ಅನೀಲಕುಮಾರ ಇರಾಜಗೆ ಹಿಂದಿರತ್ನ ಪ್ರಶಸ್ತಿ
ತಾಳಿಕೋಟೆ 06: ಪಟ್ಟಣದ ಎಸ್.ಕೆ.ಪದವಿ ಪೂರ್ವ ಕಾಲೇಜು ಹೈಸ್ಕೂಲ್ ವಿಭಾಗದ ಹಿಂದಿ ವಿಷಯ ಶಿಕ್ಷಕ ಅನಿಲಕುಮಾರ ಇರಾಜ ಅವರಿಗೆ ಜಿಲ್ಲಾ ಮಟ್ಟದ ಹಿಂದಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕರ್ನಾಟಕ ರಾಜ್ಯ ಹಿಂದಿ ಶಿಕ್ಷಕರ ಸಂಘ ವಿಜಯಪುರದಲ್ಲಿ ಏರಿ್ಡಸಲಾದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಅವರು ಕಳೆದ 31 ವರ್ಷಗಳಿಂದ ಹಿಂದಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿದ್ದರ ಫಲವಾಗಿ ಜಿಲ್ಲಾ ಮಟ್ಟದ ಹಿಂದಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅನೀಲಕುಮಾರ ಇರಾಜ ಅವರಿಗೆ ಜಿಲ್ಲಾ ಮಟ್ಟದ ಹಿಂದಿ ರತ್ನ ಪ್ರಶಸ್ತಿ ಲಬಿಸಿದ್ದರಿಂದ ವೀವಿ ಸಂಘದ ಪದಾದಿಕಾರಿಗಳು, ಎಸ್.ಕೆ.ಪ್ರೌಢ ಶಾಲೆಯ ಉಪ ಪ್ರಾಚಾರ್ಯರು ಸೇರಿದಂತೆ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.