ಬೆಳಗಾವಿ

ಮಾನವ ಜೀವನ ಕ್ಷಣಿಕ; ಸದ್ಗುಣಗಳಿಂದ ಬದುಕು ಸಾರ್ಥಕಗೊಳಿಸಿ

ಮಾನವ ಜೀವನ ಕ್ಷಣಿಕ; ಸದ್ಗುಣಗಳಿಂದ ಬದುಕು ಸಾರ್ಥಕಗೊಳಿಸಿ


ಬೆಳಗಾವಿ, ಆ.23: ಕೋಟ್ಯಂತರ ಜೀವಿಗಳನ್ನು ದಾಟಿ ಬಂದಿರುವ ಮಾನವ ಜೀವನ ಅತ್ಯಂತ ಪವಿತ್ರವಾದದ್ದು. ಈ ಜೀವನದಲ್ಲಿ ಯಾರಿಗೂ ಕೆಡುಕು ಮಾಡದೆ, ದ್ವೇಷ, ಅಸೂಯೆ, ಮೋಸ, ವಂಚನೆ ಹಾಗೂ ಹೊಟ್ಟೆಕಿಚ್ಚು ಇಲ್ಲದೆ ಬದುಕಬೇಕು ಎಂದು ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಡಾ. ಆರ್‌. ನಾಗರಾಜ್ ಹೇಳಿದರು.  

ರಾಮದುರ್ಗ ತಾಲ್ಲೂಕಿನ ಮುದುಕವಿ ಹೋಬಳಿಯ ಎಂ. ತಿಮ್ಮಾಪುರ ಗ್ರಾಮದ ಪ್ರೊ. ದುಂಡಪ್ಪ ಮೇಟಿ ಅವರ ನಿವಾಸದಲ್ಲಿ ಆಯೋಜಿಸಿದ್ದ ಶ್ರಾವಣ ಪೂಜೆ ಹಾಗೂ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ಮನುಷ್ಯ ಮನುಷ್ಯನನ್ನೇ ನಂಬಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಂಬಿಕೆ ಮತ್ತು ವಿಶ್ವಾಸ ಕಳೆದುಹೋಗುತ್ತಿದ್ದು, ಬೆಳೆಯುತ್ತಿರುವ ವ್ಯಕ್ತಿಯನ್ನು ಕೆಳಕ್ಕೆಳೆಯುವಂತಹ ಮನೋಭಾವವೂ ಹೆಚ್ಚುತ್ತಿದೆ ಎಂದು ವಿಷಾದಿಸಿದರು.  

ಮಾನವ ಜೀವನ ಕ್ಷಣಿಕವಾಗಿದ್ದು, ಮತ್ತೊಬ್ಬರಿಗೆ ಒಳಿತು ಮಾಡಲು ಸಾಧ್ಯವಾಗದಿದ್ದರೂ ಕೆಡುಕು ಮಾಡಬಾರದು. ದುರ್ಗುಣಗಳನ್ನು ತೊರೆದು ಸದ್ಗುಣಗಳನ್ನು ಬೆಳೆಸಿಕೊಂಡು ಜೀವನ ಸಾಗಿಸಬೇಕು ಎಂದು ಅವರು ಸಲಹೆ ನೀಡಿದರು.  

ಗ್ರಾಮದ ಹಿರಿಯರಾದ ಶ್ರೀ ಕಾಳಪ್ಪ ಪೆಂಟಿಯವರ ಅವರು ಸ್ವಾಗತಿಸಿದರು. ಶ್ರೀ ಚಂದ್ರಶೇಖರ ಪೆಂಟಿಯವರ ಹಾಗೂ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀ ಪ್ರಶಾಂತ ಪೆಂಟಿಯವರ ವಂದಿಸಿದರು. ರೋ. ದುಂಡಪ್ಪ ಪೆಂಟಿಯವರ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ