ಶಿಗ್ಗಾವ್

ಬೂತ್ ಪ್ರಾಮಾಣಿಕತೆಯಿಂದ ಗಟ್ಟಿಯಾದರೆ ಪಕ್ಷ ಗಟ್ಟಿಯಾಗುತ್ತದೆ : ಮಯೂರ್

ಬೂತ್ ಪ್ರಾಮಾಣಿಕತೆಯಿಂದ ಗಟ್ಟಿಯಾದರೆ ಪಕ್ಷ ಗಟ್ಟಿಯಾಗುತ್ತದೆ : ಮಯೂರ್

ಶಿಗ್ಗಾವಿ 15: ಮನೆ ಕಟ್ಟಲು ತಳಹದಿ ಗಟ್ಟಿ ಇರಬೇಕು ಹಾಗೆ ಪಕ್ಷ ಕಟ್ಟಲು ಬೂತ್ ಗಟ್ಟಿಯಾಗಿರಬೇಕು ಬೂತಿನಲ್ಲಿಯ  ಪದಾಧಿಕಾರಿಗಳು ಪ್ರಾಮಾಣಿಕತೆಯಿಂದ ಮಾಹಿತಿ ಪಡೆದು ಮತದಾರರ ಜೊತೆ ಸಂಪರ್ಕ ಹೊಂದಿದಾಗ ಮಾತ್ರ ಪ್ರತಿಯೊಂದು ಭೂತಗಳಲ್ಲಿ ಶಕ್ತಿ ಬರುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ್ ಜಯಕುಮಾರ ಹೇಳಿದರು. 

ತಾಲೂಕಿನ  ಬಂಕಾಪುರದ ಅಂಬೇಡ್ಕರ ಭವನದಲ್ಲಿ ಜರುಗಿದ ಬಂಕಾಪುರ ಪುರಸಭೆ ವ್ಯಾಪ್ತಿಯ ಬೂತುಗಳ ಪರೀಶೀಲನೆ ಹಾಗೂ ಬೂತ್ ಅಧ್ಯಕ್ಷರು ಮತ್ತು ಸದಸ್ಯರ ಜೊತೆ ಚರ್ಚಿಸಿ ಮಾತನಾಡಿದ  ಅವರು ಈ ಕೆಲಸ ನಿರ್ವಹಿಸಲೆಂದೇ ಕಾಂಗ್ರೆಸ್ ಪಕ್ಷ ಹಾಗೂ ಪ್ರತಿ ಪಕ್ಷ ನಾಯಕ ರಾಹುಲ್ ಗಾಂಧಿಯವರು ನನ್ನನ್ನು ಉಸ್ತುವಾರಿಯನ್ನಾಗಿ ಕಳಿಸಿರುತ್ತಾರೆ ನಿಮ್ಮೆಲ್ಲರ ಸಹಕಾರ ಇದ್ದರೆ ಮಾತ್ರ ಈ ಕಾರ್ಯ ಯಶಸ್ವಿಯಾಗುತ್ತದೆ ಯಾವುದು ಸುಲಭವಾಗಿ ದೊರೆಯುವುದಿಲ್ಲ ಪ್ರಾಮಾಣಿಕ ಕೆಲಸವು ಆಗಲೇಬೇಕು  ಪಕ್ಷದ ಹಿತದೃಷ್ಟಿಯಿಂದ, ಇದಕ್ಕೆ ಆಕಾಂಕ್ಷಿಗಳು ಪಕ್ಷದ ಜಿಲ್ಲೆ ಮತ್ತು ತಾಲೂಕಿನ ಪದಾಧಿಕಾರಿಗಳು ಚುನಾಯಿತ ಪ್ರತಿನಿಧಿಗಳಿಂದ ಸಮನ್ವಯತೆ ಕಾಪಾಡಿಕೊಳ್ಳಲೇಬೇಕು ಎಂದು ಸಭೆಗೆ ತಿಳಿಸಿದರು. 

 ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿದರು ಈ ಸಭೆಯಲ್ಲಿ ಕೆಪಿಸಿಸಿ ಬಾಲಕೃಷ್ಣ, ಮಾಜಿ ಸಂಸದ ಮಂಜುನಾಥ ಕುನ್ನೂರ, ಗಡಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ,  ಆಕಾಂಕ್ಷಿಗಳಾದ ಮಾಜಿ ಶಾಸಕ ಸಯ್ಯದ್ ಅಜ್ಜಂಪೀರ್ ಖಾದ್ರಿ, ಮುಖಂಡ ಯಾಸಿರ್‌ಖಾನ್ ಪಟಾಣ್, ಮಾಜಿ ಸಚಿವ ಆರ್‌.ಶಂಕರ, ಮಂಜುನಾಥ ಮಣ್ಣಣ್ಣವರ, ಸಿಎಂ ಪೈಜ್,  ರಾಜೇಶ್ವರಿ ಪಾಟೀಲ,ನೂರಅಹ್ಮದ್ ಮಳಗಿ, ಪ್ರೇಮ ಪಾಟೀಲ, ಹನುಮಂತ ಬಂಡಿವಡ್ಡರ, ಕೆಪಿಸಿಸಿ, ಡಿಸಿಸಿ ಪದಾಧಿಕಾರಿಗಳು, ಪುರಸಭೆ ಸದಸ್ಯರು ಭೂತ್ ಅಧ್ಯಕ್ಷರುಗಳು, ಸದಸ್ಯರು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. 


ಸುದ್ದಿ ಓದಿ