ರಾಣೆಬೆನ್ನೂರ

ಬಸ್ ಸಮಸ್ಯೆ ಖುದ್ದು ನಿವಾರಿಸುವೆ: ಪೂಜಾರ ಭರವಸೆ

ಬಸ್ ಸಮಸ್ಯೆ ಖುದ್ದು ನಿವಾರಿಸುವೆ: ಪೂಜಾರ ಭರವಸೆ

ರಾಣಿಬೆನ್ನೂರ 11:  ಪ್ರತಿ ರವಿವಾರದಂದು ಗ್ರಾಮಕ್ಕೆ ಬಸ್ ಬರುವುದಿಲ್ಲ. ಇದರಿಂದಾಗಿ ರೈತಾಪಿ ವರ್ಗದ ಜನರಿಗೆ ಮತ್ತು ಕೂಲಿಕಾರ್ಮಿರಿಗೆ ರಾಣೇಬೆನ್ನೂರಿಗೆ ತೆರಳು ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಶಾಸಕ ಅರುಣಕುಮಾರ ಪೂಜಾರ ಅವರು ಇತ್ತೀಚೆಗೆ ತಾಲೂಕಿನ ಚೌಡಯ್ಯದಾನಪುರ ಗ್ರಾಮಕ್ಕೆ ಆಗಮಿಸಿದಾಗ ಮನವಿ ಮಾಡಿದ್ದರು.  

ನಂತರ ಮೌಖಿಕವಾಗಿ ಗ್ರಾಮಸ್ಥರಿಗೆ ಶಾಸಕ ಪೂಜಾರ ಅವರು ಬರುವ ರವಿವಾರ ನಾನೇ ಖುದ್ದಾಗಿ ಬಸ್ ನಲ್ಲಿಯೇ ಬರುತ್ತೇನೆ. ನಿಮ್ಮಗಳ ಸಮಸ್ಯೆಯನ್ನು ಇತ್ಯರ್ಥಗೊಳಿಸುತ್ತೇನೆ ಎಂದಿದ್ದರು. ಕೊಟ್ಟ ಮಾತಿಗೆ ತಪ್ಪದಂತೆ ರವಿವಾರದಂದು ಶಾಸಕ ಪೂಜಾರ ಅವರು ರಾಣೇಬೆನ್ನೂರ ನಿಂದ ಚೌಡಯ್ಯದಾನಪುರ ಗ್ರಾಮಕ್ಕೆ ಬಸ್‌ನಲ್ಲಿಯೇ ಆಗಮಿಸಿ ಗ್ರಾಮಸ್ಥರ ಹರ್ಷಕ್ಕೆ ಕಾರಣರಾದರು. 

ಸುಕ್ಷೇತ್ರ ಹಾಗೂ ಪ್ರವಾಸಿ ತಾಣವಾಗಿರುವ ಚೌಡಯ್ಯದಾನಪುರ ಗ್ರಾಮಕ್ಕೆ ಪ್ರತಿ ರವಿವಾರ ಬಸ್ ಬಾರದೆ ಇರುವುದರಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಮತ್ತು ಚೌಡಯ್ಯದಾನಪುರದಿಂದ ರಾಣೇಬೆನ್ನೂರಿಗೆ ತೆರಳು ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಅಲ್ಲದೇ ರವಿವಾರ ರಾಣೇಬೆನ್ನೂರ ನಗರದಲ್ಲಿ ಸಂತೆ ದಿನವಾದ್ದರಿಂದ ಸಂತೆಗೆ ತೆರಳಲೂ ಸಹ ಅನಾನನುಕೂಲವಾಗಿತ್ತು. 

ಈ ವಿಚಾರಗಳನ್ನು ಗ್ರಾಮಸ್ಥರು ಶಾಸಕ ಅರುಣಕುಮಾರ ಪೂಜಾರವರಿಗೆ ಮನವರಿಕೆ ಮಾಡಿದಾಗ ಬರುವ ರವಿವಾರವೇ ಬಸ್ ಬರುತ್ತದೆ. ಬಸ್‌ನಲ್ಲಿ ನಾನೇ ಬರ್ತೇನಿ ಅಂತಾ ಹೇಳಿಹೊಗಿದ್ದರು. ಮಾತಿನ ಪ್ರಕಾರ ಬಸ್‌ನಲ್ಲಿಯೇ ಬಂದು ಸಾರಿಗೆ ಇಲಾಖೆಯವರನ್ನೂ ಸಹ ಕರೆತಂದು ಗ್ರಾಮಕ್ಕೆ ಇನ್ನು ಮುಂದೆ ಬಸ್‌ನ ಅನಾನುಕೂಲತೆಯಾಗದಂತೆ ಸಮಯಕ್ಕೆ ಸರಿಯಾಗಿ ಬಸ್ ಓಡಿಸುವಂತೆ ಸೂಚಿಸಿದರು. 

ಬಸ್‌ನಲ್ಲಿಯೇ ಬಂದು ಗ್ರಾಮಕ್ಕೆ ಬಸ್ ಸೌಲಭ್ಯವನ್ನು ಕಲ್ಪಿಸಿದ ಶಾಸಕ ಪೂಜಾರವರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚೋಳಪ್ಪ ಕಸವಾಳ, ಬಸವರಾಜ ಚಳಗೇರಿ, ಪ್ರವೀಣ, ಗೀರೀಶ ಹುಗ್ಗಿ, ಗ್ರಾಮಸ್ಥರಾದ ಲಕ್ಷ್ಮಣ ದೀಪಾವಳಿ, ಬಸಯ್ಯ ಪೂಜಾರ, ದೇವರಾಜ ಆನಿಶೆಟ್ರ, ಶಂಬುಲಿಂಗಪ್ಪ ಭತ್ತದ, ಬೀರ​‍್ಪ ಎರೇಶೀಮಿ, ಸಿದ್ದಪ್ಪ ನಾಗನೂರ, ಕೃಷ್ಣಪ್ಪ ಅರಸಪ್ಪನವರ,  ಸುರೇಶಪ್ಪ ಅಡ್ಡಂಗಡಿ, ಶಂಬುಲಿಂಗಪ್ಪ ಚಕ್ರಸಾಲಿ, ವೀರಣ್ಣ ಬಡಿಗೇರ ಸೇರಿದಂತೆ ಸಾರಿಗೆ ನಿಯಂತ್ರಕರಾದ ರಮೇಶ ಎತ್ತಿನಹೊಳೆ, ಆಡೂರ ಮತ್ತಿತರರು ಇದ್ದರು. 


ಸುದ್ದಿ ಓದಿ