ಎಂ ಜಿ ಚಾರಿಟೆಬಲ್ ಟ್ರಸ್ಟ್ ಮಾನವೀಯತೆಗಾಗಿ ದುಡಿಯುತ್ತಿದೆ: ಶಾಸಕ ಪಾಟೀಲ
ಗದಗ 15: ನಗರದ ಗಂಗಿಮಡಿಯ ಅಬುಹರೇರಾ ಮಸ್ಜಿದ್ ಆವರಣದಲ್ಲಿ ಎಂ ಜಿ ಚಾರಿಟೇಬಲ್ ಟ್ರಸ್ಟ್ ಹಾಗೂ ವೆಲ್ಫೆರ್ ಪೌಂಡೇಷನ್ ಸಹಯೋಗದಲ್ಲಿ 2022-23ರ ಸಾಲಿನ ಬಡ ಮತ್ತು ಪ್ರತಿಬಾನ್ವಿತ ವಿದ್ಯಾರ್ಥಿಗಳಿಗೆ 3ನೇ ಹಂತದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದ ಅಂಗವಾಗಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಅತ್ಯುತ್ತಮ ಸಮಾಜ ಸೇವಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಎಂ ಜಿ ಚಾರಿಟೆಬಲ್ ಟ್ರಸ್ಟ್ ಮಾನವಿಯತೆಗಾಗಿ, ಮಾನವ ಕುಲದ ಓಳಿತಿಗಾಗಿ ಶ್ರಮಿಸುತ್ತಿದೆ. ಇಂತಹ ಸಂಸ್ಥೆಗಳಿಗೆ ಬೆಂಬಲ, ಶಕ್ತಿ ತುಂಬಬೇಕು. ಎಲೆ ಮರೆ ಕಾಯಿಯಂತೆ ಸಮಾಜ ಸೇವೆ ಮಾಡುತ್ತಿರುವ ಅತ್ಯುತ್ತಮ ಶಿಕ್ಷಕರನ್ನು ಗುರುತಿಸುವ ಮಹತ್ವದ ಕೇಲಸವನ್ನು ಎಂ ಜಿ ಚಾರಿಟೆಬಲ್ ಟ್ರಸ್ಟ್ ಮಾಡುತ್ತಿದೆ. ನಿವು ನೀಡುತ್ತಿರುವ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಆಗುತ್ತಿದೆ. ಈ ಸಂಸ್ಥೆಯ ಬೆನ್ನೆಲುಬುಗಿ ನಿಂತಿರುವ ಎಲ್ಲ ಸದಸ್ಯರು, ತಮ್ಮ ಸಮಾಜಮುಖಿ ಕಾರ್ಯಕ್ರಮಗಳನ್ನು ಹೀಗೆ ಮುಂದುವರಿಸಿ ಎಂದು ಶಾಸಕ ಡಾ ಹೆಚ್ ಕೆ ಪಾಟೀಲರು ಹಾರೈಸಿದರು.
ಕಾರ್ಯಕ್ರವನ್ನು ಉದ್ದೇಶಿಸಿ ಮಾತನಾಡಿದ ಡಾ. ಐ ಆರ್ ಅಕ್ಕಿ ಅವರು, ನಾವು ಬದುಕುವುದರೊಂದಿಗೆ ಮತ್ತೊಬ್ಬರು ಬದುಕಬೇಕು ಎನ್ನುವ ಮನೋಭಾವ ಎಂ ಜಿ ಚಾರಿಟೆಬಲ್ ಟ್ರಸ್ಟ್ ಹೊಂದಿದ್ದು, ಹೆಮ್ಮೆಯ ಸಂಗತಿಯಾಗಿದೆ. ಈ ಸಂಸ್ಥೆಯ ಸೇವೆಯನ್ನು ನಾವು ಸ್ಮರಿಸಬೇಕು. ಪ್ರತಿಭಾನ್ವಿತ ವಿದ್ಯಾರ್ಥಿಗಳು ಬಡತನದಿಂದ ಅಭ್ಯಾಸ ಮುಂದುವರಿಸಲು ಆಗದಿದ್ದ ಸಮಯದಲ್ಲಿ ಸ್ಕಾಲರ್ಶಿಪ್ ನೀಡುವ ಮೂಲಕ ಈ ಸಂಸ್ಥೆ ಮಾನವಿಯ ಕಾರ್ಯ ಮಾಡುತ್ತಿದೆ. ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು ಎಂದು ಗುಣಮಟ್ಟದ ಶಿಕ್ಷಣ ಹಚ್ಚಿಸಿ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ ಅವರಿಗೆ ಸನ್ಮಾನಿಸಿ ಗೌರವ ನೀಡುವ ನಿಮ್ಮ ಕೇಲಸ ಇತರರಿಗೆ ಮಾದರಿಯಾಗಿಯಾಗಿದೆ. ಜಾತಿ-ಭಾಷೆಯನ್ನು ಮೀರಿ ನಾವೆಲ್ಲರೂ ಒಂದೇ ಎನ್ನುವ ಮನೋಭಾವದೊಂದಿಗೆ ಎಂ ಜಿ ಚಾರಿಟೆಬಲ್ ಟ್ರಸ್ಟ್ ಕಾರ್ಯ ಮಾಡುತ್ತಿರುವುದು ಹೇಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಅದ್ಬುತ ಕಾರ್ಯಕ್ರಮವನ್ನು ಎಂ ಜಿ ಚಾರಿಟೆಬಲ್ ಟ್ರಸ್ಟ್ ಹಮ್ಮಿಕೊಂಡಿದೆ. ಎಷ್ಟೊ ಮಕ್ಕಳು ಆಥರ್ಿಕ ಕೊರತೆಯಿಂದ ಶಿಕ್ಷಣವನ್ನು ಮಟಕುಗೋಳಿಸುತ್ತಿದ್ದಾರೆ. ಅಂತಹ ವಿದ್ಯಾಥರ್ಿಗಳನ್ನು ಗುರುತಿಸಿ ಎಂ ಜಿ ಚಾರಿಟೆಬಲ್ ಟ್ರಸ್ಟ್ ವೇತನ ನೀಡುತ್ತಿರುವುದು ಸಾಮಾನ್ಯ ವಿಷಯವಲ್ಲ, ಶಿಕ್ಷಣದ ಉನ್ನತೀಕರಣಕ್ಕಾಗಿ, ವೇತನ ನೀಡುತ್ತಿರುವುದು ಹೇಮ್ಮೆಯ ವಿಷಯವಾಗಿದೆ. ಜಗತ್ತಿನ ಸಮುದ್ರದ ನೀರನ್ನು ಮಸಿಯನ್ನಾಗಿ ಮಾಡಿ, ಭೂಮಿಯನ್ನು ಪೆಪರ್ ಮಾಡಿ, ಗಿಡ-ಮರಗಳನ್ನು ಪೆನ್ನನ್ನಾಗಿ ಮಾಡಿದರೂ, ಅವು ನಶಿಸಿ ಹೊಗಬಹುದು ಆದರೆ, ಶಿಕ್ಷಕನ ಜ್ಞಾನ ಕಡಿಮೆ ಆಗುವುದಿಲ್ಲ, ಅಂತಹ ಆದರ್ಶ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಹುಮಾಯಿನ್ ಮಾಗಡಿ ಬಣ್ಣಿಸಿದರು.
ಈ ವೇಳೆ ವೇದಿಕೆಯಲ್ಲಿ ಜಮೀಯತ್ ಉಲ್ಮಾ ಹಿಂದ್ನ ಅಧ್ಯಕ್ಷ ಇನಾಯತುಲ್ಲಾ ಪೀರಾಜಾದೆ, ಅಬೂ ಹುರೇರಾ ಮಸಜಿದ್ನ ಅಧ್ಯಕ್ಷರಾದ ಹಾಜಿ ಹುಸೇನ್ಸಾಬ ಪಲ್ಲೇದ, ಅಜಾದ್ ಕೋ-ಆಪ್ ಬ್ಯಾಂಕ್ನ ಅಧ್ಯಕ್ಷರಾದ ಹಾಜಿ ಸರ್ಪರಾಜ್ ಉಮಚಗಿ, ನೂರಾನಿ ಚಾರಿಟೇಬಲ್ನ ಅಧ್ಯಕ್ಷರಾದ ಡಾ: ಪ್ಯಾರಅಲಿ ನೂರಾನಿ, ಡಿಯ್ .ಪಿ .ಸಿ ಸಮಗ್ರ ಶಿಕ್ಷಣದ ಡಾ: ಸಿ ಎಂ ರಫೀ, ಎಂ ಜಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಮಕ್ತುಂಸಾಬ ನಾಯಕ್, ರಾಮಕೃಷ್ಣ-ವಿವೇಕಾನಂದ ಸೇವಾ ಪ್ರತಿಷ್ಠಾನ ಅಧ್ಯಕ್ಷ ಅದ್ವೈತ ಚೈತನ್ಯ(ಪುನೀತ್ ಮಹಾರಾಜರು) ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಮಹಮ್ಮದ್ ಶಫಿ ಯರಗುಡಿಯವರು ನಿರೂಪಿಸಿದರು. ವಿದ್ಯಾಥರ್ಿ ವೇತನ ಪಡೆಯಲಿರುವ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು, ಅತ್ಯುತ್ತಮ ಪ್ರಶಸ್ತಿಯ ಶಿಕ್ಷಕರು, ಅತ್ಯುತ್ತಮ ಸಮಾಜ ಸೇವಕರು ಹಾಗೂ ಎಂ ಜಿ ಚಾರಿಟೇಬಲ್ ಟ್ರಸ್ಟ್ನ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಟ್ಶೂಶನ್ ಕೊಠಡಿಗೆ 10ಲಕ್ಷ ಅನುದಾನ
ಗಂಗಿಮಡಿಯಲ್ಲಿ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿ/ನಿಯರು ಇದ್ದಾರೆ. ಅಂತಹ ಮಕ್ಕಳು ಆರ್ಥಿಕವಾಗಿ ಹಿಂದೂಳಿದವರಾಗಿದ್ದಾರೆ. ಅಂತಹ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ, ಟ್ಯೂಶನ್ ಕೊಠಡಿಗೆ ಬೆಡಿಕೆಯನ್ನು ಪರೊಕ್ಷವಾಗಿ ಎಂ ಜಿ ಚಾರಿಟೆಬಲ್ ಟ್ರಸ್ಟ್ ನವರು ಇಟ್ಟಿದ್ದರು. ಇದಕ್ಕೆ ತಕ್ಷಣ ಸ್ಪಂಧಿಸಿದ ಡಾ; ಹೆಚ್ ಕೆ ಪಾಟೀಲ್ ಅವರು, ಶಾಸಕರ ಅನುದಾನದಲ್ಲಿ 10ಲಕ್ಷ ರೂ ಅನುದಾನ ನೀಡುವುದಾಗಿ ಘೋಷಿಸಿದರು