ಬಳ್ಳಾರಿ

ಐಪಿಎಲ್ ಫೈನಲ್ ಪಂದ್ಯಾವಳಿ; ಎಲ್.ಇ.ಡಿ. ಪರದೆಯಲ್ಲಿ ನೇರ ಪ್ರಸಾರ ವೀಕ್ಷಣೆಗೆ ಉಚಿತ ಪ್ರವೇಶ

ಐಪಿಎಲ್ ಫೈನಲ್ ಪಂದ್ಯಾವಳಿ; ಎಲ್.ಇ.ಡಿ. ಪರದೆಯಲ್ಲಿ ನೇರ ಪ್ರಸಾರ ವೀಕ್ಷಣೆಗೆ ಉಚಿತ ಪ್ರವೇಶ

ಬಳ್ಳಾರಿ 27 :  ಬಳ್ಳಾರಿ ಜಿಲ್ಲಾಡಳಿತವು, ಐಪಿಎಲ್ 2023 ರ ಫೈನಲ್ ಪಂದ್ಯಾವಳಿಯ ನೇರ ಪ್ರಸಾರ ವೀಕ್ಷಣೆ ಮಾಡಲು ಡಾ.ರಾಜ್ಕುಮಾರ್ ರಸ್ತೆಯ ಬಿಡಿಎಎ ಫುಟ್ಬಾಲ್ ಮೈದಾನದಲ್ಲಿ ಎಲ್ಇಡಿ ಪರದೆಯ ವ್ಯವಸ್ಥೆ ಕಲ್ಪಿಸಲಾಗಿದೆ.   ಐಪಿಎಲ್ ನ 16 ನೇ ಆವೃತ್ತಿಯ ಫೈನಲ್ ಪಂದ್ಯಾವಳಿಯು ಮೇ 28 ರ ಭಾನುವಾರದಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿದ್ದು, ಮ್ಯಾಚ್ ನ ನೇರ ಪ್ರಸಾರವನ್ನು ಮೇ 28 ರಂದು ಸಂಜೆ 7.30 ಕ್ಕೆ ನಗರದ ಡಾ.ರಾಜ್ಕುಮಾರ್ ರಸ್ತೆಯ ಬಿಡಿಎಎ ಫುಟ್ಬಾಲ್ ಮೈದಾನದಲ್ಲಿ ಎಲ್ಇಡಿ ಪರದೆಯಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.    ಸಾರ್ವಜನಿಕರಿಗೆ ಪಂದ್ಯಾವಳಿಯನ್ನು ವೀಕ್ಷಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ 

ಸುದ್ದಿ ಓದಿ