ನಿವೃತ್ತಿ ವಾಹನ ಚಾಲಕರಿಗೆ ಸನ್ಮಾನ ಕಾರ್ಯಕ್ರಮ
ಬಳ್ಳಾರಿ 22 : ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಹಲವಾರು ವರ್ಷ ವಾಹನ ಚಾಲಕರಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ವಾಹನ ಚಾಲಕರಿಗೆ ಕರ್ನಾಟಕ ರಾಜ್ಯ ಸರ್ಕಾರದ ವಾಹನ ಚಾಲಕರ ಕೇಂದ್ರ ಸಂಘ, ಬೆಂಗಳೂರು ಅವರಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ, ಆಲ್ ಇಂಡಿಯಾ ಸೆಂಟ್ರಲ್ ಗವರ್ನಮೆಂಟ್ ಡ್ರೈವರ್ಸ್ ಫೆಡರೇಶನ್, ಹೊಸದಿಲ್ಲಿ ಮುಖಂಡರು ಪಾಪರಾವ್, ಆಂಧ್ರ್ರದೇಶದ ಸಂಘದ ಸಂಸ್ಥಾಪಕರು ಹಾಗೂ ದಕ್ಷಿಣ ಭಾರತದ ವಿಭಾಗದ ಅಧ್ಯಕ್ಷರು ಆದ, ವೈ ನಾಗೇಶ್ವರ ರಾವ್ ಪಾಲ್ಗೊಂಡಿದ್ದರು. ಸರ್ಕಾರಿ ಸೇವೆ ಭಗವಂತನ ಸೇವೆ ಎಂದು ಹಲವಾರು ವರ್ಷ ಚಾಲಕರಾಗಿ ಚೂಡಿದ ನಿಮಗೆ ಭಗವಂತನ ಆಶೀರ್ವಾದ ಸದಾ ಇರುತ್ತದೆ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ, ಲೋಕೋಪಯೋಗಿ ಇಲಾಖೆಗೆ ಸೇರಿದ, ಕೆ ಶಿವಪ್ಪ, ಮತ್ತು ಸಿದ್ದಲಿಂಗ, ಕೃಷಿ ಇಲಾಖೆ ಜೆ. ಬಾಬು, ವಾಣಿಜ್ಯ ತಲೆಗೆ ಇಲಾಖೆ, ಜೆ ಮುರಳಿ, ಕ್ಷೇತ್ರ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜೇಂದ್ರ ಇವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರು ಬಿ ರವಿ ಕುಮಾರ್, ವೇದಮೂರ್ತಿ, ಶ್ರೀನಿವಾಸಲು ಅಶ್ವತ ನಾರಾಯಣ ವೆಂಕಟೇಶ ಹಲವಾರು ಸಂಘದ ಸದಸ್ಯರು ಪಾಲ್ಗೊಂಡಿದ್ದರು.