ಅಕ್ರಮ ಗಾಂಜಾ ಮಾರಾಟ: ಓರ್ವ ಬಂಧನ
ಇಂಡಿ 19: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗಾಂಜಾ ಸಮೇತ ಅಬಕಾರಿ ಪೊಲೀಸರು ಬಂಧಿಸಿದ ಘಟನೆ ಗುರುವಾರ ಸಾಯಂಕಾಲ ತಾಲೂಕಿನ ಹಡಲಸಂಗ ಗ್ರಾಮದ ವಿಜಯನಗರ ತಾಂಡಾ ನಂಬರ್-2 ರಲ್ಲಿ ನಡೆದಿದೆ.
ಬಂಧಿತನನ್ನು ಹಡಲಸಂಗ ಗ್ರಾಮದ ವಿಜಯನಗರ ತಾಂಡಾ ನಂ-2ದ ಗೇಮು ರಾಮದಾಸ ನಾಯಕ್ (40) ಎಂದು ಗುರುತಿಸಿದ್ದು ಬಂಧಿತನಿಂದ ದಾಳಿ ಸಮಯದಲ್ಲಿ ಅಂದಾಜು 97500 ರೂ ಮೌಲ್ಯದ .6 ಕೆಜಿ 500 ಗ್ರಾಂ ಒಣಗಿದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಖಚಿತ ಬಾತ್ಮಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿ ಗಾಂಜಾವನ್ನು ಜಪ್ತಿಪಡಿಸಿಕೊಂಡಿದ್ದಾರೆ.
ಅಬಕಾರಿ ಉಪ ಆಯುಕ್ತರು ವಿಜಯಪುರ ಜಿಲ್ಲೆ ವಿಜಯಪುರ ಮತ್ತು ಅಬಕಾರಿ ಉಪ ಅಧಿಕ್ಷಕರು ಉಪ ವಿಭಾಗ ವಿಜಯಪುರ ರವರÀ ಮಾರ್ಗದರ್ಶನದಲ್ಲಿ, ತಹಶೀಲ್ದಾರರು ಇಂಡಿ ರವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ಎಂ.ಎಚ್. ಪಡಸಲಗಿ, ಅಬಕಾರಿ ಉಪ ನಿರೀಕ್ಷಕ ವಿಜಯಕುಮಾರ ಹಿರೇಮಠ ಅವರು ಇಂಡಿ ವಲಯ ತಂಡ ರಚಿಸಿ ದಾಳಿ ನಡೆಸಿದ್ದಾರೆ.
ಅಬಕಾರಿ ಉಪ ನಿರೀಕ್ಷಕ ವಿಜಯಕುಮಾರ ಹಿರೇಮಠ ರವರ ಪಿರ್ಯಾಧಿ ಮೇರೆಗೆ ಈ ಪ್ರಕರಣವನ್ನು ಅಬಕಾರಿ ನಿರೀಕ್ಷಕ ಎಂ.ಎಚ್.ಪಡಸಲಗಿ ಅವರು ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದು ವರಿಸಿದ್ದಾರೆ.
ವಿಜಯಪುರದ ಅಬಕಾರಿ ಉಪ ಆಯುಕ್ತೆ ಸಹಿದ್ ಅಜ್ಮತ್ ಆಫ್ರಿನಾ ಇಲಾಖೆಯ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದಾಳಿಯಲ್ಲಿ ಸಿಬ್ಬಂದಿಗಳಾದ ಶಿವಶಂಕರ ಗೋಟ್ಯಾಳ, ಸಂಜಯ ಕುಲಕರ್ಣಿ, ಸಂಜೀವಕುಮಾರ ಹೂವಿನವರ, ಶಿವರುದ್ರ ದಳವಾಯಿ, ಮಂಜುನಾಥ ಬಡಿಗೇರ ಮತ್ತಿತರರು ಪಾಲ್ಗೊಂಡಿದ್ದರು.