಆಧುನಿಕ ಕೌಶಲ್ಯಗಳನ್ನು ರೂಢಿಸಿಕೊಂಡಾಗ ಮಾತ್ರ ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಮುನ್ನಡೆಯಲು ಸಾಧ್ಯವಾಗುತ್ತದೆ, ಪ್ರತಿಯೊಬ್ಬರು ತಮ್ಮ ಪಾಲಿನ ಕರ್ತವ್ಯವನ್ನು ಪೂರೈಸಿ ಸಮಾಜದ ಸಾಮುದಾಯಕ ಚಟುವಟಿಕೆಯಲ್ಲಿ ಪಾಲ್ಗೊಂಡಾಗ ಮಾತ್ರ ಯುವಕರು ಸದೃಡನಾಡು ಕಟ್ಟಬಲ್ಲರು ಎಂದರು.  

ಅಧ್ಯಕ್ಷತೆಯನ್ನು ಶ್ರೀಪೀಠದ ಕಾರ್ಯದರ್ಶಿ ಎಸ್ ಬಿ ಹಿರೇಮಠರವರು ವಹಿಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಹೊಸ ಕೋರ್ಸಗಳನ್ನು ಮಹಾವಿದ್ಯಾಲಯದಲ್ಲಿ ಪರಿಚಯಿಸಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ದೊರೆಯುವಂತೆ ಮಾಡುವುದೇ ನಮ್ಮ ಸಂಸ್ಥೆಯ ಪ್ರಮುಖ ಧ್ಯೇಯ ಎಂದರು. 

ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಪ್ರೊ. ಪಿ ಸಿ ಹಿರೇಮಠ ಮಾತನಾಡಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನಕೊಟ್ಟು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು ಎಂದರು. 

ಪ್ರಾಚಾರ್ಯ ಬಿ ವಾಯ್ ತೊಂಡಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಫ್ ಎಸ್ ಶಿವಣ್ಣವರ, ಒಕ್ಕೂಟದ ಕಾರ್ಯಾಧ್ಯಕ್ಷ ಡಾ. ಆರ್ ಸಿ ದಾದುಗೌಡರ, ಪ್ರೋ. ಶ್ರೀಶೈಲ್ ಹುದ್ದಾರ ಸೇರಿದಂತೆ ಮಹಾವಿದ್ಯಾಲಯದ ಉಪನ್ಯಾಸಕರು, ಸಿಬ್ಬಂದಿಯವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ