ಶಿವಯೋಗಿಶ್ವರ ಮಹಾಸ್ವಾಮಿಗಳ 11 ದಿನಗಳ ಮೌನ ಜಪ ತಪ ಅನುಷ್ಠಾನ
ರಾಣಿಬೆನ್ನೂರ 29: ತಾಲೂಕಿನ ಗುಡ್ಡದಗುಡ್ಡದ ಆನವೇರಿ ವಿರಕ್ತಮಠದ ಹಾಗೂ ಜಗದ್ಗುರು ಮುಂಡರಗಿ ಅನ್ನದಾನೇಶ್ವರ ಶಾಖಾಮಠ (ಸೊರಟೂರು) ಶಿವಯೋಗಿಶ್ವರ ಮಹಾಸ್ವಾಮಿಗಳು
11 ದಿನಗಳ ಮೌನ ಶಿವಯೋಗ ಜಪ ತಪ ಅನುಷ್ಠಾನವನ್ನು ಗುಡ್ಡದ ಅನವೇರಿ ಶ್ರೀಮಠದಲ್ಲಿ ಕೈಗೊಂಡಿದ್ದಾರೆ. ಜು.4 ರಂದು ಬೆಳಗ್ಗೆ 10 ಗಂಟೆಗೆ ಶ್ರೀಗಳವರ ಅನುಷ್ಠಾನ ಮಂಗಲಗೊಳ್ಳುವುದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.