ಸಮಾಜದ ಏಳ್ಗೆಗಾಗಿ ನನ್ನ ಜೀವನವನ್ನು ಮುಡುಪಾಗಿಟ್ಟಿದ್ದೇನೆ
ಶಿರಹಟ್ಟಿ 11: ನನ್ನ ನೌಕರಿ ಸೇವೆ ಇರುವ ಇನ್ನು ಒಂದು ವರ್ಷ ಮೊದಲೇ ನನ್ನ ನೌಕರಿ ಸೇವೆಗೆ ಸ್ವಯಂ ನಿವೃತ್ತಿ ಕೊಟ್ಟು ಪಂಚಮಸಾಲಿ ಸಮಾಜವನ್ನು ಕಟ್ಟಲಿಕ್ಕೆ ನನ್ನ ಜೀವನವನ್ನು ಮುಡುಪಾಗಿಟ್ಟಿದ್ದೇನೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ನಿಯೋಜಿತ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ ಹೇಳಿದರು.
ಅವರು ಮಂಗಳವಾರ ಪಟ್ಟಣದ ನೌಕರರ ಭವನದಲ್ಲಿ ಶಿರಹಟ್ಟಿ ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಈ ಹಿಂದೆ ರಾಜ್ಯಾಧ್ಯಕ್ಷರಾಗಿ 6 ಜನ ಆಗಿ ಹೋಗಿದ್ದಾರೆ, ಅವರು ಹಾಕಿಕೊಟ್ಟ ಮಾರ್ಗಸೂಚಿಗಳನ್ನು ಚಾಚೂ ತಪ್ಪದೇ ಅನುಸರಿಸಿ ಸಮಾಜದ ಏಳ್ಗೆಗಾಗಿ ಪಾಲಿಸುತ್ತೇನೆ, ಜೊತೆಗೆ ಸಮಾಜದ ಕಟ್ಟ ಕಡೆಯ ಬಡ ಕುಟುಂಬಗಳಲ್ಲಿ ವಾಸಿಸುವ ನಮ್ಮ ಸಮಾಜದ ಮಕ್ಕಳ, ನಿರುದ್ಯೋಗಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ನಾನೇ ಸ್ವತಃ ಗ್ರಾಮ ವಾಸ್ತವ್ಯ ಮಾಡಿ ಸಮಾಜದ ಸ್ಥಿತಿಗತಿಗಳನ್ನು ಅರಿತು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಭಗೆಹರಿಸುವ ಪ್ರಾಮಾಣಿಕ ಕೆಲಸವನ್ನು ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ನಗರ ಘಟಕದ ಫಕ್ಕೀರೇಶ ಕಲ್ಯಾಣಿ, ಸೋಮಣ್ಣ ಡಾಣಗಲ್, ಬಸವಣ್ಣೆಪ್ಪ ತುಳಿ, ಎಚ್ ಎಂ. ದೇವಗಿರಿ, ಆರ್ ಬಿ. ಕಮತ್, ಕಾರ್ಯಾಧ್ಯಕ್ಷ ಬಸವರಾಜ ತುಳಿ, ಯಲ್ಲಪ್ಪ ಇಂಗಳಗಿ, ಸುರೇಶ ವರವಿ, ಶಿವಪುತ್ರ್ಪ ಅಕ್ಕಿ, ಸುರೇಶ ಬ್ಯಾಲಹುಣಸಿ, ಮಹೇಶ ಡಾವಣಗೇರಿ ಸೇರಿದಂತೆ ಇನ್ನೂ ಅನೇಕ ಸಮಾಜ ಬಾಂಧವರು ಉಪಸ್ಥಿತರಿದ್ದರು.