ಶಿಗ್ಗಾವ್

ಪಕ್ಷದಿಂದ ನನ್ನನ್ನು ಉಚ್ಚಾಟನೆ ಮಾಡಬಹುದು, ಜನರ ಹೃದಯದಿಂದ ದೂರ ಮಾಡಲು ಸಾಧ್ಯವಿಲ್ಲ : ಸೈಯದ್ ಅಜ್ಜೀಂಪೀರ ಖಾದಿ

ಪಕ್ಷದಿಂದ ನನ್ನನ್ನು ಉಚ್ಚಾಟನೆ ಮಾಡಬಹುದು, ಜನರ ಹೃದಯದಿಂದ ದೂರ ಮಾಡಲು ಸಾಧ್ಯವಿಲ್ಲ : ಸೈಯದ್ ಅಜ್ಜೀಂಪೀರ ಖಾದಿ

ಶಿಗ್ಗಾವಿ 19: ಕಾಂಗ್ರೆಸ್ ಪಕ್ಷ ಅತ್ಯಂತ ದುರ್ಬಲ, ಭ್ರಷ್ಟ ವ್ಯಕ್ತಿಗೆ ಟಿಕೆಟ್ ನೀಡಿದೆ, ಫಾರ್ಟಿ ಫಂಡ್ ಖರ್ಚು ಮಾಡದೆ ಚುನಾವಣೆ ಮಾಡಿ, ಸೋಲು ಕಂಡ ಯಾಸಿರಖಾನ್ ಪಠಾಣ ದ್ವೇಷದ ರಾಜಕಾರಣ ಮಾಡುತ್ತಾ ಇನ್ನೊಬ್ಬರ ಮೇಲೆ ಆಪಾಧನೆ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಸೈಯದ್ ಅಜ್ಜೀಂಪೀರ ಖಾದ್ರಿ ಅವರು ತಮ್ಮ ಆಕ್ರೋಷವನ್ನು ಹೊರಹಾಕಿದರು. 

ಪಟ್ಟಣದ ಪ್ರವಾಸಿ ಮಂದಿರದ ಮುಂಬಾಗದಲ್ಲಿ ಹಮ್ಮಿಕೊಂಡ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಿಂದ ನನ್ನನ್ನು ಉಚ್ಚಾಟನೆ ಮಾಡಿರಬಹುದು ಆದರೆ ಜನತೆಯ ಹೃದಯದಿಂದ ದೂರ ಮಾಡಲು ಸಾಧ್ಯವಿಲ್ಲ, ಕಳೆದ 23 ವರ್ಷಗಳಿಂದ ಅಧಿಕಾರಕ್ಕಾಗಿ ನಾನು ಹಾಳಾಗಿಲ್ಲ ಜನತೆ ಸೇವೆ ಮಾಡಲು ತ್ಯಾಗ ಮಾಡಿದ್ದೆನೆ, ನಾನು ಸ್ವಾರ್ಥ ರಹಿತ ರಾಜಕಾರಣ ಮಾಡಿದ್ದೆನೆ, ಯಾಸಿರಖಾನ್ ಪಠಾಣ ರೌಡಿ ಶೀಟರ್ ಅಂತ ಬಹಿರಂಗ ಪಡಿಸಿಲ್ಲ, ಪಕ್ಷದ ಆದೇಶ ಪಾಲಿಸಲು ನೋವು ನುಂಗಿಕೊಂಡಿದ್ದೆವೆ, ಇವರು ಗುತ್ತಿಗೆದಾರರಿಗೆ ಲಂಚ ಕೇಳಿದ ವಿಡಿಯೋ ವೈರಲ್ಲ ಆಗಿದೆ, ನಾನು ಎಂದು ದ್ವೇಶದ ರಾಜಕಾರಣ ಮಾಡಿಲ್ಲ, ಯಾಸಿರಖಾನ್ ಪಠಾಣ ಕಲೆಕ್ಷನ್ ಗಿರಾಕಿ, ವರ್ಗಾವಣೆ ಮಾಡಲು ಕಾಂಗ್ರೆಸ್ ಟೀಕೆಟ್ ತಂದವನು, ಹೈಕಮಾಂಡಗೆ ತಪ್ಪು ಮಾಹಿತಿ ನೀಡಿದವನು, ನನ್ನ ಟಿಕೆಟ್ ತಪ್ಪಿಸಿದವನು, 9ನೇ ತಾರಿಖಿಗೆ ನನ್ನನ್ನು ಪಕ್ಷದಿಂದ ತೆಗೆದಿದ್ದದರೆ ನನ್ನ ಶಕ್ತಿ ತೊರಿಸುತ್ತಿದ್ದೆ, ಇಂತಹ ನೀಚ ವ್ಯಕ್ತಿಯನ್ನು ಕ್ಷೇತ್ರದ ಜನ ಒಪ್ಪುವದಿಲ್ಲ, ನನನ್ನು ನಿತ್ಯಾನಂದ ಸ್ವಾಮಿಗೆ ಹೊಲಿಕೆ ಮಾಡಿದ ಇವನ ಬಾಯಲ್ಲಿ ಹುಳ ಬೀಳುತ್ತವೆ, 2013 ಮತ್ತು 2018ರಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದವರು, ಶಿಗ್ಗಾವಿಯಲ್ಲಿ ಮುಸ್ಲಿಂ ಗೆಲ್ಲಲ್ಲ ಎಂದು ಮಾಹಿತಿ ನೀಡಿದವರು, ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಲು ಬಂದಿದ್ದಾರೆ, ಕಾರ್ಯಕರ್ತರ ಕೋಲೆ ಮಾಡಲು ಬಂದಿದ್ದಾರೆ, 64 ಸಾವಿರ ಮತಗಳು ಯಾಸಿರಖಾನ್ ಅವರಿಗೆ ಹಾಕಿಲ್ಲ ಪಕ್ಷಕ್ಕೆ ಹಾಕಿದ್ದಾರೆ, ನನ್ನ ಚುನಾವಣೆಲ್ಲಿ ವಿರೊಧ ಮಾಡಿದವರು ಇವರು, ಚುನಾಯಿತ ಅಭ್ಯರ್ಥಿಗಳನ್ನು ಬದಲಿಸಿದ್ದಾರೆ, ನಮ್ಮ ಬೆಂಬಲಿಗರನ್ನು ಬಿಟ್ಟು ಚುನವಣೆ ಮಾಡಿದ್ದಾರೆ, ಅಧಿಕಾರಿಗಳಿಗೆ ವರ್ಗಾವಣೆ ಮಾಡಲು ಈಗಾಗಲೇ ಬುಕ್ ಮಾಡಿಕೊಂಡಿದ್ದಾರೆ, ಇವರೊಬ್ಬ ಮೀರಸಾಧಿಕ್, ಕ್ಷೇತ್ರದ ಮುಸಲ್ಮಾನರನ್ನು ಪಕ್ಷದ ಕಾರ್ಯಕರ್ತರನ್ನು ಕೊಲೆ ಮಾಡಲು ಬಂದಿದ್ದಾನೆ, ಇವರು ಜ್ಯಾತಿವಿಷ ಬೀಜ ಬಿತ್ತಲು ಬಂದಿದ್ದಾರೆ, ಪಾರ್ಟಿ ಫಂಡ್ ಚರ್ಚು ಮಾಡದೆ ಚುನಾವಣೆ ಮಾಡಿದ್ದಾರೆ ಎಂದರು. 

ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಗಡಗಡ ಎಂದು ನಡುಗಿ ಒಲ್ಲೆ ಎಂದು ಓಡಿ ಬಂದವರು ಸೋಮಣ್ಣ ಬೇವಿನಮರದ ಅವರು, ಈಗ ಅವರಿಗೆ ಮುಸಲ್ಮಾನರ ಮೇಲೆ ಪ್ರೀತಿ ಬಂದಿದೆ, ಯಾಸಿರಖಾನ್ ಪಠಾಣ ಅವರಿಗೆ ಟಿಕೆಟ್ ಕೊಡಸಿ ಬಕ್ರ ಮಾಡಿದ್ದಾರೆ, ಬಂಕಾಪೂರದಲ್ಲಿ ಕೋಮು ಗಲಭೆ ಮಾಡಿದವರು ಸೋಮಣ್ಣ, ಕೆಂಪು ಚಡ್ಡಿ ತೆಗೆದು ಹಸಿರು ಟೋಪಿ ಹಾಕಲು ಬಂದಿದ್ದಾರೆ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶಂಭು ಆಜೂರ ಶಿವಳ್ಳಿ ಅವರಿಗೆ ಬೆನ್ನಿಗೆ ಚೂರಿ ಹಾಕಿದ್ದಾರೆ, ಇವರ ತಮ್ಮ ಬೂತನಲ್ಲಿ ಎಷ್ಟು ಮತ ಹಾಕಿಸಿದ್ದಾರೆ ನೊಡಿದ್ರೆ ತಿಳಿಯುತ್ತದೆ, ಜಾತಿವಾದಿಗಳಿಗೆ ಅವಕಾಶ ನಮ್ಮ ಜನ ಕೊಡಬಾರದು ಎಂದರು. ಶಿಗ್ಗಾವಿ ವಿಕಾಸ ಸಂಸ್ಥೆಯನ್ನು  ಪ್ರಾರಂಭಿಸಿ ಭ್ರಷ್ಟರನ್ನು ಮಟ್ಟ ಹಾಕಲು ಹೋರಾಟ ಮಾಡುತ್ತೆವೆ, ಜಿಲ್ಲಾ ಮತ್ತು ತಾಲೂಕ ಪಂಚಾಯತ ಚುನಾವಣೆಯಲ್ಲಿ ನಮ್ಮ ಬೆಂಬಲಿಗರನ್ನು ಗೆಲ್ಲಿಸುತ್ತೆನೆ ಎಂದರು.  

ಕಾರ್ಯಕ್ರಮದಲ್ಲಿ ಮಾತನಾಡಿದ ಕೆಲ ಕಾರ್ಯಕರ್ತರು ನಮ್ಮ ಧರ್ಮಗುರು ಖಾದ್ರಿಯರನ್ನು ಅವಮಾನಿಸಿದ ಯಾಸಿರಖಾನ್ ಪಾಠಾಣ ಖಾದ್ರಿಯವರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಇಲ್ಲವಾದರೆ ಅವರ ವಿರುದ್ದ ಹೋರಾಟಗಳು ನಡೆಯುತ್ತವೆ ಎಂದು ಆಕ್ರೋಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನೂರಾರು ಮುಖಂಡು ಕಾರ್ಯಕರ್ತರು ಬೆಂಬಲಿಗರು ಉಪಸ್ಥಿತರಿದ್ದರು. 


ಸುದ್ದಿ ಓದಿ