ಭಾರಿ ಮಳೆಗೆ ಮನೆಗಳು ಬಿದ್ದು ಹಾನಿ
ಮುಂಡಗೋಡ: ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಗ್ರಾಮೀಣ ಭಾಗದ ಮನೆಗಳು ಬಿದ್ದು ಹಾನಿ ಸಂಭವಿಸಿದೆ.
ಕಾತೂರ ಗ್ರಾಮದ ನೇತ್ರಾವತಿ ಯಲ್ಲಾಪುರ ಎಂಬುವರ ಮನೆ ಗೋಡೆ ಬಿದ್ದು ಹಾನಿಯಾಗಿದೆ. ಕಲಕೇರಿ ಗ್ರಾಮದ ರಮೀಜಾ ಕಲಕೇರಿ ಅವರ ಮನೆ ಮೇಲ್ಚಾವಣಿ ಬಿದ್ದು ಹಾನಿ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರೀಶೀಲನೆ ನಡೆಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.