ವಿದ್ಯುತ್ ಸಮಸ್ಯೆ ನಿಗಿಸಿದ ಮಾಜಿ ಸಂಸದ ಹುಕ್ಕೇರಿ
ಚಿಕ್ಕೋಡಿ27: ಅನ್ನಪೂಣೇಶ್ವರಿ ಪೌಂಡೇಶನದಿಂದ ಚಿಕ್ಕೋಡಿ-ಸದಲಗಾ ಕ್ಷೇತ್ರದ ನಾಲ್ಕು ಸಾರ್ವಜನಿಕ ಆಸ್ಪತ್ರೆಗಳಿಗೆ ನಾಲ್ಕು ಹೊಸ ಜನರೇಟರ ಅಳವಡಿಸಿ ವಿದ್ಯುತ್ ಸಮಸ್ಯೆ ಬಗೆಹರಿಸಲಾಗಿದೆ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ತಿಳಿಸಿದರು.ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನವಾಗಿ ಅಳವಡಿಸಿರುವ ಹೊಸ ಜನರೇಟರಿಗೆ ಚಾಲನೆ ನೀಡಿ ಮಾತನಾಡಿದರು. ಮಳೆಗಾಲದ ಆರಂಭ ದಿನಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು ಸಹಜ ಇಂತಹ ಕೊರೊನಾ ಸಂದಿಗ್ದ ಪರಿಸ್ಥಿತಿಯಲ್ಲಿ ಆಕ್ಸಿಜನ್ ಅವಲಭಿಸಿದಂತಹ ಸೋಂಕಿತರಿಗೆ ಆಕ್ಸಿಜನ್ ಪೂರೈಕೆಗಾಗಿ ವಿದ್ಯುತ್ ಅಗತ್ಯವಿದೆ ಎಂದರು.
ಕಳೆದ ಬುಧವಾರ ರಾತ್ರಿ ವಿದ್ಯುತ್ ಕಡಿತಗೊಂಡಿತ್ತು. ಮತ್ತು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯ ಜನರೇಟರ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು ಸೋಂಕಿತರ ಸಂಬಂಧಿಕರಲ್ಲಿ ಆತಂಕ ಮೂಡಿಸಿತ್ತು. ಇದನ್ನು ಗಮನಿಸಿ ಶಾಸಕ ಗಣೇಶ ಹುಕ್ಕೇರಿ ಹಾಗೂ ನಾನು ಸ್ವಂತ ಖಚರ್ಿನಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಬರುವಂತಹ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ, ಸದಲಗಾ, ಯಕ್ಸಂಬಾ ಮತ್ತು ಖಡಕಲಾಟ ಪ್ರಾಥಮಿಕ ಆಸ್ಪತ್ರೆಯಲ್ಲಿ ಒಟ್ಟು 16 ಲಕ್ಷ ರೂ ಮೌಲ್ಯದ ನಾಲ್ಕು ಹೊಸ ಜನರೇಟರ ಅಳವಡಿಸಿದ್ದರಿಂದ ಸೋಂಕಿತರ ರೋಗಿಗಳ ಸಂಬಂಧಿಕರು ನಿಟ್ಟುಸಿರು ಬಿಟ್ಟಿದ್ದಾರೆ ಎಂದರು.
ಪುರಸಭೆ ಸದಸ್ಯ ರಾಮಾ ಮಾನೆ, ಅನಿಲ ಮಾನೆ, ಸಾಭೀರ ಜಮಾದಾರ, ಇಪರ್ಾನ ಬೇಪಾರಿ, ವರ್ಧಮಾನ ಸದಲಗೆ, ಗುಲಾಬ ಬಾಗವಾನ, ಪಿರೋಜ ಕಲಾವಂತ, ಪ್ರಭಾಕರ ಈರಪ್ಪ ಕೋರೆ, ರಾಜು ವಂಟಮುತ್ತೆ, ನ್ಯಾಯವಾದಿ ಮುದ್ದಸರ ಜಮಾದಾರ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ, ಸಂತೋಷ ಕೊನ್ನೂರೆ, ಆಡಳಿತಾಧಿಕಾರಿ ರಮೇಶ ನಾಯಿಕ, ಸೋಮನಾಥ ಪೂಜೇರಿ, ರಮೇಶ ದೊಡಮನಿ ಮುಂತಾದವರು ಉಪಸ್ಥಿತರಿದ್ದರು. ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನ ಜನರೇಟರ ಅಳವಡಿಕೆಗೆ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಚಾಲನೆ ನೀಡಿದರು