ಶಿಗ್ಗಾವ್

ನಾನು ಒಬ್ಬ ಕಾಂಗ್ರೆಸ ಟಿಕೆಟ ಪ್ರಬಲ ಆಕಾಂಕ್ಷಿ: ನೂರಅಹ್ಮದ ಮಾಳಗಿ

ನಾನು ಒಬ್ಬ ಕಾಂಗ್ರೆಸ ಟಿಕೆಟ ಪ್ರಬಲ ಆಕಾಂಕ್ಷಿ: ನೂರಅಹ್ಮದ ಮಾಳಗಿ

ಸುಧಾಕರದೈವಜ್ಞ 

ಶಿಗ್ಗಾವಿ : ಶಿಗ್ಗಾವಿ ಸವಣೂರ ವಿಧಾನಸಭಾ ಮತಕ್ಷೇತ್ರದ ಹಿರಿಯ ಕಾಂಗ್ರೆಸ್ ಪಕ್ಷದ ನಾಯಕರು ಮಾಜಿ ಟಿಡಿಪಿ ಹಾಗೂ ಬಂಕಾಪುರ ಪುರಸಭಾ ಸದಸ್ಯ ದಿವಂಗತ ಮೊಮ್ಮದ್ ಅಶಮ್‌ರಸೂಲ್‌ಸಾಬ್ ಮಾಳಗಿ ಇವರ ಪುತ್ರ ನೂರ ಅಹ್ಮದ್ ಮಹಮ್ಮದ್  ಮಾಳಗಿ ತಾಲೂಕಿನ ಬಂಕಾಪುರದ ಕಾಂಗ್ರೆಸ್ ಪಕ್ಷದ  ಹಿರಿಯ ತಲೆಮಾರಿನ 1960 ರಲ್ಲಿ ಮೋಹಶಿನ್ನ  ಅವರ ಲೋಕಸಭಾ ಚುನಾವಣೆ ಮಾಜಿ ಸಚಿವ ಅಜಿಜ ಸೇಟ್‌ಅವರ ಚುನಾವಣೆ ತದನಂತರ ಬಸವ ತತ್ವವಾದಿ ಮಾಜಿ ಧಾರವಾಡ ಲೋಕಸಭೆಯ ಸಂಸದ ಪ್ರೊಫೆಸರ್ ಐ ಜಿ ಸನದಿ ಅವರೊಂದಿಗೆ ಪಕ್ಷ ಸಂಘಟನೆಯನ್ನು ಮಾಡುತ್ತ ವಿಶೇಷವಾಗಿಯುವಕರ ಬಗ್ಗೆ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡು ಹಲವು ಮುಖಂಡರನ್ನು ಬೆಳೆಸುತ್ತಾ ದಿವಂಗತ ಮಹಮ್ಮದ್ ಅಶಮ ಮಾಳಗಿ ಅವರು ಕೂಡ ಒಂದು ಬಾರಿ ಟಿ ಡಿ ಪಿ ಗೆ ಆಯ್ಕೆಎರಡು ಬಾರಿ ಬಂಕಾಪುರ ಪುರಸಭೆಗೆ ಆಯ್ಕೆಯಾಗಿ ಈ ಭಾಗದಲ್ಲಿ ಪ್ರಭಾವಿ ನಾಯಕನಾಗಿ ಬೆಳೆದವರು. 

ತಾಲೂಕಿನಲ್ಲಿ ಪಕ್ಷ ನಿಷ್ಠೆ ಎಂದರೆ ಈ ಹಿಂದೆ ಮಾಜಿ ಶಾಸಕ ಅಜ್ಜಂಪೀರ್‌ಖಾದ್ರಿ ಅವರು ಜನತಾದಳದಿಂದ ಸ್ಪರ್ಧಿಸಿದಾಗ ಜಾತಿ ಸಮಾಜವನ್ನು ನೋಡದೆ ಪಕ್ಷನಿಷ್ಠೆಗಾಗಿ ಪಕ್ಷದ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಹಾಗೂ ಸಂಸದ ಮಂಜುನಾಥ್ ಕುನ್ನೂರ್ ಅವರ ಚುನಾವಣೆಯನ್ನು ಮಾಡಿದ್ದರು ಇಂತಹ ಮೇರು ವ್ಯಕ್ತಿತ್ವದ ಹಿರಿಯ ಕಾಂಗ್ರೆಸ್ ಪಕ್ಷದ ಮುಖಂಡರ ಮಗನಾಗಿರುವ ನೂರ್ ಅಹಮದ್ ಮಾಳಗಿಯವರು ಕಳೆದ ಹಲವಾರು ವರ್ಷಗಳಿಂದ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಸಾಮಾಜಿಕ ಕಳಕಳಿಯೊಂದಿಗೆ ಎಲ್ಲ ವರ್ಗದ ಜನರೊಂದಿಗೆ ಬೆರೆತು ಕೆಲಸ ಮಾಡುತ್ತಿದ್ದು ಈ ಬಾರಿಯ ಶಿಗ್ಗಾವಿ ಸವಣೂರ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿ ಕೆಪಿಸಿಸಿ ನಿಯಮದನ್ವಯ ಅರ್ಜಿ ಸಲ್ಲಿಸಿದ್ದು ಇವರ ತಂದೆಯವರ ಪಕ್ಷ ನಿಷ್ಠೆ ಹಾಗೂ ಇವರ ಸಂಘಟನೆ ಸಾಮಾಜಿಕ ಕಳಕಳಿಗೆ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ಟಿಕೆಟ್ ಕೊಡುವ ಭರವಸೆ ಹೊಂದಿದ್ದಾರೆ ಇವರಿಗೆ ಬೆನ್ನೆಲುಬಾಗಿ ಅನೇಕ ಪಕ್ಷದ ಸಾಮಾನ್ಯ ಕಾರ್ಯಕರ್ತರು ಕೆಲಸ ಮಾಡುತ್ತಿದ್ದು ಪಕ್ಷದಕಾರ್ಯಾಧ್ಯಕ್ಷ ಸಲೀಂ ಅಹ್ಮದ ಮಾಜಿ ಸಚಿವ ವಿನಯ್ ಕುಲಕರ್ಣಿ ಮಾಜಿ ಸಂಸದ ಪ್ರೊಫೆಸರ್ ಐಜಿ ಸನದಿ ಹಲವು ನಾಯಕರೊಂದಿಗೆ ಉತ್ತಮ ಒಡನಾಟ ಹಾಗೂ  ಸ್ಥಳೀಯವಾಗಿ ಮುಖಂಡರ ಕಾರ್ಯಕರ್ತರ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದಾರೆ. 

 ಈ ಬಾರಿ ಮತಕ್ಷೇತ್ರದಲ್ಲಿ ಹೊಸಮುಖ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವ ಲಕ್ಷಣಗಳಿವೆ ಎಂದು ಪಕ್ಷದ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ ಈ ಮಾಹಿತಿ ಕಾಂಗ್ರೆಸ್ ಪಕ್ಷದ ಮೂಲಗಳಿಂದ ಬಂದಿದ್ದು ನಾನು ಒಬ್ಬ ಪ್ರಬಲ ಆಕಾಂಕ್ಷಿ ಪಕ್ಷದ ಮುಖಂಡರು ನನಗೆ ಅವಕಾಶ ಮಾಡಿಕೊಟ್ಟಲ್ಲಿ ಸ್ಪರ್ಧೆಗೆ ತಯಾರಿರುವುದಾಗಿ ನೂರಅಹ್ಮದ್ ತಿಳಿಸಿದ್ದಾರೆ ಅಕಸ್ಮಾತ್ ಅವಕಾಶ ಸಿಗದಿದ್ದಲ್ಲಿ  ಈ ಬಾರಿ ಮತಕ್ಷೇತ್ರದಲ್ಲಿ  ಯಾವುದೇ ಸಮುದಾಯ ಜಾತಿ ಧರ್ಮದ ವ್ಯಕ್ತಿಗೂ ಅವಕಾಶ ಪಕ್ಷ ಒದಗಿಸಿ ಕೊಟ್ಟರು ಪಕ್ಷದ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. 

ಭಾಕ್ಸ ಸುದ್ದಿ : ಜಗತ್ತು ಕಂಡರೆದ ಕರೋನಾ ಎಂಬ  ಸಾಂಕ್ರಾಮಿಕ ರೋಗ ಉಲ್ಮಣಿಸಿದಾಗ ಮತಕ್ಷೇತ್ರದಲ್ಲಿ ತಾಲೂಕ ಪಕ್ಷದ ವಕ್ತಾರ ಮಂಜುನಾಥ್ ಮಣ್ಣಣ್ಣವರ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಬಾಬರ್ ಬಾವಾಜಿ ಹಲವಾರು ಪಕ್ಷದ ಮುಖಂಡರು ಯುವಕಾಂಗ್ರೆಸ್ ತಾಲೂಕ ಹಾಗೂ ಜಿಲ್ಲೆಯ ಪದಾಧಿಕಾರಿಗಳು ಪಕ್ಷದ ಹಲವಾರು ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸೇರಿ ಅನೇಕ ಕಾರ್ಯಗಳನ್ನು ಮಾಡಿದ್ದು ಹಾಗೂ ಹಾನಗಲ್ ವಿಧಾನಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ವಂತಖರ್ಚಿನಿಂದ ಕಾರ್ಯಕರ್ತರ ಜೊತೆ ಸೇರಿ ಚುನಾವಣೆ ಪಕ್ರಿಯೆಯಲ್ಲಿ ಕೆಲಸ ಮಾಡಿದ್ದು ನನಗೆ ಅವಕಾಶ  ಭರವಸೆ ಇದೆ ಎಂದು ನೂರಅಹ್ಮದ ಮಾಳಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ