ನಿಲಗಾರ (ಹೆದ್ದೂರಶೆಟ್ಟಿ) ವಿಘ್ನ ನಿವಾರಕ ಗಣಪತಿಯ ವಿಸರ್ಜನೆ
ಎಂ. ಬಿ. ಘಸ್ತಿ
ಸಂಕೇಶ್ವರ 07: ಬರುವ ಸೋಮವಾರ ದಿನಾಂಕ 09 ರಂದು ನಿಲಗಾರ (ಹೆದ್ದೂರಶೆಟ್ಟಿ) ವಿಘ್ನ ನಿವಾರಕ ಗಣಪತಿಯನ್ನು ರಾತ್ರಿ 1.00 ಗಂಟೆಯವರೆಗೆ ಹಿರಣ್ಯಕೇಶಿ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು.
ಕಳೆದ 21 ದಿನಗಳಿಂದ ನಗರದಲ್ಲಿ ಪುರಸಭೆಯ ಪೌರಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಡಿದ್ದು ಇದರಲ್ಲಿ ಹಸಿ ಕಸ ಹಾಗೂ ಒಣ ಕಸ ಮನೆ ಮನೆಗಳಿಂದ ಕಸ ಸಂಗ್ರಹಿಸಲು 5 ವಾಹನಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಪುರಸಭೆಯ ಹಿರಿಯ ಆರೋಗ್ಯ ನೀರೀಕ್ಷಕ ಅಧಿಕಾರಿಯಾದ ವಿಶ್ವನಾಥ ಸೊಗಲದ, ಹಾಗೂ ಪುರಸಭೆಯ ಮುಖ್ಯಾಧಿಕಾರಿ ಪ್ರಕಾಶ ಮಠದ, ಇವರು ಜಂಟಿಯಾಗಿ ಲೋಕದರ್ಶನ ಪ್ರತಿನಿಧಿಗೆ ಮಾತನಾಡುತ್ತಾ ತಿಳಿಸಿದಲ್ಲದೇ, ಪರಿಸರ ಸ್ವಚ್ಛತೆ ಬಗ್ಗೆ ಈ ಅಧಿಕಾರಿಗಳು ಹೆಚ್ಚಿನ ಮುತವರ್ಜಿಸಿ ಕಾರ್ಯನಿರ್ವಹಿಸುತ್ತಿದ್ದಾರೆ, ಹಾಗೂ ಖಾಯಂ ನೌಕರರು ಹಾಗೂ ಗುತ್ತಿಗೆಯಿಂದ ಇರುವ ಹೀಗೆ ಒಟ್ಟು 77 ಪೌರ ಕಾರ್ಮಿಕರು ಪ್ರತಿ ದಿನ ಬೆಳಂಬೆಳಗ್ಗೆ 4.30 ಗಂಟೆಗೆ ಕಸ ವಿಲೇವಾರಿ, ನಗರದ ಸ್ವಚ್ಛತೆ , ಪೌರ ಕಾರ್ಮಿಕರು ಎದ್ದು ಪೊರಕೆಗಳನ್ನು ಹಿಡಿದು ಸಂಕೇಶ್ವರ ನಿಲಗಾರ ಗಣಪತಿ ದರ್ಶನ ಪಡೆಯಲು ಬೇರೆ ಬೇರೆ ಗ್ರಾಮಗಳಿಂದ ಹಾಗೂ ಪಟ್ಟಣಗಳಿಂದ ಗಣಪತಿಯ ಭಕ್ತ ಸಮೂಹವು ಹಿಂಡು ಹಿಂಡಾಗಿ ಬರುತ್ತಿದ್ದು ಸ್ವಚ್ಛತೆಯ ಬಗ್ಗೆ ಭಕ್ತರು ಸಂಕೇಶ್ವರ ಪಟ್ಟಣ ಎಷ್ಟೊಂದು ಸ್ವಚ್ಚವಾಗಿ ಕಾಣುತ್ತಿದೆ ಎಂದು ಗಣಪತಿ ದರ್ಶನ ಪಡೆಯುವ ಭಕ್ತರು ಮಾತನಾಡುತ್ತಿದ್ದಾರೆ,.
2008 ರಿಂದ ಸಂಕೇಶ್ವರ ಕಸ ಸಂಗ್ರಹಣೆ ಕಸ ವಿಲೇವಾರಿ ಕಾರ್ಯ ಆರಂಭವಾಗಿದ್ದು ಸಂಕೇಶ್ವರ ಪಟ್ಟಣ ಸ್ವಚ್ಛತೆ ಬಗ್ಗೆ ರಾಜ್ಯದಲ್ಲಿ ಮೊದಲನೆಯ ಬಾರಿಗೆ 2010 ರಲ್ಲಿ ಬಿ.ಜೆ.ಪಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವ ಸುರೇಶ ಕುಮಾರ ಇವರಿಂದ ಸ್ವಚ್ಛತೆಯ ಕಾರ್ಯಕ್ಷಮತೆಯ ಬಗ್ಗೆ ಸರ್ಕಾರದವರು ಸಂಕೇಶ್ವರ ಪುರಸಭೆಗೆ ಪ್ರಶಸ್ತಿಯನ್ನು ನೀಡಿ ಆಗಿನ ಅಧ್ಯಕ್ಷ ಅಮರ ಮಧುಕರ ನಲವಡೆ ಪುರಸಭೆಯ ಮುಖ್ಯಾಧಿಕಾರಿ ಲೋಕೇಶ ಹಿರೇಮಠ ಇವರ ಸಮ್ಮುಖದಲ್ಲಿ ಪುರಸಭೆಯ ಅಧ್ಯಕ್ಷರಿಗೆ ಸನ್ಮಾನ ನೀಡಿ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದನ್ನು ಸ್ಮರಿಸಬಹುದು, ಹಸಿ ಕಸ ಮತ್ತು ಒಣ ಕಸ ಇವುಗಳನ್ನು ನಗರದ ಜನತೆ ಬೇರೆ ಬೇರೆ ಮಾಡಿದರೆ ಪೌರ ಕಾರ್ಮಿಕರಿಗೆ ತುಂಬ ಅನುಕೂಲವಾಗುತ್ತದೆ, ಇದರಿಂದ ಪೌರ ಕಾರ್ಮಿಕರಿಗೆ ಅವರ ಆರೋಗ್ಯದ ಮೇಲೆ ದುಷ್ಟ ಪರಿಣಾಮಗಳು ಬಿರುವುದಿಲ್ಲಾ, ಜನತೆ ಹಸಿ ಮತ್ತು ಒಣ ಕಸ ಎರಡನ್ನು ಸೇರಿಸಿ ಕೊಡುತ್ತಿರುವುದು ತುಂಬಾ ವಿಷಾದನೀಯ, ಇತ್ತಿಚಿಗೆ ಮಹಿಳಾ ಪೌರ ಕಾರ್ಮಿಕಳೊಬ್ಬಳು ನಾತು ವಾಸನೆಯಿಂದ ಆ ಮಹಿಳೆ ಮನೆಯಲ್ಲಿ ಊಟ ಮಾಡುತ್ತಿಲ್ಲವೆಂಬ ಬಗ್ಗೆ ಇತ್ತಿಚಿಗೆ ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರಣ ವಾಯರಲ್ ಆಗಿದ್ದು ಆದ ಕಾರಣ ನಗರದ ಜನತೆ ಪೌರ ಕಾರ್ಮಿಕರ ಗೋಳುಗಳನ್ನು ಅರಿತುಕೊಂಡು ಒಣ ಕಸ ಮತ್ತು ಹಸಿಕಸಗಳನ್ನು ಬೇರೆ ಬೇರೆ ಡಬ್ಬಿಗಳಲ್ಲಿ ಹಾಕಿ ಸಹಕರಿಸಬೇಕೆಂದು ನಗರದ ಜನತೆಯಲ್ಲಿ ಅಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.
ಈ ಒಣ ಕಸ ಮತ್ತು ಹಸಿ ಕಸ ಸುಮಾರು 45 ಸಾವಿರು ಟನ್ ಸಂಗ್ರಹಣೆ ಇರುತ್ತದೆ, ಹಸಿ ಕಸದಿಂದ ಎರೆಹುಳು ಗೊಬ್ಬರ ತಯಾರಿಕೆಯನ್ನು 40 ಹುಂಡಿಗಳಲ್ಲಿ ಸಂಗ್ರಹಿಸಲಾಗುತ್ತದೆ, ಈ ಗೊಬ್ಬರವನ್ನು ರೈತರು ತಮ್ಮ ಹೊಲಗದ್ದೆಗಳಲ್ಲಿ ತೆಗೆದುಕೊಂಡು ಹೋಗುತ್ತಾರೆಂದು ಅಧಿಕಾರಿಗಳು ತಿಳಿಸಿದ್ದಾರೆ, ಈ ಒಣ ಕಸ ಮತ್ತು ಹಸಿ ಕಸಗಳನ್ನು 05 ವಾಹನಗಳ ಮುಖಾಂತರ ಸಂಗ್ರಹಣೆ ಮಾಡಿ ಹರಗಾಪೂರ ಗಡ ಗ್ರಾಮದಲ್ಲಿಯ 08 ಎಕರೆ ಖುಲ್ಲಾ ಜಾಗದಲ್ಲಿ ಈ ಕಸವನ್ನು ಒಣ ಕಸ ಮತ್ತು ಹಸಿ ಕಸಗಳನ್ನು ದಾಸ್ತಾನ ಮಾಡಿದ್ದಾರೆ.
ನಿಲಗಾರ ಗಣಪತಿಯನ್ನು ನೋಡಲು ಬರುತ್ತಿರುವ ಭಕ್ತರನ್ನು ಸಾಲುಸಾಲಾಗಿ ನಿಲ್ಲಿಸಿ ಪೋಲಿಸರು ಬಿಗಿ ಬಂದೊಬಸ್ತ ಸಂಕೇಶ್ವರ ಸಿ.ಪಿ.ಐ. ಎಸ್.ಎಮ್. ಅವಜಿ ಇವರು ನಿಲಗಾರ ಗಣಪತಿಯ ಮಾಲೀಕರಿಗೆ ಸೂಕ್ತವಾದ ಸಲಹೆಗಳನ್ನು ನೀಡಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಿ ಭಕ್ತರಿಗೆ ಯಾವುದೇ ತರಹದಿಂದ ತೊಂದರೆಯಾಗದಂತೆ ಅವರನ್ನು ದರ್ಶನ ಪಡೆಯಲು ಹೆದ್ದೂರಶೆಟ್ಟಿ ಬಂಧುಗಳಿಗೆ ಮುಕ್ತ ಮನಸ್ಸಿನಿಂದ ದರ್ಶನ ಪಡೆಯಲು ಅವಕಾಶ ನೀಡಬೇಕೆಂದು ಹೇಳಿದರು.