ಹೈದರಾಬಾದ್ ಪಾಲಿಕೆ ಮತ ಎಣಿಕೆ ಆರಂಭ, 1,122 ಅಭ್ಯರ್ಥಿಗಳ ಭವಿಷ್ಯ ತೀರ್ಮಾನ
ಹೈದರಾಬಾದ್
ಡಿಸೆಂಬರ್, 4: ದೇಶದ ಗಮನ ಸೆಳೆದಿರುವ ಹೈದರಾಬಾದ್ ನಗರ ಪಾಲಿಕೆಯ ಮತ ಎಣಿಕೆ ಆರಂಭವಾಗಿದ್ದು ಒಟ್ಟಾರೆಯಾಗಿ, ಕಣದಲ್ಲಿ ಇರುವ 1,122 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದೆ ತೀರ್ಮಾನವಾಗಲಿದೆ.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಸ್ಪಷ್ಟ ಫಲಿತಾಂಶ ಸಿಗಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.ಈ ಬಾರಿ ಬಿಜೆಪಿ ನಿಜಾಮರ ನಾಡಿನ ಪಾಲಿಕೆ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದೆ. ಬಿಜೆಪಿ ಘಟಾನುಘಟಿ ನಾಯಕರು ಹೈದರಾಬಾದ್ ನಲ್ಲಿ ಚುನಾವಣಾ ಪ್ರಚಾರ ಮಾಡಿದ್ದರು. ಕೇಂದ್ರ ಸಚಿವ ಅಮಿತ್ ಶಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ರಾಜ್ಯದ ಸಚಿವರಾದ ಸುಧಾಕರ್, ಈಶ್ವರಪ್ಪ ಸೇರಿದಂತೆ ಹಲವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು . ಹೀಗಾಗಿ ಹೈದರಾಬಾದ್ ನಗರ ಪಾಲಿಕೆ ಕಣ ಬಿಜೆಪಿ-ಟಿಆರ್ ಎಸ್ ಗೆ ಪ್ರತಿಷ್ಠೆಯ ವಿಷಯವಾಗಿದೆ.
ಇದೇ
ವೇಳೆ, ಗುರುವಾರ ಮತಗಟ್ಟೆ ಸಮೀಕ್ಷೆಯ ವರದಿಗಳ ಪ್ರಕಾರ
ಟಿಆರ್ಎಸ್ ಗೆಲುವು ಖಚಿತ ಎಂದು ಹೇಳಿವೆ. ಆಡಳಿತಾರೂಢ ಟಿಆರ್ಎಸ್ಗೆ 75-78 ಸೀಟುಗಳು ಲಭ್ಯವಾದರೆ,
ಒವೈಸಿ ಅವರ ಎಐಎಂಐಎಂ 38-42 ಸ್ಥಾನಗಳಲ್ಲಿ, ಬಿಜೆಪಿ 25-35 ಸ್ಥಾನಗಳನ್ನು ಗೆಲ್ಲುವ ಮೂಲಕ ಶೇ.31.21ರಷ್ಟು
ಮತಗಳನ್ನು ಪಡೆಯಲಿದೆ ಎನ್ನಲಾಗಿದೆ. ಟಿಡಿಪಿ 106
ವಾರ್ಡ್ಗಳಲ್ಲಿ ಸ್ಪರ್ಧಿಸಿದ್ದು, ನಂತರದ ಸ್ಥಾನದಲ್ಲಿ
ಎಐಎಂಐಎಂ- 51, ಸಿಪಿಐ- 17, ಸಿಪಿಎಂ -12, ಇತರ ನೋಂದಾಯಿತ ಪಕ್ಷಗಳು- 76 ಮತ್ತು 415 ಸ್ವತಂತ್ರರು
ಸ್ಪರ್ಧಿಸಿದ್ದಾರೆ.