ಗಣರಾಜ್ಯೋತ್ಸವ ದಿನಾಚರಣೆ: ಧ್ವಜಾರೋಹಣ
ಜಮಖಂಡಿ26: ಶ್ರೇಷ್ಠವಾದ ಸಂವಿಧಾನವನ್ನು ಜಾರಿಗೆ ತಂದ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಾಸಕಾಂಗ. ನ್ಯಾಯಾಂಗ. ಕಾರ್ಯಂ ಗ ಒಳಗೊಂಡ ಪವಿತ್ರವಾದ ಸಂವಿಧಾನವನ್ನು ಜಾರಿಗೆ ತಂದಿದ್ದಾರೆ.ಜನರ ಹಿತಾಸಕ್ತಿಗಳಿಗೆ 150 ಕ್ಕೂ ಹೆಚ್ಚು ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿದೆ. ಅದನ್ನು ಎಲ್ಲರೂ ಗೌರವಿಸುವ ದಿನಾಚರಣೆಯಾಗಿದೆ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಹೇಳಿದರು.
ನಗರದ ಐತಿಹಾಸಿಕ ಪೋಲೋ ಮೈದಾನದಲ್ಲಿ ನಡೆದ 74 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಧ್ವಜಾರೋಹಣವನ್ನು ನೇರವೆರಿಸಿ ಮಾತನಾಡಿದರು.
ಸಂವಿಧಾನ ರಚನೆಯಲ್ಲಿ 22 ಸಮಿತಿಯನ್ನು ಒಳಗೊಂಡು ಹಲವಾರು ಮಹನೀಯರು ಸೇರಿಕೊಂಡು ರಚನೆಯನ್ನು ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಗಲಿರುಳು ತಮ್ಮ ಪರಿಶ್ರಮದಿಂದ ದೇಶಕ್ಕೆ ಪವಿತ್ರವಾದ ಸಂವಿಧಾನವನ್ನು ಜಾರಿಗೆ ತಂದರು.ದೇಶದ ಜನತೆಯ ಹಿತಾಸಕ್ತಿಗಾಗಿ 150 ಕ್ಕೂ ಹೆಚ್ಚು ತಿದ್ದುಪಡಿ ಮಾಡಲಾಗಿದೆ. ಸಂವಿಧಾನ ಮೂಲ ಆದೇಶವನ್ನು ಈಡೇರಿಸುವ ಕೆಲಸ ರಾಜಕೀಯ ಮಹನೀಯರು ಹಾಗೂ ಅಧಿಕಾರಿಗಳ ವೃಂದದವರು ಮಾಡಬೇಕಾಗಿದೆ.
ಅದಕ್ಕಾಗಿ ಎಲ್ಲರೂ ಶ್ರಮಿಸಬೇಕಾಗಿದೆ ಎಂದರು.ಶಾಸಕ ಆನಂದ ನ್ಯಾಮಗೌಡ ಮಾತನಾಡಿ. ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ-ಅಪಮಾನ ಸಾಕಷ್ಟು ಜನರು ನೀಡಿದರು ಸಹ ಅವರ ಅದಕ್ಕೆ ಹೆದರದೆ. ಸಂವಿಧಾನವನ್ನು ಜಾರಿಗೆ ತರಲು ಮುಂದಾದರು. ಸಂವಿಧಾನ ಕರಡು ಸಮಿತಿಯಲ್ಲಿ ಸಾಕಷ್ಟು ಮಹನೀಯರು ಇದ್ದರು.
ಆದರೆ ಅವರಿಗೆ ಸಂವಿಧಾನ ರಚನೆ ಮಾಡಲು ಸಾಧ್ಯವಾಗಲ್ಲಿಲ್ಲ. ಬಹಳಷ್ಟು ಜನ ಹೇಳುತ್ತಾರೆ. ಅಂಬೇಡ್ಕರ್ ಅವರು ಒಬ್ನರೆ ರಚನೆ ಮಾಡಿಲ್ಲ ಎಂದು ಟೀಕೆಯನ್ನು ಮಾಡುತ್ತಿದ್ದಾರೆ. ಆದರೆ ದೇಶದ ಜನತೆಗೆ ಒಳಿತಿಗಾಗಿ ಶ್ರೇಷ್ಠ ಸಂವಿಧಾನವನ್ನು ಜಾರಿಗೆ ತಂದಿದ್ದಾರೆ ಎಂದರು.74 ನೇ ಗಣರಾಜ್ಯೋತ್ಸವ ಜಾರಿಗೆ ಬಂದರು ಸಹ ಎಸಿ.ಎಸ್.ಟಿ.ಜನಾಂಗದ ಮೇಲೆ ಇದ್ದುವರೆಗೂ ಅಸ್ಪೃಶ್ಯತೆ ಇದುವರಗೂ ಜಾರಿಗೆಯಲ್ಲಿ ಇದೆ. 12ನೇ ಶತಮಾನದಲ್ಲಿ ಬಸವಣ್ಣನವರು ಸಮಾತೆಗಾಗಿ ಶ್ರಮಿಸಿದ್ದಾರೆ. ಇಂದು ಶ್ರೇಷ್ಠವಾದ ದಿನದಂದು ಸಂವಿಧಾನ ಮೂಲ ಆದೇಶಗಳನ್ನು ಎತ್ತಿಹಿಡಿಯುವ ಆದ್ಯ ಕರ್ತವ್ಯವಾಗಿದೆ.
ನಾನು ನಾಲ್ಕು ವರ್ಷದ ರಾಜಕೀಯದಲ್ಲಿ ಏರುಪೇರುಗಳನ್ನು ಎದುರಿಸಬೇಕಾಯಿತು. ಇದೇ ಕೊನೆಯ ಗಣರಾಜ್ಯೋತ್ಸವ ದಿನವನ್ನು ಆಚರಿಸಬೇಕಾಗಿದೆ. ಮುಂದಿನ ದಿನ ಚುನಾವಣೆ ಸಮೀಪ ಬಂದಿರುವ ಕಾರಣ ಈ ಮಾತನ್ನು ಹೇಳಬೇಕಾಗಿದೆ. ನಮ್ಮ ಅವದಿಯಲ್ಲಿ ಪ್ರವಾಹ. ಕರೋನಾ ಅಂತಹ ದೊಡ್ಡ ದೊಡ್ಡ ಸಂಕಷ್ಟವನ್ನು ಎದುರಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿ. ಕ್ಷೇತ್ರದ ಜನತೆಗೆ ಶ್ರಮಿಸಲಾಗಿದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯ ಕೆಲಸವನ್ನು ಮಾಡುವ ಜೊತೆಗೆ ಎಲ್ಲ ಜನಾಂಗದ ಜನತೆಗೆ ಸಮಾನತೆಯನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.
ಮಾಜಿ ಶಾಸಕ ಶ್ರೀಕಾಂತ ಕುಲಕಣರ್ಿ. ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ. ನಗರ ಪ್ರಾಧಿಕಾರ ಅಧ್ಯಕ್ಷ ಯಮನೂರ ಮೂಲಂಗಿ. ಡಿ.ಎಸ್.ಪಿ.ಶಾಂತವೀರ. ಸಿಪಿಐ ಗುರುನಾಥ ಚವ್ಹಾಣ ಸೇರಿದಂತೆ ಅನೇಕ ರಾಜಕೀಯ ಮುಖಂಡರು. ತಾಲೂಕಾ ವಿವಿಧ ಇಲಾಖೆಯ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಹಶೀಲ್ದಾರ ಸದಾಶಿವ ಮಕ್ಕೋಜಿ ಸ್ವಾಗತಿಸಿ. ಪ್ರಾಸ್ತಾವಿಕ ಮಾತನಾಡಿದರು.ಪೋಲಿಸ್ ಇಲಾಖೆ. ಎನ್.ಸಿ.ಸಿ.ಸ್ಕೌಟ್ಸ್ .ತಾಲೂಕಿನ ವಿವಿಧ ಶಾಲಾ ಮಕ್ಕಳಿಂದ ಪೋಲೋ ಮೈದಾನದಲ್ಲಿ ಕವಾಯತು ನಡೆಸಲಾಯಿತುವಿವಿಧ ಸಾಧನೆಯಲ್ಲಿ ಸಾಧನೆಗೈದ ಸಾಧಕರಿಗೆ ಗೌರವಿಸಿ.ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸ್ಥಬ್ದ ಚಿತ್ರಣ ಜರುಗಿತು.