ಪ್ರತಿಯೊಂದು ವೃತ್ತಿಯಲ್ಲಿ ಕಾಯಕದ ನಿಷ್ಠೆ ಹೊಂದಲು ಮರೆಯಬಾರದು: ಪ್ರವೀಣ
ಶಿಗ್ಗಾವಿ : ಪ್ರತಿಯೊಂದು ವೃತ್ತಿಯಲ್ಲಿ ನಾವು ನಮ್ಮ ಕಾಯಕದ ನಿಷ್ಠೆಯನ್ನು ಹೊಂದಲು ಮರೆಯಬಾರದು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಪ್ರವೀಣ.ಕೆ.ಎನ್ ಕಿವಿಮಾತು ಹೇಳಿದರು.
ಪಟ್ಟಣದ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿಧ್ಯಾರ್ಥಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆಯವರು ಮತ್ತು ಅಡುಗೆ ಸಹಾಯಕರುಗಳ ವೃತ್ತಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಂದು ವಸತಿ ನಿಲಯಗಳಲ್ಲಿ ಸಿಬ್ಬಂದಿಗಳು ವೃತ್ತಿಯಲ್ಲಿ ಕಾಯಕ ನಿಷ್ಠೆಯನ್ನು ಹೊಂದಿ ನಿಲಯದಲ್ಲಿ ವಿಧ್ಯಾರ್ಥಿಗಳಿಗೆ ಒಳ್ಳೆಯ ವಾತಾವರಣ ಕಲ್ಪಿಸಿಕೊಟ್ಟರೆ ನಮ್ಮ ವೃತ್ತಿ ಬದುಕು ಸಾರ್ಥಕವಾಗುತ್ತದೆ ಎಂದರು.
ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಇಂದುದರ ಮುತ್ತಳ್ಳಿ ಮಾತನಾಡಿ ನಮ್ಮ ವೃತ್ತಿಯಲ್ಲಿ ಸೇವಾ ಮನೋಭಾವನೆ ಇದ್ದಾಗ ಮಾತ್ರ ವಿಧ್ಯಾರ್ಥಿಗಳಿಗೆ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ ಎಂದರು.
ಸರಕಾರಿ ನೌಕರ ಸಂಘದ ಅಧ್ಯಕ್ಷ ಅರುಣ ಹುಡೇದಗೌಡ್ರ ಮಾತನಾಡಿ ಸರಕಾರದ ಪ್ರತಿಯೊಂದು ಯೋಜನೆಗಳನ್ನು ಸಮರ್ಕವಾಗಿ ವಿಧ್ಯಾರ್ಥಿಗಳಿಗೆ ತಲುಪಿಸಿದಾಗ ಅವರು ಸ್ವಾವಲಂಬಿಯಾಗಿ ಬದುಕಲು ಸಹಕಾರಿಯಾಗುತ್ತದೆ ಎಂದರು.
ಸರಕಾರಿ ನೌಕರ ಸಂಘದ ಕಾರ್ಯದರ್ಶಿ ರಮೇಶ ಹರಿಜನ ಮಾತನಾಡಿ ವೃತ್ತಿಯಲ್ಲಿ ಶ್ರದ್ದೆ, ಇಚ್ಚಾಶಕ್ತಿ ಮತ್ತು ಬದ್ದತೆಯಿದ್ದಾಗ ಮಾತ್ರ ನಾವು ನಮ್ಮ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯವಿದೆ ಎಂದರು.
ಡಾ . ಗೈಬುನಾಯಕರ ಮಾತನಾಡಿ ನಮ್ಮ ಆರೋಗ್ಯದ ಬಗ್ಗೆ ನಾವು ವಿಶೇಷ ಕಾಳಜಿಯನ್ನು ವಹಿಸಬೇಕು ಮತ್ತು ನಮ್ಮ ಸ್ವಚ್ಚತೆಯ ಬಗ್ಗೆ ನಮಗೆ ಅರಿವಿರಬೇಕು ಎಂದು ಮಾಹಿತಿ ನೀಡಿ ನಂತರ ವಸತಿ ನಿಲಯದ ಸರ್ವರಿಗೂ ಆರೋಗ್ಯ ತಪಾಸಣೆ ಮಾಡಿದರು.
ಈ ಸಂದರ್ಭದಲ್ಲಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆಯವರು ಮತ್ತು ಅಡುಗೆ ಸಹಾಯಕರುಗಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರ್ಥನೆ ಶಿವಲೀಲಾ ದಾನಪ್ಪನವರ, ನಿಲಯ ಮೇಲ್ವಿಚಾರಕ ಪ್ರವೀಣ ಹೊಸಮನಿ ಸ್ವಾಗತಿಸಿದರು, ನಿಲಯ ಮೇಲ್ವಿಚಾರಕ ಗುರುಶಾಂತ ನಿರೂಪಿಸಿದರು, ನಿರ್ಮಲಾ ಪಾಟೀಲ ವಂದಿಸಿದರು.