ರಾಷ್ಟ್ರೀಯ

ಐಟಿ ರಿಟರ್ನ್ ಫೈಲಿಂಗ್ ಗೆ... ಜನವರಿ 31ರವರೆಗೆ ಅವಕಾಶ

ಐಟಿ ರಿಟರ್ನ್  ಫೈಲಿಂಗ್ ಗೆ... ಜನವರಿ 31ರವರೆಗೆ  ಅವಕಾಶ

ನವದೆಹಲಿ, ಡಿ 3 :ಕೊರೊನಾ ವೈರಸ್   ಹರಡುವುದನ್ನು  ನಿಗ್ರಹಿಸಲು   ಕೈಗೊಂಡ  ಕ್ರಮಗಳ  ಭಾಗವಾಗಿ  ಕೇಂದ್ರ  ಹಣಕಾಸು ಸಚಿವಾಲಯ 2019-20 ಸಾಲಿನ ಹಣಕಾಸು ವರ್ಷಕ್ಕೆ ಸಂಬಂಧಿಸಿದ  ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು  ಡಿಸೆಂಬರ್ 31 ಕ್ಕೆ ವಿಸ್ತರಿಸಿತ್ತು.  ಈಗ  ಮತ್ತೊಮ್ಮೆ ಈ ಗಡುವನ್ನು ಜನವರಿ 31ರ ವರೆಗೆ ವಿಸ್ತರಿಸಿದೆ. ಕೊರೊನಾ ವೈರಸ್‌ ಕಾರಣದಿಂದಾಗಿ ಐಟಿ ರಿಟರ್ನ್ಸ್ ಸಲ್ಲಿಸಲು ತೆರಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಗಡುವನ್ನು ಮತ್ತೆ  ವಿಸ್ತರಿಸಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವಿಟರ್‌ನಲ್ಲಿ ತಿಳಿಸಿದೆ.ಖಾತೆಗಳನ್ನು ಲೆಕ್ಕಪರಿಶೋಧಿಸಲು ತೆರಿಗೆ ಪಾವತಿದಾರರಿಗೆ ಐ ಟಿ ಆರ್ ಸಲ್ಲಿಸುವ ಗಡುವನ್ನು ಮುಂದಿನ ವರ್ಷ ಜನವರಿ 31 ಕ್ಕೆ ವಿಸ್ತರಿಸಲಾಗಿದೆ. ಐಟಿ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು ಹಣಕಾಸು ಸಚಿವಾಲಯ ವಿಸ್ತರಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಕೊರೊನಾ ಸಾಂಕ್ರಾಮಿಕ ಹಿನ್ನಲೆಯಲ್ಲಿ   ಮೇ ತಿಂಗಳಲ್ಲಿ  ಮೊದಲ ಬಾರಿಗೆ ಮುಂದೂಡಲಾಗಿತ್ತು ಈಗ ಮತ್ತೊಮ್ಮೆ ವಿಸ್ತರಿಸಿದೆ.

ಸುದ್ದಿ ಓದಿ