ಹಂಪಿ ಉತ್ಸವ ನಡೆಸದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ : ಸೋಮಶೇಖರರೆಡ್ಡಿ

ಹಂಪಿ ಉತ್ಸವ ನಡೆಸದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ : ಸೋಮಶೇಖರರೆಡ್ಡಿ

ಬಳ್ಳಾರಿ 02: ಬರಗಾಲದ ನೆಪದಿಂದ ಹಂಪಿ ಉತ್ಸವ ಆಚರಿಸದಿದ್ದರೇ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಭಾರತಿಯ ಜನತಾ ಪಕ್ಷ ಸಕರ್ಾರಕ್ಕೆ ಎಚ್ಚರಿಕೆ ನೀಡಿದೆ. ಈ ಕುರಿತು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಅವರು ರಾಜ್ಯದ ಜನತೆಗೆ ಬೇಡವಾದವರ ಜಯಂತಿಯನ್ನು ಸಕರ್ಾರ ಆದ್ದೂರಿಯಾಗಿ ಆಚರಿಸುತ್ತದೆ. ಮೈಸೂರು ದಸರ ಇನ್ನೀತರ ಉತ್ಸವಗಳನ್ನು ಸಹ ಆಚರಿಸುವ ಸಕರ್ಾರ ಅದಕ್ಕೆ ಬರಗಾಲವಿಲ್ಲವೇ? ಹಂಪಿ ಉತ್ಸವಕ್ಕೆ ಮಾತ್ರ ಬರಗಾಲವೇ ಎಂದು ಪ್ರಶ್ನಿಸಿದರು. ಹಂಪಿ ಉತ್ಸವ ನಡೆಸುವಂತೆ ಈಗಾಗಲೇ ಕಲಾವಿದರು, ಸಾಹಿತಿಗಳು, ಪ್ರತಿಭಟನೆ ದಿನಾಂಕ 16 ರಂದು ಹಂಪಿಯಲ್ಲಿ ಜನೋತ್ಸವ ಮಾಡಲು ಮುಂದಾಗಿದ್ದಾರೆ. ಅದಕ್ಕೆ ನಮ್ಮ ಪಕ್ಷ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು. ಸಕರ್ಾರವೇ ಕೂಡಲೇ ಹಂಪಿ ಉತ್ಸವ ನಡೆಸಲು ಮುಂದಾಗಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಲಿದ್ದೇವೆ. ಈ ಬಗ್ಗೆ ಸ್ಪಷ್ಟ ನಿಧರ್ಾರ ಪ್ರಕಟಿಸದಿದ್ದರೆ ನಮ್ಮ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಂಪಿ ಉತ್ಸವ ನಡೆಯಲು ಒತ್ತಾಯಿಸಿ ಪ್ರತಿಭಟನೆ ನಡೆಸಲು ಮುಂದಾಗಬೇಕಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ಬಳ್ಳಾರಿ ಶಾಸಕ ಸೋಮಶೇಖರರೆಡ್ಡಿ ನಾವು ಜಿಲ್ಲೆಯಾದ್ಯಂತ ಬಿಕ್ಷೆಯನ್ನು ಬೇಡಿ ಬಂದ ಹಣದಿಂದ ಹಂಪಿ ಉತ್ಸವ ಆಚರಿಸಿಯೇ ತಿರುತ್ತೇವೆ ಎಂದು ತಿಳಿಸಿದರು. ಈ ವರ್ಷವು ಸಹ ಮೂರುದಿನಗಳ ಕಾಲ ಉತ್ಸವ ನಡೆಯಲೇ ಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಹೊರ ಜಿಲ್ಲೆಯವರಾಗಿರುವ್ಯದರಿಂದ ಅವರಿಗೆ ಆಸಕ್ತಿ ಇಲ್ಲ. ಇದೇ ಜಿಲ್ಲೆಯವರಾಗಿದ್ದರೇ ಆಸಕ್ತಿ ಇರುತ್ತಿತ್ತು ಎಂದು ಆರೋಪಿಸಿದರು. ಇದೇ ತಿಂಗಳು 10 ರಿಂದ ಆರಂಭವಾಗುವ ಬೆಳಗಾವಿಯಲ್ಲಿಯ ಚಳಿಗಾಲದ ಅದಿವೇಶನದಲ್ಲಿ ಪ್ರಶ್ನೆ ಮಾಡುವುದಾಗಿ ತಿಳಿಸಿದರು. ಉಪಚುನಾವಣೆಯಲ್ಲಿ ಗೆದ್ದೀವಿ ಎಂದು ಲಕ್ಷ್ಯಾಂತರ ರೂಪಾಯಿ ಖಚರ್ು ಮಾಡಿ ಆದ್ದೂರಿ ಸಮಾರಂಭ ಮಾಡುವವರು ಹಂಪಿ ಉತ್ಸವಕ್ಕೆ ಬರಗಾಲ ಎನ್ನುವುದು ಸರಿ ಅಲ್ಲ ಎಂದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದಶರ್ಿ ರಾಮಲಿಂಗಪ್ಪ, ಮುರಾರಿಗೌಡ, ಮಲ್ಲನಗೌಡ, ಶ್ರೀನಿವಾಸ ಮೊತ್ಕರ್, ಜಿ.ವೀರುಪಾಕ್ಷಗೌಡ, ಜಡೆಗೌಡ, ಶ್ರೀನಿವಾಸ ಪಾಟಿಲ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಓದಿ