ಚಿಕ್ಕೋಡಿ

ಪತ್ರ ಚಳುವಳಿಗೂ ಸರ್ಕಾರ ಸ್ಪಂದಿಸದಿದ್ದರೆ ಕಾನೂನು ಮೋರೆ : ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಎಚ್ಚರಿಕೆ: ಚಿಕ್ಕೋಡಿ ಜಿಲ್ಲೆಗಾಗಿ ರಾಜ್ಯ ಸರ್ಕಾರಕ್ಕೆ ಹೋರಾಟ ಸಮಿತಿ ಮುಖಂಡರಿಂದ ಹಕ್ಕೋತ್ತಾಯ

ಪತ್ರ ಚಳುವಳಿಗೂ ಸರ್ಕಾರ ಸ್ಪಂದಿಸದಿದ್ದರೆ ಕಾನೂನು ಮೋರೆ  : ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಎಚ್ಚರಿಕೆ: ಚಿಕ್ಕೋಡಿ ಜಿಲ್ಲೆಗಾಗಿ ರಾಜ್ಯ ಸರ್ಕಾರಕ್ಕೆ ಹೋರಾಟ ಸಮಿತಿ ಮುಖಂಡರಿಂದ ಹಕ್ಕೋತ್ತಾಯ

ಲೋಕದರ್ಶನ ವರದಿ 

 

ಚಿಕ್ಕೋಡಿ: ಚಿಕ್ಕೋಡಿ ಜಿಲ್ಲೆ ಆಗಬೇಕೆಂದು ಕಳೆದ ಮೂವತ್ತು ವರ್ಷಗಳಿಂದ ಹೋರಾಟ ನಡೆದುಕೊಂಡು ಬಂದಿದೆ. ಆದರೂ ಸರ್ಕಾರ ಮನಸ್ಸು ಮಾಡುತ್ತಿಲ್ಲ, ಮುಂಬರುವ ದಿನಗಳಲ್ಲಿ ಜಿಲ್ಲೆ ಮಾಡಬೇಕೆಂದು ಪತ್ರ ಚಳುವಳಿ ಆರಂಭಿಸಲಾಗುತ್ತದೆ. ಅದಕ್ಕೂ ಸರ್ಕಾರ ಸ್ಪಂಧನೆ ಮಾಡದೇ ಹೋದರೇ ಕಾನೂನು ಮೋರೆ ಹೋಗಬೇಕಾಗುತ್ತದೆ ಎಂದು ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. 

ಇಲ್ಲಿನ ಐಎಂಎ ಸಭಾಭವನದಲ್ಲಿ ನಡೆದ ಚಿಕ್ಕೋಡಿ ಜಿಲ್ಲೆಗಾಗಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹಕ್ಕೋತ್ತಾಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಚಿಕ್ಕೋಡಿ ಬಂದ್ ಹೀಗೆ ಹತ್ತು ಹಲವು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದರೂ ಪ್ರಯೋಜನೆವಾಗಿಲ್ಲ, ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿಗಳಿಗೆ 10 ಸಾವಿರ ಪತ್ರ ಬರೆದು ಪತ್ರ ಚಳುವಳಿ ಆರಂಭಿಸಲಾಗುತ್ತದೆ ಎಂದರು. 

ಗಡಿ ಸಮಸ್ಯೆ ನೆಪವೊಡ್ಡಿ ಜಿಲ್ಲೆ ವಿಭಜನೆ ಮಾಡದೇ ಇರುವುದು ವಿಪರ್ಯಾಸ. ಗಡಿ ಸಮಸ್ಯೆ ಇದ್ದರೇ ಗಡಿ ಭಾಗದ ತಾಲೂಕು ಏಕೆ ರಚನೆ ಮಾಡಿದ್ದಿರೀ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಚಿಕ್ಕೋಡಿ ಜಿಲ್ಲೆಯಾದರೇ ಗಡಿ ಮತ್ತಷ್ಟು ಗಟ್ಟಿಯಾಗುತ್ತದೆ. ಪ್ರತ್ಯೇಕ ಅನುದಾನ ಹರಿದು ಬರುವುದರಿಂದ ಗಡಿ ಭಾಗ ಅಭಿವೃದ್ಧಿ ಕಾಣುತ್ತದೆ. ಈ ಭಾಗದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು. 

ನ್ಯಾಯವಾದಿ ಎಂ.ಬಿ.ಪಾಟೀಲ ಮಾತನಾಡಿ, ಚಿಕ್ಕೋಡಿ ಜಿಲ್ಲೆ ಬೇಡಿಕೆ ಇದು ನಮ್ಮ ಹಕ್ಕು. ಇದನ್ನು ಕಿತ್ತುಕೊಳ್ಳುವ ದುಸ್ಸಾಹಕ್ಕೆ ಸರ್ಕಾರ ಕೈಹಾಕಬಾರದು. ಚಿಕ್ಕೋಡಿ ಜಿಲ್ಲೆಗಾಗಿ ಕಾನೂನು ಹೋರಾಟ ಮಾಡುವ ಮೂಲಕ ಜಿಲ್ಲೆಗಾಗಿ ಹೋರಾಟ ಆರಂಭಿಸುವುದು ಅನಿವಾರ್ಯ ಎಂದರು. 

ಡಾ,ಎನ್‌.ಎ.ಮಗದುಮ್ಮ ಮಾತನಾಡಿ, ಸಾರ್ವಜನಿಕ ಕೆಲಸ. ಕಾರ್ಯಗಳು ನಡೆಯಲು ಜಿಲ್ಲೆ ಅವಶ್ಯಕ. ಜಿಲ್ಲೆ ಘೋಷಣೆ ಮಾಡದೇ ಯಾವ ಪುರುಷರ್ಥಕ ರಾಜಕಾರಣ ಮಾಡುತ್ತಾರೆ.ಜನರಿಗೆ ತೊಂದರೇ ಆಗೋದು ಕಾಣುವುದಿಲ್ಲವಾ? ಎಂದು ಪ್ರಶ್ನಿಸಿದರು.  

ಚರಮೂರ್ತಿಮಠದ ಸಂಪಾದನ ಸ್ವಾಮೀಜಿ, ಆರ್‌.ಎಚ್‌.ಗೊಂಡೆ, ಉದ್ಯಮಿ ರವಿ ಹಂಪನ್ನವರ. ನ ಚಂದ್ರಕಾಂತ ಹುಕ್ಕೇರಿ. ರಾಜೇಂದ್ರ ಕೋಳಿ. ಸಂಜು ಬಡಿಗೇರ. ಕಾಶಿನಾಥ ಕುರಣಿ. ವಿರೂಪಾಕ್ಷಿ ಕವಟಗಿ ಮುಂತಾದವರು ಮಾತನಾಡಿದರು. 


ಸುದ್ದಿ ಓದಿ