ಹಿಂದೂ ಮಹಾಗಣಪತಿ:14 ರಂದು ನಗರಕ್ಕೆ ಚಕ್ರವರ್ತಿ ಸೂಲಿಬೆಲೆ
ರಾಣೆಬೆನ್ನೂರು ಸೆ 9: ಕಳೆದ ಹತ್ತು ವರ್ಷಗಳಿಂದ ಭಜರಂಗದಳವು ಸಂಗಮ್ ವೃತ್ತದಲ್ಲಿ, ಸಾಮಾಜಿಕ ಸಾಂಸ್ಕೃತಿಕ,ಧಾರ್ಮಿಕ, ಸೇವಾ ಹಿನ್ನೆಲೆಯಲ್ಲಿ, ಮಹಾಗಣಪತಿ ಯನ್ನು ಪ್ರತಿಷ್ಠಾಪಿಸಲಾಗಿದೆ. ಯಾವುದೇ ಜಾತಿ ಮತ ಭೇದ ಭಾವ ಪಕ್ಷ ಎಣಿಸದೆ ಸರ್ವ ಜನಾಂಗದೊಂದಿಗೆ ಭಾವೈಕ್ಯತೆ ಇಂದ ಪ್ರಸ್ತಾಪಿಸುತ್ತಾ ಬರಲಾಗಿದೆ.19 ದಿವಸಗಳ ಕಾಲ ಶ್ರೀಗಣೇಶನು, ದರ್ಶನಾಶೀರ್ವಾದ ನೀಡುವ ವ್ಯವಸ್ಥೆ ಮಾಡಲಾಗಿದೆ. ವ್ಯವಸ್ಥಾಪಕ, ಯುವ ಮುಖಂಡ ಅಜಯ್ ಮಠದ ಹೇಳಿದರು.
ಗುರುವಾರ ಗಣೇಶ್ ಮಂಟಪದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ, ಮಾತನಾಡಿದ ಅವರು ಸೆಪ್ಟೆಂಬರ್ 10ರಂದು ಬಾಲ ಗಂಗಾಧರ ತಿಲಕ್ ಮತ್ತು ವೀರ ಸಾವರ್ಕರ್ ಅವರ ಸ್ಮರಣೆಯಲ್ಲಿ ಅಂದು ಶನಿವಾರ ಮುಂಜಾನೆ 10 ಗಂಟೆಯಿಂದ ಸಂಜೆ 5 ರವರೆಗೆ ಬೃಹತ್ ರಕ್ತದಾನ ಶಿಬಿರ ಆಯೋಜಿಸಿದೆ. 13ರಂದು ನಗರದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಮತ್ತು ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಬುಧವಾರ14 ರಂದು ಸಂಜೆ ರಾಷ್ಟ್ರೀಯವಾದಿ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರಿಂದ " ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ" ವಿಷಯವಾಗಿ ಉಪನ್ಯಾಸ ನಡೆಯಲಿದೆ ಮತ್ತು ಅಂದೇ ರಾತ್ರಿ ಕಾರ್ಯಕರ್ತರಿಗೆ 150ಕ್ಕೂ ಹೆಚ್ಚು ಭಗವದ್ಗೀತೆ ಪುಸ್ತಕಗಳನ್ನು ವಿತರಿಸಲಾಗುವುದು ಎಂದರು. ಗುರುವಾರ 15ರಂದು ಸಂಜೆ, ಹಿಂದುತ್ವದ ಪ್ರತಿಪಾದಕ ಪ್ರಮೋದ ಮುತಾಲಿಕ್ ಅವರ ಸಾರ್ವಜನಿಕ ಭಾಷಣವನ್ನು ನಡೆಯಲಿದೆ. ಉತ್ಸವದ ನಿಮಿತ್ತ 17 ರಂದು ಗಣಹೋಮ, ಮಹಾಪ್ರಸಾದ ವಿತರಣೆಯಾಗಲಿದೆ. 18ರಂದು ಸಂಜೆ ಶ್ರೀಗಣೇಶನ ಉತ್ಸವಮೂರ್ತಿಯ ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅಂದೇ ರಾತ್ರಿ ಹರಿಹರದ ತುಂಗಭದ್ರಾ ನದಿಯಲ್ಲಿ ವಿಸರ್ಜಿಸಲಾಗುವುದು ಎಂದು ಮಠದ ವಿವರಿಸಿ ಮಾತನಾಡಿದರು.
ಗೌರವಾಧ್ಯಕ್ಷ ಕುಬೇರಗೌಡ ಸಣ್ಣ ಮನಿ, ಅಧ್ಯಕ್ಷಹುಚ್ಚಪ್ಪ ಮೆಡ್ಲೇರಿ,ಶಿವು ಅಸುಂಡಿ, ನಾಗರಾಜ ಮಾಕನೂರ, ಭೀಮಪ್ಪ ಅರಳಿಕಟ್ಟಿ, ಚೇತನ್ ನೂರಂದೇವರ ಮಠ, ನವೀನ, ಪ್ರಶಾಂತ, ಮಾಲತೇಶ ಗೌಡ್ರ, ಪ್ರಶಾಂತ್ ಕುರುಬರ, ಶ್ರೀಕಾಂತ್ ಮತ್ತಿತರ ಗಣ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.