ಹೆಚ್.ಎಲ್.ಸಿ ಕಾಲುವೆಗೆ ನೀರು ಬಿಡದಿದ್ದರೆ ಉಗ್ರಪ್ರತಿಭಟನೆ: ಗೋಣಿಬಸಪ್ಪ

ಹೆಚ್.ಎಲ್.ಸಿ ಕಾಲುವೆಗೆ ನೀರು ಬಿಡದಿದ್ದರೆ ಉಗ್ರಪ್ರತಿಭಟನೆ: ಗೋಣಿಬಸಪ್ಪ

ಬಳ್ಳಾರಿ 12: ಬೆಳೆದು ನಿಂತಿರುವ ಜೋಳ, ಮೆಣಸಿನಕಾಯಿ, ಹತ್ತಿ ಬೆಳೆಗೆ ಡಿ.20ರಂದು ತುಂಗಭದ್ರ ಬಲದಂಡೆ ಮೇಲ್ಮಟ್ಟದ (ಹೆಚ್.ಎಲ್.ಸಿ) ಕಾಲುವೆಗೆ ನೀರು ಬಿಡದಿದ್ದರೆ 22 ರಂದು ಕನರ್ಾಟಕ ರಾಜ್ಯ ರೈತಸಂಘ ಹಸಿರುಸೇನೆ ನೀರಿಗಾಗಿ ಉಗ್ರಪ್ರತಿಭಟನೆ ನಡೆಸಲಿದೆ ಎಂದು ರಾಜ್ಯರೈತಸಂಘ ಹೇಳಿದೆ. ಈ ಕುರಿತು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಜಿಲ್ಲಾಧ್ಯಕ್ಷ ಬಿ.ಗೋಣಿಬಸಪ್ಪ, ಗೌರವಾಧ್ಯಕ್ಷ ಸಂಗನಕಲ್ಲು ಕೃಷ್ಣ ಮಾತನಾಡಿ ರೈತರು ಕಷ್ಟದಿಂದ ಸಾವಿರಾರು ರೂಪಾಯಿ ವೆಚ್ಚಮಾಡಿ ಬೆಳೆ ಬೆಳೆಯಲಾಗಿದೆ. ಕೈಗೆ ಬರುವ ಸಂದರ್ಭದಲ್ಲಿ ನೀರಿನ ಕೊರತೆಯಾಗುತ್ತಿರುವುದರಿಂದ ಬೆಳೆ ನಷ್ಟವಾಗಲಿದೆ. ಆದ ಕಾರಣ ಜನವರಿ 5ರವರೆಗೆ ಕಾಲುವೆಗೆ ನೀರು ಬಿಡಬೇಕು. ಇಲ್ಲದಿದ್ದರೇ ನೀರಾವರಿ ಕಛೇರಿಗೆ ತೆರಳಿ ಬೀಗ ಹಾಕಿ ಉಗ್ರಪ್ರತಿಭಟನೆ ನಡೆಸಲಾಗುತ್ತದೆ ಎಂದರು. ಕಬ್ಬನ್ನು ಸಕ್ಕರೆ ಕಾಖರ್ಾನೆ ಮಾಲಿಕರು ಎಫ್.ಆರ್.ಪಿ (ಕಬ್ಬಿನ ಸಕ್ಕರೆ ಅಂಶದ ಪ್ರಮಾಣ) ಆಧಾರದ ಮೇಲೆ ಖರೀದಿಸದೇ ಅನ್ಯಾಯ ಮಾಡಲಾಗುತ್ತಿದೆ. ಎಲ್ಲಡೆ ರೈತರ ಕಬ್ಬನ್ನು ಎಫ್.ಆರ್.ಪಿ ದರದ ಮೇಲೆ ಖರೀದಿ ಮಾಡುವ ವ್ಯೆವೆಸ್ಥೆ ಆಗಬೇಕೆಂದರು. ಅಲ್ಲದೇ ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಾಕಿ ಹಣವನ್ನು ರೈತರಿಗೆ ನೀಡುವ ವ್ಯೆವೆಸ್ಥೆಯನ್ನು ಸರಕಾರ ಮಾಡಬೇಕೆಂದರು. ಅಂತಯೇ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ರೈತರ ಬೆಳೆ ಸಾಲ ಮನ್ನಾ ಸದ್ಯಾ 50 ಸಾವಿರ ಮನ್ನಾ ಮಾಡಲಾಗುತ್ತಿದೆ. ಆದರೆ ಅದನ್ನು ಸಂಪೂರ್ಣ ಸಾಲಮನ್ನಾ ಮಾಡಬೇಕಂದು ಆಗ್ರಹಿಸಿದರು. ಜಲಾಶಯಗಳಿಂದ ನೀರು ಪಡೆಯುವ ಜಿಂದಾಲ್ ಉಕ್ಕು ಕಾಖರ್ಾನೆ ರೈತರಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ಇದಕ್ಕೆ ಮೂರು ರಾಜ್ಯಗಳ ಸಂಸದರು ಒತ್ತಾಯ ಮಾಡಬೇಕಂದರು. ಜಿಲ್ಲೆಯಲ್ಲಿ ಮರಳಿನ ಅಭಾವ ಸಾಕಷ್ಟಿದೆ. ಅದಕ್ಕಾಗಿ ಅಕ್ರಮವಾಗಿ ಮರಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದೆ. ಹೀಗಿರುವಾಗ ಸಣ್ಣ ರೈತರು ಮತ್ತು ಬಡಕುಟುಂಬದ ಜನತೆಗೆ ಜಿಲ್ಲಾಡಳಿತವೇ ಉಚಿತವಾಗಿ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು. 

ಈ ಸುದ್ದಿಗೋಷ್ಟಿಯಲ್ಲಿ ಸಂಘದ ಮುಖಂಡರುಗಳಾದ ಗಂಗಾದಾರವಾಡ್ಕಕರ್, ಬಿ.ಯು ಯರಿಸ್ವಾಮಿ, ಎಂ.ಈಶ್ವರಪ್ಪ, ಹೊನ್ನುರುಸ್ವಾಮಿ, ಬಿ.ನಾಗರಾಜ, ಶಂಶಾದ ಬೇಗಂ, ಹೊನ್ನಪ್ಪ, ಸೇರಿದಂತೆ ಹಲವಾರು ರೈತರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.


ಸುದ್ದಿ ಓದಿ