ಮನರಂಜನೆ

‘ಆಕೆ ಖುಷಿಯಾಗಿದ್ದರೆ, ನನಗೂ ಖುಷಿ’ ವಿಚ್ಛೇದನ ಬಗ್ಗೆ ಮೊದಲ ಬಾರಿ ಮೌನ ಮುರಿದ ನಾಗಚೈತನ್ಯ

‘ಆಕೆ ಖುಷಿಯಾಗಿದ್ದರೆ, ನನಗೂ ಖುಷಿ’ ವಿಚ್ಛೇದನ ಬಗ್ಗೆ ಮೊದಲ ಬಾರಿ ಮೌನ ಮುರಿದ ನಾಗಚೈತನ್ಯ

ಹೈದರಾಬಾದ್: ಜನೆವರಿ 13 ಟಾಲಿವುಡ್ ನಟ ನಾಗಚೈತನ್ಯ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಮುಂಬರುವ ಚಿತ್ರ ಬಂಗಾರರಾಜು ಪ್ರಚಾರ ಸಮಯದಲ್ಲಿ ವಿಚ್ಛೇದನವು ಆ ಪರಿಸ್ಥಿತಿಗೆ ಉತ್ತಮ ನಿರ್ಧಾರ ಎಂದು ಹೇಳಿದ್ದಾರೆ.

ಅಕ್ಟೋಬರ್ 2 ರಂದು, ನಾಗಚೈತನ್ಯ ಮತ್ತು ಸಮಂತ ವಿಚ್ಛೇದನ ತೆಗೆದುಕೊಳ್ಳುತ್ತಿರುವ ತಮ್ಮ ನಿರ್ಧಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿ. ದಶಕದ ಸ್ನೇಹವನ್ನು ಮುಂದುವರೆಸುವುದಾಗಿ ಹೇಳಿದ್ದರು.

ವಿಚ್ಛೇದನವನ್ನು ಎದುರಿಸುತ್ತಿರುವ ಸಂಗತಿಯ ಬಗ್ಗೆ ಸಮಂತಾ ಮಾತನಾಡಿದ್ದರೆ, ನಾಗ ಚೈತನ್ಯ ಮೌನವನ್ನು ಕಾಯ್ದುಕೊಂಡಿದ್ದರು. ಕಳೆದ ಕೆಲವು ದಿನಗಳಿಂದ, ಚೈತನ್ಯ ತಮ್ಮ ಮುಂಬರುವ ಚಿತ್ರ ಬಂಗಾರರಾಜು ಪ್ರಚಾರದಲ್ಲಿ ನಿರತರಾಗಿದ್ದಾರೆ, ಇದರಲ್ಲಿ ಅವರು ತಮ್ಮ ತಂದೆ ನಾಗಾರ್ಜುನ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

ಪ್ರಚಾರದ ಸಮಯದಲ್ಲಿ, ನಾಗ ಚೈತನ್ಯ ಬಳಿ ವಿಚ್ಛೇದನ ಕುರಿತು ಕೇಳಿದಾಗ, ಪರವಾಗಿಲ್ಲ, ವೈಯಕ್ತಿಕವಾಗಿ ನಮ್ಮಿಬ್ಬರ ಒಳಿತಿಗಾಗಿ ತೆಗೆದುಕೊಂಡಿರುವ ನಿರ್ಧಾರ, ಆಕೆ (ಸಮಂತಾ) ಖುಷಿಯಾಗಿದ್ದರೆ, ನನಗೂ ಖುಷಿ.. ಆ ಪರಿಸ್ಥಿತಿಯಲ್ಲಿ ಅದೇ ಅತ್ಯುತ್ತಮ ನಿರ್ಧಾರ ಎಂದು ಹೇಳಿದ್ದಾರೆ

ಸುದ್ದಿ ಓದಿ