ರಾಷ್ಟ್ರೀಯ

ಯಾರ ಮುಡಿಗೆ ಹೈದರಾಬಾದ್ ಮಹಾನಗರ ಪಾಲಿಕೆ ಆಡಳಿತ ...??

ಯಾರ ಮುಡಿಗೆ  ಹೈದರಾಬಾದ್  ಮಹಾನಗರ ಪಾಲಿಕೆ ಆಡಳಿತ ...??

ಹೈದರಾಬಾದ್, ಡಿಸೆಂಬರ್  1: ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆಯ ಮತದಾನ ಮಂಗಳವಾರ ಆರಂಭವಾಗಿದ್ದು  ಸಂಜೆ 6 ರವರೆಗೆ  ಮತದಾನ  ನಡೆಯಲಿದ್ದು ಯಾರ ಮಹಾನಗರ ಪಾಲಿಗೆ ಆಡಳಿತ ಒಲಿಯಲಿದೆ ಎಂಬ ಕುತೂಹಲ ಕೆರಳಿದೆ. 

ಕಣದಲ್ಲಿ ಇರುವ 1, ಸಾವಿರ 122 ಅಭ್ಯರ್ಥಿಗಳ ರಾಜಕಿಯ ಹಣೆ ಬರಹವನ್ನು 74 ಲಕ್ಷ ಅರ್ಹ ಮತದಾರರು ಬರೆಯಲಿದ್ದಾರೆ.

ಆಡಳಿತಾರೂಢ  ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಪಕ್ಷಕ್ಕೆ ಬಗಳ ಪ್ರತಿಷ್ಠೆ ಯಾಗಿದೆ.

ಭಾರತೀಯ ಜನತಾ ಪಕ್ಷ ಜಿಎಚ್ ಎಂಸಿ ತನ್ನ ವಶಕ್ಕೆ ಪಡೆಯಬೇಕೆಂಬ ಸವಾಲಿನೊಂದಿಗೆ ರಾಷ್ಟ್ರ ನಾಯಕರು ಪ್ರಚಾರದಅಖಾಡಕ್ಕಿಳಿಯುವ ಮೂಲಕ ಹೈವೋಲ್ಟೇಜ್ ಚುನಾವಣೆಯಾಗಿ ಮಾರ್ಪಟ್ಟಿದೆ.

ಮಹಾನಗರ ಪಾಲಿಕೆಯ ಚುನಾವಣೆಯ ಇತಿಹಾಸದಲ್ಲಿಯೇ ಇಷ್ಟೊಂದು ಪ್ರಮಾಣದ ಮಹತ್ವ ಪಡೆದಿಲ್ಲವಾಗಿತ್ತು. ಆದರೆ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯನ್ನು  ಈ ಬಾರಿ ಟಿಆರ್ ಎಸ್, ಬಿಜೆಪಿ ಹಾಗೂ ಅಸಾದುದ್ದೀನ್ ಒವೈಸಿಯ ಎಐಎಂಐಎಂ ಪಕ್ಷಗಳು  ಬಹಳ ಸವಾಲಾಗಿ ಸ್ವೀಕರಿಸಿವೆ.

ಸಂಜೆ 6ಗಂಟೆವರೆಗೆ ಮತದಾನ ನಡೆಯಲಿದ್ದು, ಶುಕ್ರವಾರ  ಮತಎಣಿಕೆ ನಡೆಯಲಿದೆ.2016ರ ನಡೆದಿದ್ದ  ಮಹಾನಗರ ಪಾಲಿಕೆ ಚುನಾವಣೆ ಯಲ್ಲಿ ಆಡಳಿತಾರೂಢ ಟಿಆರ್ ಎಸ್ 99 ಸ್ಥಾನ ಪಡೆದಿತ್ತು . 

ಸುದ್ದಿ ಓದಿ