ಎಲಬುರ್ಗ

ನಾಡಧ್ವಜವನ್ನು ಸುಟ್ಟು ವಿಕೃತ ಮೆರೆದ ಪುಂಡರನ್ನು ಕೂಡಲೇ ಬಂಧಿಸಿ: ಶಿವುಕುಮಾರ ನಾಗನಗೌಡ್ರು

ನಾಡಧ್ವಜವನ್ನು ಸುಟ್ಟು ವಿಕೃತ ಮೆರೆದ ಪುಂಡರನ್ನು ಕೂಡಲೇ ಬಂಧಿಸಿ: ಶಿವುಕುಮಾರ ನಾಗನಗೌಡ್ರು

ಲೋಕದರ್ಶನ ವರದಿ 

ಯಲಬುರ್ಗಾ 20: ಬೆಳಗಾವಿ ಗಡಿಯಲ್ಲಿ ಪದೇ-ಪದೇ ಕ್ಯಾತೆ ತೆಗೆಯುತ್ತಿರುವ ಎಂಇಎಸ್ ಮತ್ತು ಶಿವಸೇನೆ ಪುಂಡರನ್ನು ಕೂಡಲೇ ಬಂದಿಸಿ ಎಂದು ಕರವೇ ಯುವ ಸೇನೆ ತಾಲೂಕು ಅಧ್ಯಕ್ಷ ಶಿವುಕುಮಾರ ನಾಗನಗೌಡ್ರು ಒತ್ತಾಯಿಸಿದ್ದಾರೆ. 


ಪಟ್ಟಣದ ತಹಶೀಲ್ ಕಚೇರಿಯಲ್ಲಿ ಕರವೇ ತಾಲೂಕು ಅಧ್ಯಕ್ಷ ಶಿವಕುಮಾರ್ ನಾಗನಗೌಡ ನೇತೃತ್ವದಲ್ಲಿ ತಹಶೀಲ್ದಾರ್ ಮೂಲಕ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಬೆಳಗಾವಿಯಲ್ಲಿ ಪದೇ ಪದೇ ಖ್ಯಾತೆ ತಗೆಯುತ್ತಿರುವ ಎಂ.ಇ.ಎಸ್ ಹಾಗೂ ಶಿವಸೇನೆ ಪುಂಡರು ನಾಡದ್ವಜವನ್ನು ಸುಟ್ಟು ಕನ್ನಡಿಗರ ಮನಸಿಗೆ ಧಕ್ಕೆ ತಂದಿದ್ದು. ಕೂಡಲೇ ಅವರನ್ನು ಬಂಧಿಸಬೇಕು ಹಾಗೂ  ಅನಗೋಳದಲ್ಲಿ ಕ್ರಾಂತೀವೀರ ಸಂಗೋಳಿ ರಾಯಣ್ಣನ ಪೂರ್ತಿಯನ್ನು ಭಗ್ನ ಮಾಡಿದ ಪುಂಡರನ್ನು ಈ ದೇಶದಿಂದ ಗಡಿಪಾರು ಮಾಡಬೇಕು.  

ಬೆಳಗಾವಿಯಲ್ಲಿ ಎಂ.ಇ.ಎಸ್ ಮುಂಖಂಡರಿಗೆ  ಮಸಿ ಬಳಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕನ್ನಡ ಕಾರ್ಯಕರ್ತ, ಕನ್ನಡಪರ ಹೋರಾಟಗಾರರಾದ ಸಂಪತ್‌ಕುಮಾರ ದೇಸಾಯಿ ಹಾಗೂ ಅವರ ತಂಡದ ಮೇಲೆ ಹಾಕಿರುವ ಐಪಿಸಿ (ಸೆಕ್ಷನ್307)ರ ಅಡಿಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಿಗೊಂಡಿರುವುದು. ಅತ್ಯಂತ ಆಕ್ಷ್ಯಮ್ಯ ಇದನ್ನು ಕರವೇ ಯುವಸೇನೆ ಖಂಡಿಸುತ್ತದೆ.  ಸರ್ಕಾರ ಕೂಡಲೇ ಮೊಕದ್ದಮೆಯನ್ನು ಕೈ ಬಿಟ್ಟು ಎಲ್ಲಾ ಕನ್ನಡ ಪರ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಕರವೇ ಯುವಸೇನೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು. 


ಈ ಸಂದರ್ಭದಲ್ಲಿ ವಿಧ್ಯಾರ್ಥಿ ಘಟಕದ ಅಧ್ಯಕ್ಷ ಭೀಮೇಶ ಬಂಡಿವಡ್ಡರ್, ಮಹೇಶ ಜಾಧವ್, ಪ್ರವೀಣ ಅರಬರ, ಘನವಂತೇಶ ಚನ್ನದಾಸರ, ಮಂಜುನಾಥ ಕಮ್ಮಾರ, ಪರಶುರಾಮ ಜಾಧವ್, ಬಂಗಾರ​‍್ಪ ಜಾಧವ್, ಬಾಳನಗೌಡ ಪೊಲೀಸ್ ಪಾಟೀಲ್, ಬಸವರಾಜ ಮದ್ಲೂರ್, ನಾಗರಾಜ ಪೂಜಾರ ಸೇರಿ ಇನ್ನಿತರರು ಇದ್ದರು. 


ಸುದ್ದಿ ಓದಿ