ರಾಣೆಬೆೆನ್ನೂರಿನಲ್ಲಿ ಮಾ.19ಕ್ಕೆ ಹೋಳಿ: ಒತ್ತಾಯದ ಬಣ್ಣ ಹಚ್ಚಿದರೆ ಕಾನೂನು ಕ್ರಮ
ರಾಣಿಬೆನ್ನೂರು 17: ನಗರದಲ್ಲಿ ಮಾ.19ರಂದು ಹೋಳಿ ಹಬ್ಬವನ್ನು ಆಚರಿಸುವ ಕಾಲಕ್ಕೆ ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗದಂತೆ ಶಾಂತಿ ಸೌಹಾರ್ದತೆಯಿಂದ ನಡೆದುಕೊಳ್ಳಬೇಕು, ಯಾರೇ ಅಗಲಿ ಒತ್ತಾಯಪೂರ್ವಕ ಬಣ್ಣ ಹಚ್ಚಬಾರದು, ಹಾಗೇನಾದರೂ ಆದರೆ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಹೇಳಿದರು.
ಸ್ಥಳೀಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಸ್ಥಳೀಯ ತಾಲೂಕು ಆಡಳಿತದ ವತಿಯಿಂದ ಹೋಳಿ ಹಬ್ಬದ ಪ್ರಯುಕ್ತ ಏರಿ್ಡಸಲಾಗಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಸಾಯನಿಕ ಬಣ್ಣಗಳನ್ನು ಬಳಸದೆ ನೈಸರ್ಗಿಕ ಬಣ್ಣಗಳಿಂದ ಹಬ್ಬ ಆಚರಿಸಬೇಕು ಎಂದರು.
ನಗರಸಭೆ ಪೌರಾಯುಕ್ತ ಉದಯಕುಮಾರ ಬಿ.ಟಿ. ಮಾತನಾಡಿ, ಪರಿಸರ ಮಾಲಿನ್ಯ ನಿಯಂತ್ರಣದ ವತಿಯಿಂದ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬಣ್ಣ ತಯಾರಕರು, ವಿತರಕರು ಹಾಗೂ ಹಂಚಿಕೆದಾರರಿಗೆ ಜಾಗೃತಿ ಮೂಡಿಸಲಾಗಿದೆ. ರಾಸಾಯನಿಕ ಬಣ್ಣದಿಂದ ಅನಾರೋಗ್ಯ ತುತ್ತಾಗುತ್ತಾರೆ, ಸಾದ್ಯವಾದಷ್ಟು ಬಣ್ಣವನ್ನು ನೀರಿನಲ್ಲಿ ಬೆರಸಿ ಹಚ್ಚಬೇಕು, ಮೊಟ್ಟೆ, ಆಯಿಲ್ ಹಾಗೂ ರಾಸಾಯನಿಕ ಬಳಸಬಾರದು ಎಂದರು.
ನಗರಸಭೆ ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ಕಂದಾಯ ಅಧಿಕಾರಿ ಮಂಜುನಾಥ ಕೆಂಚರೆಡ್ಡಿ, ಸಿಪಿಐ ಎಂಐ ಗೌಡಪ್ಪಗೌಡ್ರ, ಪಿಎಸ್‌ಐ ನಾಗರಾಜ ವೇದಿಕೆಯಲ್ಲಿ ಇದ್ದರು.
ನಗರಸಭೆ ಸದಸ್ಯರಾದ ನಾಗರಾಜ ಪವಾರ, ಪ್ರಕಾಶ ಪೂಜಾರ, ಗಂಗಮ್ಮ ಹಾವನೂರ, ಹಬೀಬ ಕಂಬಳಿ, ನಿಂಗರಾಜ ಕೋಡಿಹಳ್ಳಿ, ಮಾಜಿ ಸದಸ್ಯ ಪ್ರಭುಸ್ವಾಮಿ ಕರ್ಜಗಿಮಠ, ಅನಿಲಕುಮಾರ ಸಿದ್ದಾಳಿ, ಮೈಲಪ್ಪ ದಾಸಪ್ಪನವರ, ರಮೇಶ ಗುತ್ತಲ, ಶಂಕ್ರ್ಪ ಕಾಕಿ, ವಸಂತ ಪೂಜಾರ, ಶೇರುಖಾನ್ ಕಾಬೂಲಿ, ಅಮಾನುಲ್ಲಾ ಹಾವೇರಿ, ಕೆ.ಕೆ.ಲಕ್ಷ್ಮೇಶ್ವರ ಸೇರಿದಂತೆ ಮತ್ತಿತರು ಇದ್ದರು.