ಹುಲಿಯಪ್ಪ ಅಧ್ಯಕ್ಷ, ಕಮಲವ್ವಾ ಉಪಾಧ್ಯಕ್ಷೆಯಾಗಿ ಅವಿರೋಧ ಆಯ್ಕೆ
ಲೋಕದರ್ಶನ ವರದಿ
ಮುಂಡಗೋಡ:ಪಟ್ಟಣದ ದೊಡ್ಡ ಪ್ರಮಾಣದ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಸ್ಥಾನಕ್ಕೆ ಹುಲಿಯಪ್ಪ ಕರೆಗೌಡರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಮಲವ್ವಾ ಡೋರಿ ಶನಿವಾರ ಅವಿರೋಧವಾಗಿ ಆಯ್ಕೆಯಾದರು.
ಮೊದಲ ಅವಧಿಗೆ ಇದ್ದ ಅಧ್ಯಕ್ಷ ಉಮೇಶ ಬಿಜಾಪುರ ಮತ್ತು ಉಪಾಧ್ಯಕ್ಷ ಶಿವಾನಂದ ಕುರುಬರ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ತೆರವುಗೊಂಡಿದ್ದ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆಯಿತು. ಶಕ್ತಿಪ್ರಸಾದ ಜಂಬಗಿ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಈ ವೇಳೆ ಉಮೇಶ ಬಿಜಾಪುರ, ಶಿವಾನಂದ ಕುರುಬರ, ಬಿಜೆಪಿ ಮಂಡಲ ಅಧ್ಯಕ್ಷ ನಾಗಭೂಷಣ ಹಾವಣಗಿ, ಗುಂಜಾವತಿ ಗ್ರಾ.ಪಂ.ಅಧ್ಯಕ್ಷ ಬಸಯ್ಯ ನಡುವಿನಮನಿ, ಮುಖಂಡರಾದ ಸುನೀಲ ವೆರ್ಣೇಕರ, ವಿನಾಯಕ ರಾಯ್ಕರ, ರಾಜು ಗುಬ್ಬಕನವರ, ಚಂದ್ರಶೇಖರ ಗಾಣಿಗೇರ, ವೆಂಕಟೇಶ ತಳವಾರ, ಮಂಜುನಾಥ ವೆರ್ಣೇಕರ, ಶ್ರೀಧರ ಡೋರಿ, ವ್ಯವಸ್ಥಾಪಕ ಕೆ.ಪುಷ್ಪಾಂಗದನ್, ಸಿಬ್ಬಂದಿ ಎಮ್.ಎಚ್.ಬಂಕಾಪುರ, ರಾಮಚಂದ್ರ ವೆರ್ಣೇಕರ, ಮಹೇಶ ಮಾದರ, ಸ್ಮಿತಾ ಕುರುಬರ, ಮಹೇಶ ತಳವಾರ, ಸಚಿನ ಗೌಳಿ, ಶಿವಕುಮಾರ ಗೋಣೆನವರ ಹಾಗೂ ಮುಂತಾದವರಿದ್ದರು.