ಕುಷ್ಟಗಿ

‘ಪಂಚ ಪೀಠದ ಶ್ರೀಶೈಲ ದ್ವಾದಶಿ ಪೀಠಾರೋಹಣಕ್ಕೆ ಕುಷ್ಟಗಿಯಲ್ಲಿ ಸಹಕಾರ’

‘ಪಂಚ ಪೀಠದ ಶ್ರೀಶೈಲ ದ್ವಾದಶಿ ಪೀಠಾರೋಹಣಕ್ಕೆ ಕುಷ್ಟಗಿಯಲ್ಲಿ ಸಹಕಾರ’

ಕುಷ್ಟಗಿ 14: ಪಂಚ ಪೀಠದ ಶ್ರೀಶೈಲ ಜಗದ್ಗುರುಗಳ  ಪಾದಯಾತ್ರೆಗೆ ಹಾಗೂ ದ್ವಾದಶಿ ಪೀಠಾರೋಹಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವ ಮೂಲಕ 35 ದಿನಗಳ ಪಾದಯಾತ್ರೆಗೆ ಎಲ್ಲರೂ ಭಾಗವಹಿಸಬೇಕು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು.  

ದ್ವಾದಶಿ ಪೀಠಾರೋಹಣ ಹಾಗೂ ಯಡಿಯೂರಿ ನಿಂದಾ ಶ್ರೀ ಶೈಲದವರೆಗೆ 650 ಕಿ.ಮೀ  ಪಾದಯಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮ ಆಯೋಜಿಸುವ ಸಲುವಾಗಿ ಪಟ್ಟಣದ ಮದ್ದಾನೇಶ್ವರ ಮಠದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಭಕ್ತರ ಸಭೆಯಲ್ಲಿ ಮಾತನಾಡಿದ ಅವರು ಶ್ರೀಶೈಲ ಪೀಠದ ಚೆನ್ನಮಲ್ಲ ಪಂಡಿತರಾದ್ಯ ಜಗದ್ಗುರುಗಳು ಭಕ್ತರ ಉದ್ದಾರಕ್ಕೆ ಶ್ರೀ ಮಠದಲ್ಲಿ ಅನೇಕ ಕಾರ್ಯಕ್ರಮ ಆಯೋಜಿಸಿದ್ದಾರೆ ಕಾರಣ ಕುಷ್ಟಗಿ ಪಟ್ಟಣದಿಂದ ತನು ಮನ ಧನ ದಿಂದ ಸೇವೆಯನ್ನು ಸಲ್ಲಿಸುವ ಬಗ್ಗೆ ಸೇರಿದ ಮಠದ ನೂರಾರು ಭಕ್ತರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.  

ಈ ಸಂದರ್ಭದಲ್ಲಿ ಅವರು  ಕೊನೆಯ ಐದು ದಿನದ ವಿಶೇಷ ಕಾರ್ಯಕ್ರಮ ನೆಡೆಯುತ್ತದೆ ತಪ್ಪದೆ ಎಲ್ಲರೂ ಭಾಗವಹಿಸಲು ಶಾಸಕರು ಮನವಿ ಮಾಡಿದರು ಒಟ್ಟಾರೆ  ಕಾರ್ಯಕ್ರಮ ಯಶಸ್ವಿ ಗೋಳಿಸಲಾಗುವದು ಎಂದು ಹೇಳಿದರು.  

ಶ್ರೀಶೈಲ ಪೀಠದ ಚೆನ್ನಮಲ್ಲ ಪಂಡಿತರಾದ್ಯ ಜಗದ್ಗುರುಗಳು ಭಕ್ತರಿಗೆ ಪಾದಯಾತ್ರೆ ಹಾಗೂ ಪೀಠದಲ್ಲಿ ಜರಗುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಸುವಂತೆ ಕರೆ ನೀಡಿದರು.  

ಪಾದಯಾತ್ರೆ ಹಾಗೂ ಪೀಠದಲ್ಲಿ ಜರಗುವ ಧಾರ್ಮಿಕ ಕಾರ್ಯಕ್ರಮಗಳಿಗೆ ದೇಣಿಗೆ ನೀಡಿದ ಸರ್ವ ಭಕ್ತರಿಗೆ ಗೌರವ ಸರ್ಮಪಿಸಿದರು. ಬಸವರಾಜ ಕುದರಿಮೋತಿಯವರು, ಶೇಖರಗೌಡ ಮಾಲಿ ಪಾಟೀಲ್ ದೇವೇಂದ್ರ​‍್ಪ ಬಳೋಟಗಿ, ಮಲ್ಲಿಕಾರ್ಜುನ ಮಂಗಳೂರು ,ಬಸೆಟ್ಟಪ್ಪ ಕುಂಬಳಾವತಿ, ಎಸ್ ಹೆಚ್ .ಹಿರೇಮಠ, ಗಂಗಮ್ಮ ಹಿರೇಮಠ, ಮದ್ದಾನೇಶ್ವರ ಮಠ, ಚಳಗೇರಿ ಮಠದಿಂದ ಹಾಗೂ ಹಲವಾರು ಭಕ್ತರು ದೇಣಿಗೆಯನ್ನು ಸಮರ​‍್ಿಸಿದರು.  

ಆಗಮಿಸಿ ಮೂಲಕ ಸೇವೆಯನ್ನು ಮಾಡಲು ಭಕ್ತರಿಗೆ ಈ ಸಂದರ್ಭದಲ್ಲಿ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಕುಷ್ಟಗಿ, ಚಳಗೇರಿಯ ವೀರ  ಸಂಗಮೇಶ್ವರ ಶಿವಾಚಾರ್ಯ, ಮಂಗಳೂರಿನ ಕರಿಬಸವ ಶಿವಾಚಾರ್ಯ, ಚಂದ್ರಶೇಖರ ದೇವರು, ಕರಿಬಂಟನಾಳ ಶ್ರೀಗಳು ಮತ್ತು ಪುರಸಭೆ ಅಧ್ಯಕ್ಷ ಗಂಗಾಧರ ಸ್ವಾಮಿ ಹಿರೇಮಠ ಸೇರಿದಂತೆ ಅನೇಕ ಶ್ರೀಗಳು ಉಪಸ್ಥಿತರಿದ್ದರು. ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆಗೆ ಸಹಕರಿಸುವ ದಾಗಿ ವಾಗ್ದಾನ ಮಾಡಿದರು. 


ಸುದ್ದಿ ಓದಿ