ರಾಷ್ಟ್ರೀಯ

ಬಿಜೆಪಿಗೆ ಪ್ರತಿಷ್ಟೆ ಕಣವಾದ ಹೈದ್ರಾಬಾದ್ ಪಾಲಿಕೆ ಚುನಾವಣೆ, ಅಮಿತ್ ಶಾ, ನಡ್ಡಾ ಪ್ರಚಾರ ದಿನ ನಿಗಧಿ

ಬಿಜೆಪಿಗೆ  ಪ್ರತಿಷ್ಟೆ  ಕಣವಾದ  ಹೈದ್ರಾಬಾದ್   ಪಾಲಿಕೆ ಚುನಾವಣೆ,  ಅಮಿತ್ ಶಾ, ನಡ್ಡಾ   ಪ್ರಚಾರ ದಿನ  ನಿಗಧಿ

ಹೈದರಾಬಾದ್, ನವೆಂಬರ್ 25: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗಳನ್ನು   ಬಿಜೆಪಿ  ಭಾರಿ ಪ್ರತಿಷ್ಟೆಯನ್ನಾಗಿ  ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿಯೇ ಬಿಜೆಪಿಯ ಅಗ್ರ ನಾಯಕರು  ಚುನಾವಣಾ  ಪ್ರಚಾರದಲ್ಲಿ  ಭಾಗವಹಿಸಲು ಸಜ್ಜಾಗಿದ್ದಾರೆ. ಕೇಂದ್ರ ಗೃಹವ್ಯವಹಾರಗಳ ಸಚಿವ  ಅಮಿತ್ ಶಾ, ಉತ್ತರ ಪ್ರದೇಶ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಹಾಗೂ  ಬಿಜೆಪಿ ರಾಷ್ಟ್ರೀಯ  ಅಧ್ಯಕ್ಷ   ಜೆಪಿ ನಡ್ಡಾ ಸೇರಿ  ಪ್ರಮುಖ ನಾಯಕರು  ಮುತ್ತಿನ  ನಗರಿ  ಹೈದರಾಬಾದ್‌ಗೆ ಭೇಟಿ ನೀಡಲಿದ್ದಾರೆ.

ಈ ಕ್ರಮವಾಗಿ   ನಾಳೆ ಬಿಜೆಪಿ    ಗ್ರೇಟರ್   ಹೈದ್ರಾಬಾದ್  ಮಹಾ ನಗರ ಪಾಲಿಕೆಯ  ಚುನಾವಣಾ ಪ್ರಣಾಳಿಕೆಯನ್ನು ನಾಳೆ ಬಿಡುಗಡೆ ಮಾಡಲಿದೆ. ಮಹಾರಾಷ್ಟ್ರ ಮಾಜಿ  ಮುಖ್ಯಮಂತ್ರಿ  ದೇವೇಂದ್ರ ಫಡ್ನವಿಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.  ಉತ್ತರ  ಪ್ರದೇಶ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ತಿಂಗಳ 27 ರಂದು ಹೈದರಾಬಾದ್‌ಗೆ ಆಗಮಿಸಲಿದ್ದಾರೆ.  ಅವರು  ಅತ್ಯಂತ  ಸೂಕ್ಷ್ಮ  ಪ್ರದೇಶವಾದ   ಹಳೆ ಬಸ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸುವ  ಸಾಧ್ಯತೆ ಇದೆ. ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ 28 ರಂದು,ಅಮಿತ್ ಶಾ 29 ರಂದು   ರೋಡ್  ಶೋ ನಡೆಸಲಿದ್ದಾರೆ. 

ಸುದ್ದಿ ಓದಿ