ರಾಜ್ಯದಲ್ಲಿ ಗೃಹ ರಕ್ಷಕರ ಸೇವೆ ಅಗಾಧ: ಉಜ್ಜನಕೊಪ್ಪ
ಲೋಕದರ್ಶನ ವರದಿ
ಕುಷ್ಟಗಿ 27: ವಾಸ್ತವವಾಗಿ ಗೃಹ ರಕ್ಷಕರು ನಿಕ್ಷ್ಕಾಮ್ ಸೇವೆಯನ್ನು ಸಲ್ಲಿಸುತ್ತಿರುವದು ಪ್ರಶಂಸನೀಯ ಸಂಗತಿ ಎಂದು ಗಂಗಾವತಿ ವಿಭಾಗದ ಡಿ.ವಾಯ್.ಎಸ್.ಪಿ ರುದ್ರೇಶ.ಎಸ್.ಉಜ್ಜನಕೊಪ್ಪ ಹೇಳಿದರು.
ಜಿಲ್ಲಾ ಗೃಹ ರಕ್ಷಕದಳದ ವತಿಯಿಂದ ಸಮೀಪದ ಹೇಮಗುಡ್ಡದಲ್ಲಿ ಹಮ್ಮಿಕೊಂಡಿದ್ದ ಕಳೆದ ಹತ್ತು ದಿನಗಳಿಂದ ನೂತನ ಗೃಹ ರಕ್ಷಕದಳದ ಸದಸ್ಯರಿಗೆ ಪ್ರಥಮ ವರ್ಷದ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಈ ಶಿಬಿರದಲ್ಲಿ ಹತ್ತು ದಿನಗಳ ಕಾಲ ತರಬೇತಿ ಪಡೆದ ಗೃಹ ರಕ್ಷಕರು ಸೇವೆಯಲ್ಲಿ ಶಿಸ್ತು ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು.
ನೀವು ಹೆಚ್ಚು ಕಡಿಮೆ ಪೋಲಿಸ ಇಲಾಖೆಯ ಜೊತೆ ಜೋತೆಗೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಬಹಳ ಜಾಗೃತಿಯಿಂದ ಇರಬೇಕು ಎಂದು ಹೇಳಿದರು. ವ್ಯಕ್ತಿ ಮಾತಾಡಬಾರದು ಅವರ ವ್ಯಕ್ತಿತ್ವ ಮಾತಾಡಬೇಕು ಆ ನಿಟ್ಟಿನಲ್ಲಿ ಗೃಹ ರಕ್ಷಕರು ಜೀವನದಲ್ಲಿ ಗುರಿಯನ್ನು ಹೊಂದಬೇಕು ಎಂದು ಕಿವಿಮಾತು ಹೇಳಿದರು. ಸಾಹಿತಿ ಮಾಜಿ ಗೃಹರಕ್ಷಕದಳದ ಅಧಿಕಾರಿ ಪಿ.ಬಿ.ಪಾಟೀಲ್ ಮಾತನಾಡಿ ಸಂಸ್ಥೆಯ ಬಗ್ಗೆ ಗೌರವ ಇಟ್ಟುಕೊಳ್ಳುವ ಗೃಹ ರಕ್ಷಕರು ಸಮರ್ಥವಾಗಿ ನಿಭಾಯಿಸಲು ಸಾದ್ಯ ಎಂದು ಹೇಳಿದರು.
ಕೊಪ್ಪಳ ಜಿಲ್ಲಾ ಗೃಹ ರಕ್ಷಕದಳದ ಸಮಾದೇಷ್ಟರಾದ ಡಾ.ಗವಿಸಿದ್ದಪ್ಪ. ಜಿ.ಬಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಅವರು 115 ಜನ ಹೊಸದಾಗಿ ನೇಮಕಗೊಂಡ ಗೃಹ ರಕ್ಷಕದಳದ ಸದಸ್ಯರಿಗೆ ಈ ಹತ್ತು ದಿನಗಳ ತರಬೇತಿಯಲ್ಲಿ. ಶಿಸ್ತು, ಕವಾಯತು, ಲಾಠಿ ಪೇರೆಡ್ ,ಅಗ್ನಿ ಶಯಮನ,ಪ್ರವಾಹ ರಕ್ಣಣೆ, ಪ್ರಥಮ ಚಿಕಿತ್ಸೆ,ರೈಫಲ್ ಬಳಕೆ,ಮತ್ತು ಕರ್ತವ್ಯದ ಸಂಧರ್ಭದಲ್ಲಿ ಹೇಗೆ ವರ್ತಿಸಬೇಕು ಎಂಬುದು ಮತ್ತು ಮನೋವಿಕಾಸ ಕುರಿತು ವಿಷಯ ಮಂಡನೆ ಮಾಡಲಾಯಿತು. ಪ್ರತಿ ನಿತ್ಯ ಸಾಯಂಕಾಲ ಗೃಹ ರಕ್ಷಕದಳದ ಸದಸ್ಯರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರ ಪ್ರತಿಭೆಗೆ ವೇದಿಕೆಯನ್ನು ಕಲ್ಪಿಸಲಾಗಿದೆ ಎಂದು ಹೇಳಿದರು. ಸೀನಿಯರ್ ಪ್ಲಟೂನ ಕಮಾಂಡರ್ ರವಿಂದ್ರ ಬಾಕಳೆ ನೂತನ ಗೃಹ ರಕ್ಷಕರಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಪ್ಲಟೂನ ಕಮಾಂಡರ್ ನಾಗರಾಜ ಬಡಿಗೇರ ವರದಿವಾಚನವನ್ನು ಮಾಡಿದರು. ಕ್ಯಾಂಪ್ ಕಮಾಂಡೆಂಟ್ ಆಗಿ ವೀರಣ್ಣ ಬಡಿಗೇರೆ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಕಿಮ್ಸ ನಿರ್ದೇಶಕ ವಿಜಯನಾಥ ಇಟಗಿ , ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸೈಯದ್ , ದೊಡ್ಲಹಾಲಿನ ಕೇಂದ್ರದ ಮುಖ್ಯಸ್ಥ ಪ್ರದೀಪ ಉಪಸ್ಥಿತರಿದ್ದರು.