ಅಕ್ರಮ ಮಣ್ಣು ಮತ್ತು ಮರಳನ್ನು ಮಾರಾಟದಿಂದ ಪರಿಸರಕ್ಕೆ ಹಾನಿ: ನ್ಯಾಯಮೂರ್ತಿ ಶಾನಂದ್
ರಾಣೇಬೆನ್ನೂರ 09: ಮೊನ್ನೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ಶಾನಂದರವರು ಓಪನ್ ಕೋರ್ಟ್ನಲ್ಲಿ ಮಣ್ಣು ಮತ್ತು ಮರಳಿನ ಬಗ್ಗೆ ಅದ್ಭುತವಾಗಿ ಮಾತನಾಡಿ ಪರಿಸರ ಕಾಳಜಿ ತೋರಿಸುವುದರ ಜೊತೆಗೆ ಅಕ್ರಮ ಮಣ್ಣು ಮರಳು ಮಾರಾಟದಿಂದ ಪರಿಸರಕ್ಕೆ ಆಗುವ ತೊಂದರೆ ಒಂದು ಇಂಚು ಮಣ್ಣು ಸವಕಳಿಯನ್ನು ಎಷ್ಟು ವರ್ಷಕ್ಕೆ ಸರಿದೂಗಿಸಲು ಸಾಧ್ಯ ಎನ್ನುವ ಬಗ್ಗೆ ಎಳೆ ಎಳೆಯಾಗಿ ಮಾತನಾಡಿರುವುದು ಒಂದು ಅದ್ಭುತ ಸಂದೇಶ ಕೊಟ್ಟಂತಾಗಿದೆ ಅಲ್ಲದೆ ಜೊತೆಗೆ ಅಕ್ರಮ ಮಣ್ಣು ಮತ್ತು ಮರಳನ್ನು ಮಾರಾಟವಾಗುತ್ತಿರುವ ಬಗ್ಗೆ ಸರಕಾರಕ್ಕೆ ಚಾಟಿ ಬೀಸಿದಂತಾಗಿದೆ. ಸಂಬಂಧ ಪಟ್ಟ ಇಲಾಖೆಯವರು ಈಗಲಾದರೂ ಎಚ್ಚೆತ್ತು ಪ್ರಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ, ಪರಿಸರ ಸಂಪತ್ತನ್ನು ಉಳಿಸಬೇಕೆಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ದಾರಿ ತಪ್ಪಿದ ಅಧಿಕಾರಿಗಳಿಗೆ ಪರೋಕ್ಷವಾಗಿ ಹೇಳಿದ್ದು ಕೇಳಿಬಂತು.
ಅವರು ತಹಶೀಲ್ದಾರ್ ಆರ್.ಎಚ್. ಭಗವಾನರವರ ಅಧ್ಯಕ್ಷತೆಯಲ್ಲಿ ಜರುಗಿದ ವಾಲ್ಮೀಕಿ ಜಯಂತಿಯ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ನ್ಯಾಯಮೂರ್ತಿ ಶಾನಂದ ರವರು ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿ ಅತೀ ಹೆಚ್ಚು ಮಹತ್ವ ಪಡೆದಿರುವ ವಿಡಿಯೋವನ್ನು ತಮ್ಮ ಮೊಬೈಲ್ನಲ್ಲಿ ಪ್ರಸಾರ ಮಾಡಿ ಅಧಿಕಾರಿಗಳು ಮತ್ತು ಸಭೆಗೆ ಸೇರಿದ ಜನಪ್ರತಿನಿಧಿಗಳ, ವಿವಿಧ ಸಂಘ ಸಂಸ್ಥೆಗಳ ಮುಖಂಡರ ಗಮನ ಸೆಳೆದು ಮುಂದುವರೆದು ಮಾತನಾಡಿದ ಅವರು ಈ ಹಿಂದೆ ಸರಕಾರ ಎಸ್.ಸಿ, ಎಸ್.ಟಿ. ಜನಾಂಗದವರ ಬದುಕಿಗೆ ನೀಡಿದ ಚಾಕ್ರಿ ಜಮೀನು ಅಷ್ಟೇ ಅಲ್ಲದೆ ಇತರೆ ಜನಾಂಗದ ಬಡ ರೈತರ ಫಲವತ್ತಾದ ಜಮೀನಿನಲ್ಲಿರುವ ಮಣ್ಣನ್ನು ಇಟ್ಟಿಗೆ ಭಟ್ಟಿ ಮತ್ತು ಇತರೇ ಕೆಲಸಕ್ಕೆ ಹಣದ ಆಮೀಷ ತೋರಿಸಿ 7 ರಿಂದ 8 ಅಡಿ ಆಳವಾಗಿ ಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ. ಮರಳಿನ ಕಥೆಯು ಇದಕ್ಕಿಂತ ಹೆಚ್ಚಿನ ರೀತಿಯಲ್ಲಿ ಅಕ್ರಮವಾಗಿ ನಡೆಯುತ್ತಿದೆ. ಇದನ್ನು ತಡೆಹಿಡಿಯಬೇಕಾದ ಕಂದಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರ್.ಟಿ.ಓ ಇಲಾಖೆ, ಪೊಲೀಸ್ ಇಲಾಖೆಗಳು ಅಕ್ರಮ ದಂದೆಕೋರರ ಜೊತೆ ಕೈಜೋಡಿಸಿರುವುದು ಕೃಷಿ ವಲಯಕ್ಕೆ ದುರ್ದೈವದ ಸಂಗತಿಯಾಗಿದೆ ಎಂದ ಅವರು ಇದೇ ಪರಿಸ್ಥಿತಿ ಮುಂದುವರೆದರೆ ಪ್ರಕೃತಿ ನಾಶದ ಜೊತೆಗೆ ಆಹಾರದ ಅಭಾವ ಉಂಟಾಗುವುದರಲ್ಲಿ ಎರಡು ಮಾತಿಲ್ಲ ಎಂದರು. ಸಂಬಂಧಿಸಿದವರು ಎಚ್ಚೆತ್ತುಕೊಳ್ಳದಿದ್ದರೆ ಕೃಷಿ ವಲಯದ ಉಳಿವಿಗಾಗಿ ಆಹಾರದ ಅಭಾವದ ನಿವಾರಣೆಗೆ ಉಗ್ರ ಹೋರಾಟ ಮಾಡಲಾಗುವುದೆಂದರು.
ಸಭೆಯಲ್ಲಿ ನೀಲಕಂಠಪ್ಪ ಕೂಸಗೂರು, ಚಂದ್ರಣ್ಣ ಬೇಡರ, ಪ್ರಕಾಶ ಪೂಜಾರ, ಸಣ್ಣತಮ್ಮಪ್ಪ ಬಾರ್ಕಿ, ಕರಬಸಪ್ಪ ಕೂಲೇರ, ರಮೇಶ ಗೊಂದ್ಯಾಳರ, ಮಲ್ಲೇಶಪ್ಪ, ಶಶಿಧರ ಬಸನಾಯ್ಕ ಇತರೆ ನೂರಾರು ಜನರು ಪಾಲ್ಗೊಂಡಿದ್ದರು.