ತಮಿಳುನಾಡು ದಕ್ಷಿಣ ಕರಾವಳಿಯಲ್ಲಿ ಕಳೆದ 30 ಗಂಟೆಗಳಿಂದ ವಾಯಭಾರ ಕುಸಿತ ಸ್ಥಿರ: ಮುಂದಿನ 12 ತಾಸಿನಲ್ಲಿ ದುರ್ಬಲ ಸಾಧ್ಯತೆ
ಚೆನ್ನೈ,
ಡಿ 5: ವಾಯುಭಾರ ಕುಸಿತವಾಗಿ ದುರ್ಬಲಗೊಂಡಿರುವ 'ಬುರೆವಿ' ಚಂಡಮಾರುತ ತಮಿಳುನಾಡು ದಕ್ಷಿಣ
ಕರಾವಳಿಯ ರಾಮನಾಥಪುರಂ ಜಿಲ್ಲೆಯ ಸಮೀಪದಲ್ಲಿ ಕಳೆದ 30 ಗಂಟೆಗಳಿಂದ ಸ್ಥಿರವಾಗಿದೆ ಎಂದು ಹವಾಮಾನ ಇಲಾಖೆ
ಕಚೇರಿ ತನ್ನ ಮಾಹಿತಿ ಸಂಚಿಕೆಯಲ್ಲಿ ತಿಳಿಸಿದೆ.
ಮನ್ನಾರ್
ಕೊಲ್ಲಿಗೆ ಹತ್ತಿರದಲ್ಲಿ ಕಳೆದ 30 ಗಂಟೆಗಳಿಂದ ಸ್ಥಿರವಾಗಿರುವ ವಾಯುಭಾರ ಕುಸಿತ, ರಾಮನಾಥಪುರಂ ಕರಾವಳಿಯಿಂದ ನೈರುತ್ಯಕ್ಕೆ 40 ಕಿ.ಮೀ ದೂರದಲ್ಲಿ
ಮತ್ತು ಪಂಬನ್‌ನಿಂದ ಪಶ್ಚಿಮ-ನೈರುತ್ಯಕ್ಕೆ 70 ಕಿ.ಮೀ.ದೂರದಲ್ಲಿ ಮನ್ನಾರ್ ಕೊಲ್ಲಿಯನ್ನು ಕೇಂದ್ರೀಕರಿಸಿದೆ.
ಗಾಳಿಯ ವೇಗ 40-50 ರಿಂದ 60 ಕಿ.ಮೀ.ವೇಗದಲ್ಲಿ ಕೂಡಿದೆ. ಮುಂದಿನ 12 ತಾಸು ಇದೇ ರೀತಿ ಸ್ಥಿರವಾಗಿರುವ
ವಾಯಭಾರ ಕುಸಿತ ನಂತರ ದುರ್ಬಲಗೊಳ್ಳಲಿದೆ .
ಮುಂದಿನ
ಎರಡು ದಿನಗಳವರೆಗೆ ತಮಿಳುನಾಡು, ಪುದುಚೇರಿ, ಕರೈಕ್ಕಲ್, ಕೇರಳ ಮತ್ತು ಮಾಹೆಯಲ್ಲಿ ಹಳದಿ ಎಚ್ಚರಿಕೆ
ಘೋಷಿಸಲಾಗಿದೆ.
ವಾಯಭಾರ
ಕುಸಿತದಿಂದಾಗಿ ಮುಂದಿನ ಎರಡು ದಿನ ತಮಿಳುನಾಡು, ಪುದುಚೇರಿ, ಕರೈಕ್ಕಲ್, ಕೇರಳ ಮತ್ತು ಮಾಹೆಯಲ್ಲಿ
ಅಲ್ಲಲ್ಲಿ ಚದುರಿದಂತೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.