ಸೃಜನಶೀಲತೆ ಬೆಳೆಸಿಕೊಂಡಲ್ಲಿ ಮಾದ್ಯಮರಂಗದಲ್ಲಿ ಬೆಳೆಯಲು ಸಾಧ್ಯ: ಗೌರೀಶ್ ಅಕ್ಕಿ
ಬಳ್ಳಾರಿ:ಜೂ 28: ಸಮಾಜವನ್ನು ತಿದ್ದುವಲ್ಲಿ ವರದಿಗಾರರ ಪಾತ್ರ ತುಂಬಾ ಮುಖ್ಯವಾದದ್ದು ಎಂದು ಅಪರ ಜಿಲ್ಲಾಧಿಕಾರಿ ಪಿ ಎಸ್ ಮಂಜುನಾಥ ಹೇಳಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಮಾದ್ಯಮ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತನಾದವನು ಸುದ್ದಿಯನ್ನು ಕಾಪಿ ಪೇಸ್ಟ್ ಮಾಡಿದಲ್ಲಿ ಹತ್ತರಲ್ಲಿ ಹನ್ನೊಂದನೆಯವನಾಗಿ ಮೂಲೆ ಸೇರುತ್ತಾನೆ, ತನ್ನ ಹೆಸರನ್ನು ಉಳಿಸಿಕೊಳ್ಳಬೇಕಾದಲ್ಲಿ ವರದಿಗಾರಿಕೆಯಲ್ಲಿ ಸೃಜನಶೀಲತೆ ಬೆಳೆಸಿಕೊಂಡು ಕೆಲಸ ಮಾಡಿದಲ್ಲಿ ಮಾದ್ಯಮರಂಗದಲ್ಲಿ ಬೆಳೆಯಲು ಮತ್ತು ತನ್ನ ಹೆಸರನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ವಿದ್ಯುನ್ಮಾನ ಕ್ಷೇತ್ರದ ದಿಗ್ಗಜ, ನಿರೂಪಕ ಗೌರೀಶ್ ಅಕ್ಕಿ ಹೇಳಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು, ವರದಿಗಾರರು ಕಾಲಕ್ಕೆ ತಕ್ಕಂತೆ ಬದಲಾಗಬೇಕು, ತನ್ನ ಮೂಗಿನ ನೇರಕ್ಕೆ ಕೂತು ಮಾತನಾಡಿದಲ್ಲಿ ಅವನು ಅಲ್ಲೇ ಕೂರುತ್ತಾನೆ, ಅಪ್ಡೆಟ್ ಆದವನು ಮುಂದೆ ಹೋಗುತ್ತಾ ತನ್ನ ಕಾರ್ಯಕ್ಷೇತ್ರವನ್ನು ಬೆಳಿಸಿಕೊಳ್ಳುತ್ತಾನೆ, ಕಾರಣ ಇಂದಿನ ಡಿಜಿಟಲ್ ಯುಗಕ್ಕೆ ತಕ್ಕಂತೆ ವರದಿಗಾರಿಕೆಯನ್ನು ಮೇಲ್ದರ್ಜೆಗೆರಿಸಿಕೊಳ್ಳಬೇಕು, ಸುದ್ದಿಗೋಷ್ಠಿಗೆ ಮೊದಲು ಮತ್ತು ಮುಗಿದ ನಂತರ ತಕ್ಷಣಕ್ಕೆ ಅಲ್ಲಿಂದ ಹೋಗಬಾರದೆಂದು ಯುವ ಪತ್ರಕರ್ತರಿಗೆ ಕಿವಿಮಾತು ಹೇಳಿದರು.
ನಂತರ ಹಿರಿಯ ಪತ್ರಕರ್ತ ಕುಂ.ಕ ಮೂರ್ತಿ ಮಾತನಾಡಿದ ಅವರು ಭಾಷೆಯನ್ನು ಹಿಂಸೆಗೆ ಬಳಸಬಾರದು, ಟೀಕೆ,ಅವಲೋಕನ, ವಿಮರ್ಶೆ ಮಾಡುವುದು ಪತ್ರಕರ್ತರ ಅತಿ ಮುಖ್ಯ ಲಕ್ಷಣಗಳು ಇರಬೇಕು . ಪತ್ರಕರ್ತರು ಎಲ್ಲಾ ವರ್ಗದವರಿಗೂ ಗೌರವವನ್ನು ನೀಡಬೇಕು, ಏಕವಚನದಲ್ಲಿ ಯಾರನ್ನು ಪ್ರಶ್ನಿಸಬಾರದು, ಪತ್ರಕರ್ತರ ನಡೆ ನುಡಿ ಉತ್ತಮವಾಗಿರಬೇಕು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡು ರಮೇಶ್ ಕುಟ್ಟಪ್ಪ ಮಾತನಾಡಿ, ಪತ್ರಕರ್ತರಿಗೆ ಎಲ್ಲ ವಿಷಯಗಳನ್ನು ಕೇಳುವ ತಾಳ್ಮೆ ಇರಬೇಕು ಅಂದಾಗ ಮಾತ್ರ ಪತ್ರಕರ್ತರು ಆಗಲು ಸಾಧ್ಯ. ಯಾವುದೆ ಒಂದು ಪ್ರಶ್ನೆಯನ್ನು ಕೇಳುವ ವೇಳೆ ಅ ಕುರಿತು ಪೂರ್ಣ ಮಾಹಿತಿಯನ್ನ ಪಡೆದಿರಬೇಕು. ಪತ್ರಕರ್ತರು ನಮಗೆ ಎಲ್ಲವೂ ಗೊತ್ತು ಅಂದುಕೊಳ್ಳುವುದು ತಪ್ಪು .ವೃತ್ತಿಯಿಂದ ಹೋದರೆ ಗೌರವ, ಹಣ, ಜನರ ಸಂಪರ್ಕ, ಸಂಘಟನೆಯಿಂದ ಬೆಳೆಯಲು ಸಾಧ್ಯವಾಗುತ್ತದೆ ಹಾಗೇ ಹಣದ ಹಿಂದೆ ಹೋದರೆ ಯಾವುದನ್ನು ಸಾಧನೆ ಮಾಡಲು ಸಾಧ್ಯ ಇಲ್ಲ ಎಂದು ತಿಳಿಸಿದರು.ಪತ್ರಕರ್ತರಿಗೆ ಸಂಘಟನೆಯಲ್ಲಿ ಪರಸ್ಪರ ಪಾಲಗೊಳ್ಳುವಿಕೆಯಿಂದ ಆತ್ಮಬಲ ಬರುತ್ತದೆ. ಹೆಸರಿಗಷ್ಟೇ ಪತ್ರಕರ್ತರಾಗದೆ ಸಮಾಜದ ಅಂಕು ಡೊಂಕು ಗಳನ್ನಾ ತಿದ್ದುವಂತರಗಬೇಕು ಎಂದರು.
ವೇದಿಕೆಯ ಮೇಲೆ ಕ.ನಿ.ಪಾ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಆರೋಗ್ಯ ಅಧಿಕಾರಿ ಜನಾರ್ಧನ,ಸಂಘದ ಜಿಲ್ಲಾ ಅಧ್ಯಕ್ಷ ಯಾಲ್ಪಿ ವಲಿಭಾಷ ಮತ್ತು ಜಿಲ್ಲೆಯ ಸಂಘದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.