ಸಿಂಧಗಿ

ಮಾನವೀಯ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ ಎಲ್ಲರು ಮೈಗೊಡಿಸಿಕೊಳ್ಳಬೇಕು: ನಾಗರತ್ನ ಮನಗೂಳಿ

ಮಾನವೀಯ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ ಎಲ್ಲರು ಮೈಗೊಡಿಸಿಕೊಳ್ಳಬೇಕು: ನಾಗರತ್ನ ಮನಗೂಳಿ
Human values ​​should be imbibed in daily life by all: Nagaratna Managuli

ಸಿಂದಗಿ 29; ಯೇಸುಕ್ರಿಸ್ತರ ಸಂದೇಶಗಳಾದ ಕ್ಷಮೆ, ಪ್ರೀತಿ ಸಹನೆ, ಸಹಬಾಳ್ವೆ ಮತ್ತು ಶಾಂತಿ ಈ ಮಾನವೀಯ ಮೌಲ್ಯಗಳನ್ನು ನಮ್ಮ ನಿತ್ಯ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಇನ್ನರ್ ವೀಲ್ ಕ್ಲಬ್‌ನ ಮಾಜಿ ಅದ್ಯಕ್ಷರಾದ ನಾಗರತ್ನ ಮನಗೂಳಿ  ಹೇಳಿದರು. 

ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಅಂತರಧರ್ಮಿಯ ಸ್ನೇಹಕೂಟ  ಕಾರ್ಯಕ್ರಮವನ್ನು ಭಾರತ ಸಂವಿಧಾನದ ಪೀಠಿಕೆಯ ಮೂಲಕ ಪ್ರಾಂಭಿಸಿ ಮಾತನಾಡಿದರು. 

ದಿವ್ಯ ಸಾನಿಧ್ಯ ವಹಿಸಿದ ಶ್ರೀ ಗುರುದೇವ ಆಶ್ರಮದ ಶ್ರೀ ಶಾಂತಗಂಗಾಧರ ಸ್ವಾಮಿಜಿ ಮಾತನಾಡಿ, ಸಂಗಮ ಎಂದರೆ ಎಲ್ಲರು ಒಟ್ಟಿಗೆ ಕೂಡಿಕೊಳ್ಳುವುದು. ವಿವಿಧ ರೀತಿಯಲ್ಲಿ ಸಂಗಮ ಸಂಸ್ಥೆಯು ಶಿಕ್ಷಣ ನೀಡುತ್ತಿದೆ. ಯಾರಿಗೂ ಬೇದಬಾವ ಮಾಡದೇ ಎಲ್ಲರಿಗೂ ಅವಕಾಶಗಳನ್ನು ಕೊಡುತ್ತಾರೆ. ದೇವರು ಪ್ರತಿಯೊಬ್ಬರ ಆತ್ಮ ಒಳಗೆ ಇರುವನು. ನಾವು ಹೊಟ್ಟೆ ಕಿಚ್ಚು, ಅಸೂಯೆ ಪಡದೇ ಎಲ್ಲರೊಂದಿಗೆ ಸಹಬಾಳ್ವೆಯಿಂದ ಇರಬೇಕು ಎಂದರು.  

ನಸುರುದ್ದೀನ ಮುಲ್ಲಾ, ಮೌಲ್ವಿಗಳು ಗಣಿಹಾರ ಮಾತನಾಡಿ, ಯೇಸು ಅವರ ಜೀವನ ಚರಿತ್ರೆ ಹಾಗೂ ಅವರು ಮಾಡಿದ ಜನರ ಸೇವೆ ಅಮೂಲ್ಯವಾದದ್ದು. ಯೇಸು ಅವರ ತತ್ವ ಮತ್ತು ಮೌಲ್ಯಗಳನ್ನು ಎಲ್ಲರೂ ಅನುಸರಿಸಬೇಕೆಂದು  ಹೇಳಿದರು. 

ಸಂಗಮ ಸಂಸ್ಥೆಯ ನಿರ್ದೇಶಕರಾದ ಫಾದರ್ ಸಂತೋಷ್, ಫಾದರ್ ಜೀವನ್‌ರವರು ಮಾತನಾಡಿ, ಸಂಗಮ ಸಂಸ್ಥೆಯು ಪ್ರತಿ ವರ್ಷ ದೀಪಾವಳಿ, ಬಕ್ರೀದ್ ಮತ್ತು ಕ್ರಿಸ್ಮಸ್ ಹಬ್ಬಗಳನ್ನು ಎಲ್ಲಾ ಧರ್ಮಗಳ ಜೊತೆಗೂಡಿ ಆಚರಿಸುತ್ತೇವೆ. ಕ್ರಿಸ್ಮಸ್ ಹಬ್ಬವನ್ನು ವಿಶ್ವದಾದ್ಯಂತ ಎಲ್ಲರೂ ಆಚರಿಸುತ್ತಾರೆ.  ನಮ್ಮಲ್ಲಿ ಯೇಸುವಿನ ಮೌಲ್ಯಗಳಾದ ನಿಸ್ವಾರ್ಥತೆ, ಕ್ಷಮೆ, ಪ್ರೀತಿಯನ್ನು  ನಾವು ರೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.   

ಸಂಗಮ ಸಂಸ್ಥೆಯ ಸಹನಿರ್ದೇಶಕಿಯಾದ ಸಿಸ್ಟರ್ ಸಿಂತಿಯಾ ಡಿ’ಮೆಲ್ಲೊ ಸರ್ವಧರ್ಮ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು.  

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ದೇವದಾಸಿ ತಾಯಂದಿರಿಗೆ, ವಿಶೇಷ ಚೇತನರಿಗೆ ಮತ್ತು ಹೆಚ್‌.ಐ.ವಿ ಬಾದಿತರಿಗೆ ಕಿಟ್ಟ್‌ ವಿತರಿಸಲಾಯಿತು. ಹೊಲಿಗೆ ತರಬೇತಿ ಶಿಕ್ಷಕಿಯರಿಗೆ ಹಾಗೂ ಕಲಿಕಾ ಕೇಂದ್ರದ ಶಿಕ್ಷಕಿಯರಿಗೆ ಕ್ರಿಸ್ಮಸ್ ಉಡುಗೊರೆ ನೀಡಲಾಯಿತು. ಉಮೇಶ್ ನಿರೂಪಿಸಿದರು, ವಿಜಯಕುಮಾರ ಬಂಟನೂರ ಸ್ವಾಗತಿಸಿದರು ಮತ್ತು ಮಲ್ಕಪ್ಪ ಹಲಗಿ ವಂದಿಸಿದರು. 


ಸುದ್ದಿ ಓದಿ