ಸಿರುಗುಪ್ಪ

ಜಲಾಲುದ್ದೀನ್ ಮೊಹಮ್ಮದ್ ರೂಮಿ ಪುಣ್ಯ ಸ್ಮರಣೆ

ಜಲಾಲುದ್ದೀನ್ ಮೊಹಮ್ಮದ್ ರೂಮಿ  ಪುಣ್ಯ ಸ್ಮರಣೆ

ಸಿರುಗುಪ್ಪ: 12ನೇ ಶತಮಾನದಲ್ಲಿ ಪರ್ಷಿಯದಲ್ಲಿ ಇದ್ದವರು ನಮ್ಮ 21ನೇ ಶತಮಾನದಲ್ಲಿಯೂ ಅಷ್ಟು ಲವಲವಿಕೆಯಿಂದ ನಮ್ಮ ಮನಸ್ಸನ್ನು ಮುಧಗೊಳಿಸಬೇಕೆಂದರೆ ಅವರ ಬರಹಗಳು ಎಂಥದ್ದು ಅವರು ಯಂಥವರು ಎಂಬ ಯೋಚನೆ ಬಂದೇ ಬರುತ್ತದೆ  ಜಲಾಲುದ್ದೀನ್ ಮೊಹಮ್ಮದ್ ರೂಮಿ ಪಷರ್ಿಯಾದ ಸುನ್ನಿ ಕವಿ ಹಾಗೂ ಸೂಫಿ ಹಾಡುಗಾರರು ಇವರು ಟರ್ಕಿ ಷ್ ಪರ್ಷಿ ಯನ್ ಅರೇಬಿಕ್ ಮತ್ತು ಗ್ರೀಕ್ ಭಾಷೆಯನ್ನು ಸಹ ಉಪಯೋಗಿಸಿ ಪದ್ಯಗಳನ್ನು ಬರೆಯುತ್ತಿದ್ದರು ಎಂದು ಬಹು ಭಾಷಾ ಕವಿ ಸಾಹಿತ್ಯ ಪ್ರೇಮಿ ಗಾಯಕ ಸಮಾಜ ಸುಧಾರಕ ಸಾಕ್ಷರತಾ ಹರಿಕಾರ ಅಬ್ದುಲ್ ನಬಿ ಅವರು ಅಭಿಪ್ರಾಯಪಟ್ಟರು. ನಗರದ ಇಬ್ರಾಹಿಂ ಮಂಜೀಲ್ ನಲ್ಲಿ 750ನೇ ಪರ್ಷಿಯ ಅಮರ ಪ್ರೇಮ  ಕವಿ ಜಲಾಲುದ್ದೀನ್ ಮೊಹಮ್ಮದ್ ರೂಮಿ ಅವರ ಪುಣ್ಯ ಸ್ಮರಣೆಯನ್ನು ನೆನಪಿಸಿ ಗೌರವಿಸಿ ಸ್ಮರಿಸಿ ಅವರು ಮಾತನಾಡುತ್ತಾ ರೂಮಿಯವರ ನಿಜನಾಮ ಧೇಯ ಜಲಾಲ್-ಅದ್-ದೀನ್ ಮೊಹಮ್ಮದ್ ಭಾಲ್ಕಿ ಆಗಿದ್ದರೂ ಸಹಿತ ಇವರು ಜಲಾಲ್ ಅದ್ದಿ ನ್ ಮಹಮ್ಮದ್ ರೂಮಿ ಎಂಬ ಹೆಸರಿನಿಂದಲೇ ಸುಪರಿಚಿತರಾಗಿದ್ದರು ವಿಶ್ವದೆಲ್ಲೆಡೆ ರೂಮಿ ಎಂದೇ ಹೆಚ್ಚು ಜನಪ್ರಿಯವಾಗಿರುವ ಇವರು ಜನಿಸಿದ್ದು 1207ರ  ಸೆಪ್ಟೆಂಬರ್ 30 ರಂದು ಇಂದಿನ ಆಫ್ಗಾನ್ ಪ್ರದೇಶದಲ್ಲಿ ಮಂಗೋಲರು ಮಧ್ಯ ಏಷ್ಯಾ  ನನ್ನ ಅಕ್ರಮಣ ಮಾಡಿದಾಗ ರೂಮಿಯ ಮನೆಯವರು ಈಗಿನ ಇರಾನಿಗೆ  ಸ್ಥಳಾಂತರ ಗೊಂಡರಂತೆ ಇವರು ರುಬಯತ್ ಮತ್ತು ಘಝಲ್ ಗಳನ್ನು ಬರೆಯುವ ಅದರಲ್ಲಿ ನಿಸ್ಸೀಮನಾಗಿದ್ದರು "ಮಾತನ್ವಾಯೆ  ಮಸ್ನವಿ "ಇವರು ಬರೆದ ಆರು ಸಂಪುಟದ ಮಹಾಕಾವ್ಯ ಇದನ್ನು ಪರ್ಷಿಯಾದ ಕುರಾನ್ ಎಂದು ಅನ್ನುತ್ತಾರೆ 27000 ಸಾಲುಗಳಿರುವ ಕಾವ್ಯವಿದು ಇರಾನ್ ಮತ್ತು ಅಪಘಾನಿಸ್ತಾನರ ಸಂಗೀತದಲ್ಲಿ ಸುಮಾರು ಬರೀ ಇವರ ಸಾಲುಗಳೇ ಇರುವುದು ತಾಳಿಬಾನಿಗಳ ಆಡಳಿತದಲ್ಲಿ ಈ ಕವಿಯ ರಚನೆಗಳು ಸತ್ತು ಹೋದವು ಹಂಗಾಗಿಯೂ ಯುನೆಸ್ಕೊ ಈತನ ಇವರ  ರಚನೆಗಳನ್ನು ರಿವೈವ್ ಮಾಡಿ 30ನೇ ಸೆಪ್ಟೆಂಬರ್ ರಂದು ರೂಮಿ ದಿವಸವನ್ನಾಗಿ ಆಚರಿಸುತ್ತಾರೆ 26ನೇ  ಸೆಪ್ಟೆಂಬರ್ ನಿಂದ ಅ. 2ರವರೆಗೆ ರೂಮಿ ಸಪ್ತಹವು ನಡೆಯುತ್ತದೆ ಇದು ರೂಮಿಯ ಮಹಿಮೆ ನಮ್ಮ ವಚನಕಾರರ ದಾಸರ ಸಮಕಾಲೀನ ವ್ಯಕ್ತಿತ್ವ ರೂಮಿಯದು ಕ್ರಿಸ್ತಶಕ 13ನೇ ಶತಮಾನದಲ್ಲಿ ಜೀವಿಸಿದ್ದ ರೂಮಿಯವರ ಕಾವ್ಯ ವಿಚಾರಧಾರೆಯನ್ನು ಇರಾನಿಯನ್ನರು, ಟರ್ಕರು ,ಅಪಘನ್ನರು , ಮತ್ತು ಇತರೆ ಏಷ್ಯಾದವರು ಅಷ್ಟೇ ಅಲ್ಲದೆ ಭಾರತೀಯ ಉಪಖಂಡದ ಜನ ಮಾನಸ ಕಳೆದ ಏಳು ಶತಮಾನಗಳ ಅವಧಿಯಲ್ಲಿ ಮೆಚ್ಚಿ ನೆಚ್ಚಿಕೊಂಡಿದ್ದಾರೆ ರೂಮಿಯವರ ಮಹತ್ವವು ರಾಷ್ಟ್ರೀಯ ಮತ್ತು ಜನಾಂಗೀಯ ಗಡಿಗಳನ್ನು ಮೀರುವಂತದ್ದು ಅವರ ಕವಿತೆಗಳನ್ನು ವಿಶ್ವದ ಅನೇಕ ಭಾಷೆಗಳಲ್ಲಿ ವಿವಿಧ ಶೈಲಿಗಳಲ್ಲಿ ಭಾಷಾಂತರಿಸಲಾಗಿದೆ 2007ರಲ್ಲಿ ಅವರನ್ನು ಅಮೆರಿಕಾದಲ್ಲಿ ಅತ್ಯಂತ ಜನಪ್ರಿಯ ಕವಿ ಎಂದು ಬಣ್ಣಿಸಲಾಗಿತ್ತು ಎಂದರೆ ಅವರು ಈ ಆಧುನಿಕ ಕಾಲ ಮಾನಕ್ಕೂ ಎಷ್ಟು ಪ್ರಸ್ತುತರು ಎಂಬುದು ಗೊತ್ತಾಗುತ್ತದೆ. ಜಲಾಲುದ್ದೀನ್ ಮೊಹಮ್ಮದ್ ರೂಮಿ ಈ ಹೆಸರು ಸಾಹಿತ್ಯ ಪ್ರಿಯರ ಕಿವಿಗೆ ಬಿದ್ದರೆ ರೋಮಾಂಚಿತಗೊಳ್ಳದೆ ಇರುವುದಿಲ್ಲ ಪರ್ಷಿ ಯಾದ ಈ ಅಮರ ಪ್ರೇಮಕವಿ ರೂಮಿ ಈ ಭೂಮಿಯನ್ನು ತೊರೆದು ಹೋಗಿದ್ದು 1273ರ ಡಿ. 17ರಂದು ಮಹಾಕವಿಯ ಕಾವ್ಯಸಾರವನ್ನು ಅನುಭವಿಸುವ ಆನಂದಿಸಿ ಅವರ ಸ್ಮರಣೆ ಮಾಡಲು ಈ ದಿನ ಒಂದು ಸು ಸಂದರ್ಭ ಎಂದು ಅಬ್ದುಲ್ ನಬಿ ಅವರು ಹೇಳಿದರು 

ಸುದ್ದಿ ಓದಿ