ಐಟಿಐ ಪ್ರವೇಶ ಆರಂಭ
ಚಿಕ್ಕೋಡಿ 20: ನಗರದ ಹೊರವಲಯದ ಅಗ್ನಿಶಾಮಕ ಠಾಣೆಯ ಎದುರಿಗೆ ನೂತನವಾಗಿ ಆರಂಭವಾದ ಎಸ್.ಎಲ್.ಎಸ್. ಶಿಕ್ಷಣ ಸಂಸ್ಥೆಯ ಶಾಂತಪ್ಪಣ್ಣಾ ಮಿರಜಿ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿ.ಐ.) ಪ್ರವೇಶಗಳು ಆರಂಭವಾಗಿದೆ. ಎಲೆಕ್ಟ್ರಿಷಿನ್, ಎಲೆಕ್ಟ್ರಿಷಿಯನ್ ಪಾವರ್ ಡಿಸ್ಟ್ರಿಬ್ಯೂಷನ್, ಫಿಟರ್ ಹಾಗೂ ಸ್ಮಾರ್ಟಫೋನ್ ಟೆಕ್ನಿಶಿಯನ್ ಕೋರ್ಸ್ಗಳು ಲಭ್ಯವಿದ್ದು, ಪ್ರಸಕ್ತ ವರ್ಷದ 2024-2025 ಸಾಲಿನ ಪ್ರವೇಶ ಪ್ರಕ್ರಿಯೆಗಳು ಆರಂಭವಾಗಿದ್ದು. ಇದೇ ತಿಂಗಳು 30 ಕೊನೆಯ ದಿನಾಂಕವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.