ರಾಷ್ಟ್ರೀಯ

ನಿವಾರ್ ಚಂಡಮಾರುತ : ಮನೆಯ ಗೋಡೆ ಕುಸಿತ, ಪವಾಡ ಸದೃಶವಾಗಿ ನಾಲ್ವರು ಪಾರು

ನಿವಾರ್ ಚಂಡಮಾರುತ : ಮನೆಯ ಗೋಡೆ ಕುಸಿತ, ಪವಾಡ ಸದೃಶವಾಗಿ ನಾಲ್ವರು ಪಾರು

ಪುದುಚೇರಿ, ನವೆಂಬರ್ 26: ನಿವಾರ್ ಚಂಡಮಾರುತದ ಪ್ರಭಾವದಿಂದ ಭಾರಿ ಮಳೆಯಾಗುತ್ತಿದ್ದು, ನೀರಿನಿಂದ ನೆನೆದ ಮನೆಯ ಗೋಡೆ ಕುಸಿದರೂ, ಅದೃಷ್ಟವಶಾತ್ ನಾಲ್ವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಪುದುಚೇರಿಯ ಮನ್ನಡಿಪೇಟೆ ಪಂಚಾಯತ್ ವಲಯದ ಕೋಮರಪಾಳಯದ ನಿವಾಸಿ ಮುರುಗನ್, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ಪವಾಡಸದೃಶ ರೀತಿಯಲ್ಲಿ ಪಾರಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ದಿನಗೂಲಿ ಕಾರ್ಮಿಕರಾದ ಮುರುಗನ್, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನಿದ್ರೆಯಲ್ಲಿರುವಾಗ ಗುರುವಾರ ಮುಂಜಾನೆ ಗೋಡೆ ಕುಸಿದಿದೆ.

ಗೋಡೆಯ ಭಗ್ನಾವಶೇಷಗಳು ಮನೆಯ ಹೊರಗೆ ಬಿದ್ದಿರುವ ಕಾರಣ ಯಾರಿಗೂ ತೊಂದರೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ಓದಿ