ಹೋಮ ಹವನದಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚಿಸುತ್ತದೆ; ವೆಂಕಪ್ಪಯ್ಯ ಒಡೆಯರ
ಹೋಮ ಹವನದಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚಿಸುತ್ತದೆ; ವೆಂಕಪ್ಪಯ್ಯ ಒಡೆಯರ
ಬ್ಯಾಡಗಿ 25: ಪ್ರತಿಯೊಬ್ಬರೂ ಹೋಮ ಹವನ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಪುಣ್ಯ ಪ್ರಾಪ್ತಿ ದೊರೆಯಲಿದೆ ಎಂದು ಮೈಲಾರ ದೇವಸ್ಥಾನ ಸಮಿತಿಯ ವೆಂಕಪ್ಪಯ್ಯ ಒಡೆಯರ ಹೇಳಿದರು. ಅವರು ಶುಕ್ರವಾರ ತಾಲೂಕಿನ ಮೋಟೆಬೆನ್ನೂರ ಗ್ರಾಮದ ಸಿಬಾರ ಕಟ್ಟಿಯ ಕರಿಯಾಲ ದೇವರ ಹೋಮ ಹವನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದುಷ್ಟ ಕ್ರಿಯೆಗಳನ್ನು ಎದುರಿಸಲು ಮತ್ತು ನಕಾರಾತ್ಮಕ ಆಲೋಚನೆಗಳನ್ನು ದೂರವಿಡಲು ಕರಿಯಾಲ ದೇವರಿಗೆ ಹೋಮ ಪೂಜೆ ಮಾಡುವುದರಿಂದ ಬಾಹ್ಯ ದುಷ್ಟ ಕ್ರಿಯೆಗಳಿಗೆ ಶಕ್ತಿಶಾಲಿ ಮತ್ತು ಪರಿಣಾಮಕಾರಿ ಹೋಮ. ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.ಗೆಳೆಯರ ಬಳಗದ ಮುಖಂಡ ರಾಜೀವ್ ಶಿಗ್ಲಿ ಮಾತನಾಡಿ ಹೋಮ ಹವನ ಪೂಜೆ ಮಾಡುವುದರಿಂದ ಪ್ರತಿಯೊಬ್ಬರೂ ಧರ್ಮ ಮಾರ್ಗವನ್ನು ಅನುಸರಿಸುವಂತೆ ಮಾಡುತ್ತದೆ. ಕರಿಯಾಲ ದುಷ್ಟಶಕ್ತಿಗಳ ವಿನಾಸವಾಗಿ ಶಿಷ್ಟ ಶಕ್ತಿಯ ಅವತಾರ ವಾಗಲಿದೆ. ಈ ಹೋಮವು ಆತ್ಮರಕ್ಷಣೆಗಾಗಿ ಮಾತ್ರವಲ್ಲದೆ ಶತ್ರುಗಳನ್ನು ದೂರವಿಡಲು ಸಹಕಾರಿಯಾಗಲಿದೆ. ಈ ಹೋಮವನ್ನು ಶುಕ್ರವಾರ ಮಾಡುವುದರಿಂದ ಗ್ರಾಮಕ್ಕೆ ಉತ್ತಮ ಮಳೆ ಬೆಳೆ ಆಗಿ ಆರೋಗ್ಯ ಸಂಪತ್ತು ಹೆಚ್ಚಲಿದೆ ಎಂದರುಈ ಸಂದರ್ಭದಲ್ಲಿ ಭಕ್ತರಾದನಾಗರಾಜ್ ಕಟಗಿ, ಮಂಜಣ್ಣ ಎಲಿ, ಮಾರ್ತಾಂಡಪ್ಪ ಬ್ಯಾಟಪ್ಪನವರ, ಉಮೇಶ ಸವಣೂರ, ಚಂದ್ರು ಗೌರಪುರ, ಗುಡ್ಡಪ್ಪ ಕದರಮಂಡಲಗಿ, ಪರಮೇಶಪ್ಪ ದೇವರೇಳ, ಪರಶುರಾಮ ಹೊಂಬರಡಿ, ರಾಮಪ್ಪ ಹುಚ್ಚೆರ, ಹೇಮಣ್ಣ ನವಣಕ್ಕಿ, ವೀರೇಶ ನಾಯಕ, ಸೋಮಣ್ಣ ಭಂಡಾರಿ, ಗುಡ್ಡಪ್ಪ ತಿಮ್ಮಾಪುರ, ಶಂಕ್ರಣ್ಣ ಪವಾರ, ಗದಿಗೆಪ್ಪ ಗಿರ್ಜಿ, ತಿರಕಪ್ಪ ಹೊನಕೇರಿ, ಮರ್ದನಸಾಬ್ ದೇವಿ ಹೊಸೂರು, ಮೈಲಾರ ಸೇರಿದಂತೆ ಇತರರಿದ್ದರು.