ಅಕ್ರಮ ಮರಳು ಸಾಗಾಟ : ಟಿಪ್ಪರ ವಶ
ಮುದ್ದೇಬಿಹಾಳ : ಪಟ್ಟಣದ ತಂಗಡಗಿ ರಸ್ತೆಯ ಕ್ಯಾನಲ್ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಒಂದು ರವಿವಾರ ಪೊಲೀಸರಿಗೆ ಅತಿಥಿಯಾಗಿದೆ.
ಸಂಜೆ 5ಗಂಟೆ ಸುಮಾರು ಅಂದಾಜು 5 ಬ್ರಾಸು ಅಕ್ರಮ ಮರಳು ತುಂಬಿಕೊಂಡು ತಂಗಡಗಿ ಕಡೆಯಿಂದ ಮುದ್ದೇಬಿಹಾಳ ಕಡೆಗೆ ಬರುತ್ತಿತ್ತು. ಪೊಲೀಸರು ಪೆಟ್ರೋಲಿಂಗ್ ಕುರಿತು ಹೊರಟಾಗ ಬರುತ್ತಿದ್ದಟಿಪ್ಪರ ನ ಮೇಲೆ ಸಂಶಯ ಬಂದು ನಿಲ್ಲಿಸಿ ನೋಡಿದಾಗ ಅದರಲ್ಲಿ ಮರಳು ತುಂಬಿದ್ದು,ಟಿಪ್ಪರ ಚಾಲಕನಿಗೆ ಸರ್ಕಾರದಿಂದ ರಾಯಲ್ಟಿ ಪಡೆದ ಬಗ್ಗೆ ವಿಚಾರಿಸಲಾಗಿ ಯಾವುದೇ ರಾಯಲ್ಟಿ ಇಲ್ಲದಿದ್ದರಿಂದ ಚಾಲಕ ರಮೇಶ ಮಲ್ಲಪ್ಪ ಪೂಜಾರಿ ಸಾ|| ಕವಡಿಮಟ್ಟಿ ಈತನ ಸಮೇತ ಕೆಎ-32/ಸಿ-3580 ಸಂಖ್ಯೆಯ ಅಕ್ರಮ ಮರಳು ಇದ್ದ ಟಿಪ್ಪರ ವಶಕ್ಕೆ ಪಡೆದು ಸರ್ಕಾರದ ಪರವಾಗಿ ಪಿಎಸ್ಐಆರೀಫ್ ಮುಶಾಪುರಿ ಫಿಯರ್ಾದು ನೀಡಿದ್ದಾರೆ. ಈ ಕುರಿತು ಭಾರತೀಯ ದಂಡ ಸಂಹಿತೆ ಕಲಂ 379 (ಕಳುವಿಗೆ ದಂಡನೆ) ಅಡಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.