‘ಬಸವಣ್ಣನವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಪಾವನ’
ಲೋಕದರ್ಶನ ವರದಿ
ಸಂಕೇಶ್ವರ 16: ಬಸವಣ್ಣನವರು ವಿಶ್ವಕ್ಕೆ ಗುರುವಾಗಿದ್ದರು, ಅವರ ವಚನಗಳನ್ನು ದಿನನಿತ್ಯ ಓದಿ ಜೀವನದಲ್ಲಿ ಅಳವಡಿಕೊಂಡರೆ ಜೀವನ ಪಾವನವಾಗುತ್ತದೆ ಎಂದು ಬಸವ ಭವನ ಹೆಬ್ಬಾಳ, ಉತ್ತರಾಧಿಕಾರಿ ನಿಷ್ಕಲ ಮಂಟಪ ಬೈಲೂರಿನ ಬಸವಚೇತನ ದೇವರು ಹೇಳಿದರು.
ಸಂಕೇಶ್ವರ ನಗರದ ದುರದುಂಡೀಶ್ವರ ಮಠದ ಆವರಣದಲ್ಲಿ ದಿ.13ರಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕಾ ಘಟಕ ಹುಕ್ಕೇರಿ ಮತ್ತು ಸಂಕೇಶ್ವರ ಇವರ ಆಶ್ರಯದಲ್ಲಿ ಆಯೋಜಿಸಲಾದ ಗುರು ಪೂರ್ಣಿಮಾ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಅವರು ಆಶಿರ್ವಚನ ನೀಡಿದರು.
ಕಾರ್ಯಕ್ರಮವನ್ನು ದ್ವೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾದ ರತ್ನಪ್ರಭಾ ಬೆಲ್ಲದ ಅವರು ಮಹಾಸಭೆ ಸ್ಥಾಪನೆ ಮತ್ತು ಬೆಳವಣಿಗೆ ಕುರಿತು ಮಾತನಾಡಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಹುಕ್ಕೇರಿ ತಾಲೂಕಾ ಘಟಕದ ಅಧ್ಯಕ್ಷರಾದ ಹೇಮಲತಾ ಇಂಡಿ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಜಲಟ್ಟಿಯ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ವ್ಹಿ.ಬಿ.ಚೌಗಲಾ ಅವರು ಉಪನ್ಯಾಸವನ್ನು ನೀಡುತ್ತ, ಬಸವಣ್ಣನವರು ಜಾತಿ, ವರ್ಣ, ವರ್ಗ ರಹಿತ ಸಮಾಜವನ್ನು ಹೇಗೆ ಕಟ್ಟಿದರು ಎನ್ನುವದರ ಕುರಿತು ವಿವರಿಸಿದರು. ಜೋತಿ ಗಾಡವಿ ನಿರೂಪಿಸಿದರು. ಶ್ರೇಯಸ್ ಗಾಡವಿ ಪ್ರಾಥನೆ ಸಲ್ಲಿಸಿದರು.
ಲೋಕದರ್ಶನ ವರದಿ