ರಾಣೆಬೆನ್ನೂರ

ಅಂತರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಆನೇರ್ ಸಾಧನೆ

ಅಂತರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಆನೇರ್ ಸಾಧನೆ

ರಾಣಿಬೆನ್ನೂರ 27: ಇಲ್ಲಿನ ಎಡಿಬಿ ರಸ್ತೆಯಲ್ಲಿರುವ ಬಾಡಿಪವರ್ ಫಿಟ್‍ನೆಸ್ ಜಿಮ್‍ನ ಮಾಲೀಕ ಹಾಗೂ ದೇಹದಾರ್ಢ್ಯ ಪಟು ಇಮ್ತಿಯಾಜ್ ಆನೇರ್ ಇವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಪಡೆದುಕೊಂಡಿದ್ದಾರೆ.  ಪ್ರೇಮ್ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಳ್ಳಲಾದ ಅಂತರ್ ಜಿಲ್ಲಾ ಮಟ್ಟದ ತೂಕದ ವಿಭಾಗದಲ್ಲಿ ದ್ವಿತೀಯ ಸ್ಥಾನ, ದಾವಣಗೇರೆ ಎಲೆಬೇತೂರಿನಲ್ಲಿ ನಡೆದ ದೇಹರ್ದಾಡ್ಯ ಸ್ಪರ್ದೆಯಲ್ಲಿ ಬೆಸ್ಟ್ ಪೋಜರ್, ಕರ್ನಾಟಕ ಅಮೆನೂರ ಬಾಡಿಬಿಲ್ದರ್ ಅಸೋಸಿಯೇಶನ್ ಧರ್ಮಕಾಶಿ 2021 ರಲ್ಲಿ ಪ್ರಥಮ ಸ್ಥಾನ, ಚಿಕ್ಕಮಗಳೂರಿನಲ್ಲಿ ನಡೆದ ಮಿಸ್ಟರ್ ಬಜೆಡ್ ಜಮೀರ್ ಅಹ್ಮದ್‍ಖಾನ್ ಕ್ಲಾಸಿಕ್ 2021ರಲ್ಲಿ ಚಾಂಪಿಯನ್ ಟೈಟಲ್ (ಪ್ರಥಮ ಸ್ಥಾನ), ಹರಿಹರದ ಮಿಸ್ಟರ್ ಸಿರಿಸೇನಾ ಕ್ಲಾಸಿಕ್ 2021ರಲ್ಲಿ ಪ್ರಥಮಸ್ಥಾನ, ಬೆಂಗಳೂರಿನ Wಈಈ ಇಂಡಿಯಾ ಕರ್ನಾಟಕ ಸ್ಟೇಟ್ ಚಾಂಪಿಯನ್‍ಶಿಪ್‍ದಲ್ಲಿ ದ್ವಿತೀಯ ಸ್ಥಾನ ಹಾಗೂ ದಾವಣಗೇರೆಯಲ್ಲಿ ನಡೆದ ಮಿಸ್ಟರ್ ಬಸಾಪುರದಲ್ಲಿ ಪ್ರಥಮಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 



ಸುದ್ದಿ ಓದಿ