ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ಕಾಂಗ್ರೇಸ ಪತಾಕೆ ಹಾರಿಸುವುದು ಶತಸಿದ್ದ
ಶಿಗ್ಗಾವಿ : ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ಕಾಂಗ್ರೇಸ ಪತಾಕೆ ಹಾರಿಸುವುದು ಶತಸಿದ್ದ ಎಂದು ನೂತನ ಶಿಗ್ಗಾವಿ ಬ್ಲಾಕ್ ಕಾಂಗ್ರೇಸ ಸಮಿತಿ ಅಧ್ಯಕ್ಷ ಶಂಭುಲಿಂಗಪ್ಪ ಕಲ್ಲಪ್ಪ ಆಜೂರ ಹೇಳಿದರು.
ಪಟ್ಟಣದ ಪರೀವೀಕ್ಷಣಾ ಮಂದಿರದಲ್ಲಿ ನೆಡೆದ ಸನ್ಮಾನ ಹಾಗೂ ಸುದ್ದಿಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈಗ ರಾಜ್ಯದೆಲ್ಲೆಡೆ ಕಾಂಗ್ರೇಸ ಅಲೆ ಇದ್ದು ಬರುವ ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತಗಳಲ್ಲಿ ಕಾಂಗ್ರೇಸ ಜಯಬೇರಿ ಸಾಧಿಸಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೇಸ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವುದು ಸತ್ಯ ಏಕೆಂದರೆ ಈಗಿನ ಕೆಲವು ವಿಧಾನಸಭೆ, ವಿಧಾನ ಪರಿಷತ್ತ, ನಗರಸಭೆ, ಪುರಸಭೆ ಚುನಾವಣೆಗಳಲ್ಲಿ ಮತದಾರ ಕಾಂಗ್ರೇಸಗೆ ಸ್ಪಷ್ಟ ಬಹುಮತ ನೀಡಿದ್ದು ಮುಂದಿನ ಚುನಾವಣೆಯ ದಿಕ್ಸೂಚಿಯಾಗಿದೆ ಎಂದರು.
ನನಗೆ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರು ನಿನ್ನೆ ನೆಡೆದ ಜೂಮ್ ಸಭೆಯಲ್ಲಿ ಬೇಗ ಅಧಿಕಾರ ಹಸ್ತಾಂತರ ಮಾಡಿಕೊಂಡು ಜನೇವರಿ 26 ರೊಳಗೆ ಸದಸ್ಯತ್ವ ಅಭಿಯಾನವನ್ನು ತಾಲೂಕಿನಲ್ಲಿ ಮುಗಿಸಬೇಕು ಎಂದು ಹೇಳಿದ ಹಿನ್ನಲೆಯಲ್ಲಿ ಇಂದು ತಾಲೂಕಿನ 4 ಜಿಲ್ಲಾ ಪಂಚಾಯತ ಕ್ಷೇತ್ರ ಹಾಗೂ 28 ಗ್ರಾಮ ಪಂಚಾಯತಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಆದ್ಯತೆಯ ಮೇಲೆ ಸದಸ್ಯತ್ವ ಅಭಿಯಾನ ಮಾಡಿ ಯಸಸ್ಸುಗೋಳಿಸಬೇಕು ಎಂದು ಸಂಕಲ್ಪ ಹೊಂದಿದ್ದೇನೆ ಕಾರಣ ತಾಲೂಕಿನ ಹಿರಿಯ ನಾಯಕರು, ಮುಖಂಡರು, ಜನಪ್ರತಿನಿಧಿಗಳು, ನನಗೆ ಸಹಾಯ ಸಹಕಾರವನ್ನು ನೀಡಿದರೆ ನಾನು ಸಂಘಟನೆ ಮುಖಾಂತರ ನನ್ನ ಶಕ್ತಿಯನ್ನು ತೋರಿಸುತ್ತೇನೆ ಎಂದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹನುಮಂತ ಬಂಡಿವಡ್ಡರ ಮಾತನಾಡಿ ಡಿ.ಕೆ.ಶಿವಕುಮಾರ ಸಾಹೇಬರು ಯುವಕರಿಗೆ ಹೆಚ್ಚಿನ ಪ್ರಾದ್ಯಾನತೆಯನ್ನು ನೀಡುತ್ತಿದ್ದಾರೆ ಆ ನಿಟ್ಟಿನಲ್ಲಿ ಕಳೆದ 20 ವರ್ಷಗಳಿಂದ ಸಂಘಟನೆ ಮಾಡಿದ ಎಂ.ಎನ್.ವೇಂಕೋಜಿಯವರ ಬದಲಿಗೆ ತಾಲೂಕಿನಲ್ಲಿ ಸುಮಾರು 20-25 ಜನ ಆಕಾಂಕ್ಷಿಗಳಾಗಿದ್ದರು, ಸುಮಾರು ಮೂರು ವರ್ಷದಿಂದ ಈ ಪ್ರಕ್ರಿಯೆ ನೆಡೆದಿತ್ತು ಆದರೆ ಸಂಘಟನೆ ಚತುರ, ಯುವ ನಾಯಕ ಪಂಚಮಸಾಲಿ ಮುಖಂಡ ಶಂಭುಲಿಂಗಪ್ಪ ಆಜೂರ ಅವರನ್ನು ಬ್ಲಾಕ್ ಅಧ್ಯಕ್ಷರನ್ನಾಗಿ ಮಾಡಿದ್ದು ನಮಗೆಲ್ಲ ಸಂತಸ ತಂದಿದೆ ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಬದಲಾವಣೆಗಳು ಆಗುತ್ತವೆ ಎಂದರು.
ಈ ಸಂದರ್ಭದಲ್ಲಿ ನಿಸಾರ ಆಹ್ಮದ ತೋಕಲ್ಲಿ, ಅನಿಲಕುಮಾರ ಭದ್ರಾಪೂರ, ರಾಯಪ್ಪ ಬೆಂಕದಕಟ್ಟಿ, ಕಾಂತೇಶ ವಿಜಾಪುರ, ಗದಿಗೆಪ್ಪ ಬಳ್ಳಾರಿ, ತಿರಕಪ್ಪ ಹಡ್ಡೇರ, ಮಾಲತೇಶ ಯಲವಿಗೆ, ಬೀರ್ಪ ಸಣ್ಣತಮ್ಮನವರ, ಶಿವನಗೌಡ ಪಾಟೀಲ, ಶಿವು ಮಾಗಿ, ಪುಟ್ಟಪ್ಪ ಮತ್ತೂರ, ಮಾಲತೇಶ ಮುಡೂರ, ಯುನಿಸ ಕಲ್ಯಾಣ, ತಾಯಪ್ಪ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.