ಮತ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯ: ಸತೀಶ್ ಜಾರಕಿಹೊಳಿ
ಲೋಕದರ್ಶನ ವರದಿ
ಉಳ್ಳಾಗಡ್ಡಿ-ಖಾನಾಪೂರ 11: ದೇಶದ ಭವಿಷ್ಯ ಶಿಕ್ಷಣದ ಮೇಲೆ ನಿಂತಿದ್ದು ಆ ನಿಟ್ಟಿನಲ್ಲಿ ಯಮಕನಮರಡಿ ಮತಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರಾಶ್ಯಸ್ತ್ಯ ನೀಡಲಾಗಿದೆ. ಗ್ರಾಮದಲ್ಲಿನ ಪ್ರಥಮ ದರ್ಜೆ ಕಾಲೇಜಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ನಾವಿಂದು ಜಗತ್ತಿನಲ್ಲಿ ಕಳ್ಳತನವಾಗದಂತಹ ಶಿಕ್ಷಣ, ಜ್ಞಾನ, ನೀಡುವ ಕಾರ್ಯಕ್ಕೆ ಉತ್ತೇಜನ ನೀಡುತ್ತಿರುವುದಾಗಿ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಅವರು ಶನಿವಾರ ದಿ. 10ರಂದು ಉಳ್ಳಾಗಡ್ಡಿ-ಖಾನಾಪೂರದ ಡಿ.ಬಿ.ಹೆಬ್ಬಾಳಿ ಸಕರ್ಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ಸಕರ್ಾರವು ದೇವಸ್ಥಾನಗಳಿಗೆ ಅನುದಾನ ಕೊಡುವ ಬದಲು ಶಿಕ್ಷಣ ಕ್ಷೇತ್ರಕ್ಕೆ ಶಾಲಾ ಕಾಲೇಜುಗಳಿಗೆ ಅನುದಾನ ನೀಡಿದರೆ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುವುದು. ಶಾಲಾ ಕಾಲೇಜುಗಳು ನಿಜವಾದ ದೇವಾಲಯಗಳು ಇಂದು ನಾವೆಲ್ಲರೂ ಮೌಢ್ಯದ ವಿರುದ್ಧ ಹೋರಾಡಬೇಕಾಗಿದೆ. ಮನುಷ್ಯನು ತನ್ನ ಜೀವನದಲ್ಲಿ ಬದಲಾವಣೆಯಾಗಬೇಕು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಡಬೇಕಾಗಿದೆ. ಇತ್ತೀಚೆಗೆ ಮೋಸ ವಂಚನೆಗಳು ಹೆಚ್ಚಾಗುತ್ತಿದ್ದು ಇದರ ಕುರಿತು ಜಾಗೃತರಾಗಬೇಕು. 6ನೇಯ ಶತಮಾನದ ಬುದ್ಧ 12ನೇಯ ಶತಮಾನದ ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರರ ಇತಿಹಾಸ ಓದಿದಾಗ ಮಾತ್ರ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಎಲ್ಲಾ ಶಾಲಾ ಕಾಲೇಜುಗಳ ಅಭಿವೃದ್ಧಿ ಪಡಿಸಿ ಉತ್ತಮ ಗುಣಾತ್ಮಕ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುವಂತೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಉ.ಖಾನಾಪೂರದಲ್ಲಿ ಪದವಿ ಮಹಾವಿದ್ಯಾಲಯ ಆರಂಭಿಸಲು ಮಂಜೂರಾತಿ ದೊರೆತ್ತಿದ್ದು, ಶೀಘ್ರದಲ್ಲಿ ಪದವಿ ಮಹಾವಿದ್ಯಾಲಯ ಆರಂಭಿಸಲಾಗುವುದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಯಮಕನಮರಡಿ ಸಿಇಎಸ್ ಪಿಯು ಕಾಲೇಜಿನ ಉಪನ್ಯಾಸಕ ಬಿ.ಎ. ಮಾನಗಾಂವಿ ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಗುರುವಿನ ಪಾತ್ರ ಬಹುಮುಖ್ಯವಾಗಿದ್ದು, ವಿದ್ಯಾರ್ಥಿಗಳು ಸಾಧಕರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಮ್.ಎಮ್. ಮಗದುಮ್ಮ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರ ಆರ್.ಎ. ಸಾಲ್ವಿ, ಡಾ. ನಿಖಿಲ ವಡ್ಡರ ಹಾಗೂ ಮಾಜಿ ಜಿ.ಪಂ. ಸದಸ್ಯ ಪಾರೇಶಗೌಡ ಪಾಟೀಲ ಮಾತನಾಡಿದರು.
ಮಾಜಿ ಜಿ.ಪಂ. ಸದಸ್ಯರಾದ ಅಂಜನಾ ಹೆಬ್ಬಾಳಿ, ಮಹಾಂತೇಶ ಮಗದುಮ್ಮ, ಕಾಲೇಜು ಸುಧಾರಣಾ ಸಮಿತಿ ಉಪಾಧ್ಯಕ್ಷ ಮಹಾವೀರ ಭೂ ಸಣಕಿ, ಹಾಗೂ ಸದಸ್ಯರು, ಸುಧೀರ ಗಿರಿಗೌಡರ, ಸುಭಾಷ ಹೆಬ್ಬಾಳಿ, ಬಾಳಗೌಡ ಪಾಟೀಲ, ಗ್ರಾ,ಪಂ,ಅಧ್ಯಕ್ಷೆ ಜ್ಯೋತಿ ಕುಂಬಾರ, ರಾಮಪ್ಪ ಕಡಲಗಿ, ಮಾಜಿ ಶಾಲಾ ಸುಧಾರಣಾ ಸಮಿತಿಯ ಬಾಬು ಕಡಲಗಿ, ಬಾಳಗೌಡಾ ಪಾಟಿಲ,ಹಾಗೂ ಸರ್ವಸದಸ್ಯರು, ರಾಜು ಅವಟೆ, ಮಲ್ಲಪ್ಪ ಮುಗಳಿ, ಬಸೀರ ಲಾಡಖಾನ, ಶಾಂತಿನಾಥ ಪಾಟೀಲ, ಇನ್ನೀತರರು ಉಪಸ್ಥಿತರಿದ್ದರು. ಉಪನ್ಯಾಸಕಿ ವಿಜಯಲಕ್ಷ್ಮೀ ಮಿರ್ಜಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಎಸ್.ಕೆ. ಬರಗಾಲಿ, ವರದಿ ವಾಚನ ಮಾಡಿದರು.ಉಪನ್ಯಾಸಕ ಎಮ್.ಎಮ್. ಬಡಕುಂದ್ರಿ ಪ್ರಮಾಣವಚನ ಬೋದಿಸಿದರು. ರವಿಕುಮಾರ ದೊಡ್ಡಮನಿ ವಂದಿಸಿದರು. ವಿದ್ಯಾರ್ಥಿಗಳಾದ ನಯನ ಬೊಂಗಾಲೆ, ಪೂರ್ಣ ಮಾ ಜರಲಿ, ಸ್ವಾತಿ ತಳವಾರ, ಲಕ್ಷ್ಮೀ ಮುಗಳಿ, ಭಾಗಿರಥಿ ಪಾಟೀಲ, ಉಪನ್ಯಾಸಕ ಜಯಶ್ರೀ ಮಗದುಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾಲೇಜು ಸುಧಾರಣಾ ಸಮಿತಿ ಸದಸ್ಯರುಗಳಿಗೆ ಹಾಗೂ ಗಣ್ಯರಿಗೆ ಸತ್ಕರಿಸಲಾಯಿತು